ಹುಬ್ಬಳ್ಳಿ:ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ-ಇಬ್ಬರು ಕುಖ್ಯಾತ ಅಂತರರಾಜ್ಯ ಕಳ್ಳರ ಬಂಧನ.

Source: so english | By Arshad Koppa | Published on 11th August 2017, 9:12 AM | State News | Special Report |

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣ ತಿನಿಸಿ, ಮನೆ ಕಳ್ಳತನ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ, ಇಬ್ಬರು ಕುಖ್ಯಾತ ಅಂತರ ರಾಜ್ಯ ಮನೆ ಕಳ್ಳರನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 


ಒಟ್ಟು 42 ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಳಗಾವಿ ಮೂಲದ ಪ್ರಕಾಶ್ ಪಾಟೀಲ್, ಗೋವಾ ಮೂಲದ ರವಿ ಧನರಾಜ್ ನನ್ನ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಂಗರಾಜ್ಯ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳಿಂದ 23 ಲಕ್ಷ ಮೌಲ್ಯದ 832  ಗ್ರಾಂ ಚಿನ್ನ ಆಭರಣ, ಒಂದು ಕೇಜಿ ಬೆಳ್ಳಿ.
ಒಂದು ಮೇಡ್ ಇನ್ ಯುಎಸ್ ಎ ಪಿಸ್ತೂಲ್.(7.65 ಎಂ.ಎಂ) 
ಮೂರು ಜೀವಂತ ಗುಂಡುಗಳು,
ಬಜಾಜ್ ಬೈಕ್ , ನಾಲ್ಕು ಮೊಬೈಲ್. ಮನೆಗಳ್ಳತನಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 
ಆರೋಪಿಗಳು ಹುಬ್ಬಳ್ಳಿಯ ಲ್ಲಿ ಬಾಡಿಗೆ ಮನೆ ಮಾಡಿ, ಒಂಟಿ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದರು, ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ, ದರೋಡೆ ಮಾಡುತ್ತಿದ್ದರು. ಯಾರಾದರು ಕಂಡ್ರೆ ಅಂತವರನ್ನ ಪಿಸ್ತೂಲ್ ತೊರಿಸಿ ಬೆದರಿಸಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದೇ ಹುಬ್ಬಳ್ಳಿಯ 
ಸಿಸಿಬಿ ಸರ್ಕಲ್ ಇನ್ಸ್ಪೆಕ್ಟರ್  ಮಹಾಂತೇಶ್ ಸಜ್ಜನ್ ಅವರ ನವನಗರ ಮನೆ ದರೋಡೆ ಸೇರಿದಂತೆ ಅವಳಿ ನಗರದಲ್ಲಿ ಎರಡು ಮನೆಗಳ್ಳತನ ಪ್ರಕರಣದಲ್ಲಿ ಅವಳಿ ನಗರ ಪೊಲೀಸರಿಗೆ ಬೇಕಾಗಿದ್ದರು.  ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದರು. ರಾಜ್ಯದಲ್ಲಿ 10 ಮನೆಗಳ್ಳತನ ಪ್ರಕರಣಗಳು, ಮಹಾರಾಷ್ಟ್ರ ರಾಜ್ಯದಲ್ಲಿ 10 ಹಾಗೂ ಗೋವಾ ರಾಜ್ಯದ 6 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆರೋಪಿ ಗಳ ಬಂಧನದ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಧಾರವಾಡ ಉಪ ‌ಪೋಲೀಸ್ ಆಯುಕ್ತ, ಪಿಎಸ್  ನ್ಯಾಮಗೌಡ ಆರೋಪಿಗಳ ಬಂಧಿಸಿದ ಪೊಲೀಸರಿಗೆ ಬಹುಮಾನ  ಘೋಷಿಸಿದರು.

Read These Next

ಕೋಲಾರ: ಪೋಷಕರ ಪತ್ತೆಗಾಗಿ ಮನವಿ

ಕೋಲಾರ,: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಇವರ ವತಿಯಿಂದ ಸರ್ಕಾರಿ ಬಾಲಕರ ಬಾಲಮಂದಿರ, ...

ರೋಟರಿ ಸಂಸ್ಥೆ ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ- ಮಂಜುನಾಥರೆಡ್ಡಿ

ಶ್ರೀನಿವಾಸಪುರ: ರೋಟರಿ ಸಂಸ್ಥೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದ್ದು ಸಮಾಜ ಸೇವೆಗೆ ಎಲ್ಲರನ್ನು ...

ಗೋವುಗಳ ರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿರುವುದು ಘೋರ ಅಪರಾಧ; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ...

ಮುಸ್ಲಿಮರೊಂದಿಗೆ ಮಾತಾಡಿ !

ಹೊಸದಿಲ್ಲಿ: ಜಗತ್ತಿನ ಕೆಲವೆಡೆ ಧರ್ಮಗಳ ನಡುವೆ ಸಂಘರ್ಷಗಳು ಹೆಚ್ಚುತ್ತಿರುವಂತೆಯೇ ಭಾರತದಲ್ಲಿ ಟ್ವಿಟರ್ ಮೂಲಕ ಧರ್ಮಗಳನ್ನು ...

ಎರಡು ಪಂಚಾಯತ್ ಜನರಿಗೆ ಒಂದೇ ನ್ಯಾಯಬೆಲೆ ಅಂಗಡಿ:ಸಮರ್ಪಕ ರೀತಿಯಲ್ಲಿ ಪಡಿತರ ಸಿಗುವಂತೆ ಪಡಿತರದಾರರಿಂದ ಆಗ್ರಹ. 

ಭಟ್ಕಳ: ಇಲ್ಲಿನ ಮಾವಳ್ಳಿ-1ರ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 2 ...