ಹುಬ್ಬಳ್ಳಿ: ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ರಜತ ಮಹೋತ್ಸವ

Source: balanagoudra | By Arshad Koppa | Published on 5th January 2017, 8:50 AM | State News |

ಹುಬ್ಬಳ್ಳಿ-ಜನೇವರಿ- 3: ವೀರಶೈವ ಧರ್ಮದ ಮೂಲ ಗುರುಪೀಠವಾಗಿರುವ ಬಾಳೆಹೊನ್ನೂರು ಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಪೀಠಾರೋಹಣ ರಜತ ಮಹೋತ್ಸವ ಹಾಗೂ ಷಷ್ಟ್ಯಬ್ಧಿಪೂರ್ತಿ ಸಮಾರಂಭ ಮಾರ್ಚ 10 ರಂದು ಸಂಯೋಜಿಸಲಾಗಿದೆ  ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
    ಅವರು ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಪೀಠಾರೋಹಣ ರಜತ ಮಹೋತ್ಸವ ಪೂರ್ವಭಾವಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
    ಜನೇವರಿ 16 ರಿಂದ ಪ್ರಾರಂಭಗೊಳ್ಳಲಿರುವ ಸಮಾರಂಭ ಮಾರ್ಚ 14 ರವರೆಗೆ ನಡೆಯುತ್ತದೆ.             ಈ ಸಂದರ್ಭದಲ್ಲಿ ನಿತ್ಯ ಅತಿರುದ್ರ, ತ್ರಿಕೋಟಿ ಬಿಲ್ವಾರ್ಚನೆ, ತ್ರಿಕೋಟಿ ಜಪಯಜ್ಞ, ಚೌಡೇಶ್ವರಿಗೆ ಕುಂಕುಮಾರ್ಚನೆ ನಡೆಯುವುದು. ಮಾರ್ಚ 10 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭಧ್ರಸ್ವಾಮಿ ಮಹಾರಥೋತ್ಸವ ನಡೆಯಲಿದ್ದು ಇದೇ ಪರ್ವಕಾಲದಲಿ ಪೀಠಾರೋಹಣ ರಜತ ಮಹೋತ್ಸವ, ಷಷ್ಟ್ಯಬ್ಧಿಪೂರ್ತಿ ಸಮಾರಂಭ ಸಂಯೋಜಿಸಲಾಗಿದೆ ಎಂದ ಜಗದ್ಗುರುಗಳು ಇದೇ ಸಂದರ್ಭದಲ್ಲಿ      ಶ್ರೀ ಸೋಮೇಶ್ವರ ಶಿಲಾ ದೇಗುಲ, ಶ್ರೀ ಜಗದ್ಗುರು ರಂಭಾಪುರೀಶ ನಿವಾಸ ಉದ್ಘಾಟನೆಗೊಳ್ಳಲಿದೆ. ಶ್ರೀಪೀಠ ಪರಂಪರೆಯ ಬರುವ 105 ಪರಮಾಚಾರ್ಯರ ಗದ್ದುಗೆ ನಿರ್ಮಾಣವಾಗುತ್ತಿದ್ದು ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗುವುದೆಂದರು. ನಿತ್ಯ ಇಷ್ಟಲಿಂಗ ಮಹಾಪೂಜೆ ಏರ್ಪಡಿಸಿದ್ದು ಸಾಮೂಹಿಕ ಶಿವದೀಕ್ಷಾ ಹಾಗೂ ಕೊನೆಯಲ್ಲಿ ಸಾಮೂಹಿಕ ವಿವಾಹ ಸಮಾರಂಭಗಳನ್ನು ಆಯೋಜಿಸಲಾಗುವುದು. ಈ ಎಲ್ಲ ಮಹತ್ಕಾರ್ಯಗಳಿಗೆ ಆಗಮಿಸುವ ಭಕ್ತ ಸಮುದಾಯಕ್ಕೆ ಅನ್ನ ದಾಸೋಹ ಹಾಗೂ ವಸತಿ ಸೌಕರ್ಯ ಒದಗಿಸುವ ಅವಶ್ಯಕತೆಯಿದೆ. ಎಲ್ಲ ಕಾರ್ಯಗಳಿಗೆ ನಾಡಿನ ಎಲ್ಲ ಭಕ್ತಾಭಿಮಾನಿಗಳು ಉದಾರವಾಗಿ ತನು ಮನದಿಂದ ಸೇವೆ ಸಲ್ಲಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕೆಂದು ಕರೆಯಿತ್ತರು. 
    ಈ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸೂಡಿ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಕೆಳದಿಯ ಡಾ. ಮಹೇಶ್ವರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಶಿರಕೋಳ ಗುರುಸಿದ್ಧ ಶಿವಾಚಾರ್ಯರು, ಮುತ್ನಾಳದ ಶಿವಾನಂದ ಶಿವಾಚಾರ್ಯರು, ಕಲಘಟಗಿ ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯರು, ಅಬ್ಬಿಗೇರಿ ಸೋಮಶೇಖರ ಶಿವಾಚಾರ್ಯರು,  ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು ಹಾಗೂ ನವಲಗುಂದ, ಬ್ಯಾಹಟ್ಟಿ ಶ್ರೀಗಳು ರಜತ ಮಹೋತ್ಸವ ಸಮಾರಂಭದ ವೈಶಿಷ್ಠ್ಯಗಳನ್ನು ಭಕ್ತ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟರು. 
    ಈ ಸಮಾರಂಭದ ಪ್ರಾಸ್ತಾವಿಕ ನುಡಿಯನ್ನು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹುಬ್ಬಳ್ಳಿ ತಾಲೂಕ ಘಟಕದ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಪಾರ್ವತಿ ಮಹಿಳಾ ಅಧ್ಯಕ್ಷಿಣ  ಇಂಧುಮತಿ ಮಾನ್ವಿ, ಶ್ರೀ ರಂಭಾಪುರೀಶ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ, ಬಸವರಾಜ ಸುಳ್ಳದ, ವಿ.ಜಿ.ಪಾಟೀಲ, ಕಮ್ಮಾರ, ಕವಲೂರು, ಚಿಕ್ಕಮಠ, ಡಾ|| ಎನ್.ಎ. ಚರಂತಿಮಠ, ಆರ್.ಎಂ.ಹಿರೇಮಠ, ಗದುಗಿನ ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ವೀರೇಶ ಕೂಗು, ಶಾರದಮ್ಮ ಹಿರೇಮಠ, ಧಾರವಾಡದ ಡಾ|| ಎಸ್.ಆರ್. ರಾಮನಗೌಡರ, ಬಾಗಲಕೋಟೆಯ ವೀರೇಶ ಹಿರೇಮಠ ಪಂ. ರಾಜಗುರು ಗುರುಸ್ವಾಮಿ ಕಲಕೇರಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...