ಹುಬ್ಬಳ್ಳಿ: ಹೂಬಳ್ಳಿ ಕವಿ ಬಳಗದಿಂದ ’ಸದಾ ಸ್ಮರಣೀಯರು’ ಪುಸ್ತಕ ಬಿಡುಗಡೆ

Source: shabbir | By Arshad Koppa | Published on 18th September 2017, 8:29 AM | State News |

ಹುಬ್ಬಳ್ಳಿಯಲ್ಲಿ ಸದಾ ಸ್ಮರಣೀಯರು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಹೂಬಳ್ಳಿ ಕವಿ ಬಳಗದಿಂದ ಜೆ.ಸಿ.ನಗರದ ಪಾಲಿಕೆ ನೌಕರರ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾಕ್ಟರ್ ಗೋವಿಂದ ಮಣ್ಣೂರ ಅವರು ಜೀವಮಾನ ಸಾಧನೆ ಮಾಡಿದ ಗಣ್ಯರ ಕುರಿತು ಬರೆದ ಬರಹಗಳ ಸಂಕಲನ ಸದಾ ಸ್ಮರಣಿಯರು ಪುಸ್ತಕವನ್ನು ಆರೋಗ್ಯ ಸಚಿವ ರಮೇಶಕುಮಾರ  ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶಕುಮಾರ , ಓಟಬ್ಯಾಂಕ್ ರಾಜಕಾರಣಿಗಳ ಕೈಯಲ್ಲಿ ಸಿಲುಕಿ ದೇಶ ಒದ್ದಾಡುತ್ತಿದೆ ಎಂದರು. ಸ್ವಾರ್ಥಕ್ಕಾಗಿ ಬ್ರಾಹ್ಮಣ್ಯವನ್ನು ಜಾತಿ ಮಾಡಲಾಗಿದೆ. ವಿಧವೆಯರನ್ನು ಅಶುಭ ಎನ್ನುವ ಸಂಪ್ರದಾಯ ಕೊನೆಯಾಗಬೇಕು ಎಂದರು. ಕಮ್ಯುನಿಸ್ಟ್ ಪಾರ್ಟಿಯಲ್ಲಿ ಬ್ರಾಹ್ಮಣರಿದ್ದಾರೆ. ಅವರನ್ನು ವಿರೋಧಿಸುವ ಆರ್ ಎಸ್ ಎಸ್ ನಲ್ಲಿಯೂ ಬ್ರಾಹ್ಮಣರು ಇದ್ದಾರೆ. ತುಂಬು ಗರ್ಭಿಣಿ ಯನ್ನು ಕಾಡಿಗೆ ಕಳುಹಿಸಿದ ರಾಮನ ಬಗ್ಗೆ ಸಿಟ್ಟಿದೆ. ಪ್ರಜೆಗಳನ್ನು ಸಮರ್ಪಕವಾಗಿ ಪರಿಪಾಲಿಸುತ್ತಿದ್ದ ರಾವಣ ನನಗೆ ಇಷ್ಟ ಎಂದು ರಮೇಶಕುಮಾರ್ ಹೇಳಿದ್ದಾರೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...