ಹುಬ್ಬಳ್ಳಿ: ಅರೆಬರೆ ನಡೆಸಿದ ಕಾಮಗಾರಿ-ನೀರಿನೊಂದಿಗೆ ಕೊಚ್ಚಿ ಹೋದ ಮಣ್ಣು-ಜೆಡಿಯು ಪ್ರತಿಭಟನೆ

Source: so english | By Arshad Koppa | Published on 18th September 2017, 8:29 AM | State News |

ಹುಬ್ಬಳ್ಳಿ:  ಹುಬ್ಬಳ್ಳಿ ಧಾರವಾಡ ದಲ್ಲಿ  ನಿರಂತರ ನೀರು, ಒಳಚರಂಡಿ ಹಾಗೂ ಇನ್ನಿತರೆ ಕಾಮಗಾರಿಗಾಗಿ ನಗರದೆಲ್ಲೆಡೆ ರಸ್ತೆಗಳನ್ನು ಅಗೆದು, ಅರೆಬರೆ ಮುಚ್ಚಲಾಗಿದೆ. ಈ ಸಡಿಲ ಮಣ್ಣು ಕಳೆದ ವಾರ ಸುರಿದ ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದ್ದು ರಸ್ತೆಯಲ್ಲಿ ತಗ್ಗುಗಳೆಲ್ಲವೂ ಬಾಯಿ ತೆರೆದುಕೊಂಡಿವೆ.ಇದರಿಂದ ಜನರಿಗೆ ದಿನೆ ದಿನೆ ತುಂಬಾ ತೊಂದರೆಯಾಗುತ್ತಿದೆ ಹೀಗಾಗಿ ಆದಷ್ಟು ಬೇಗ ಹುಬ್ಬಳ್ಳಿ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಜೆಡಿಯು ಪಕ್ಷದಿಂದ ಇಂದು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತ ದಲ್ಲಿ ಪ್ರತಿಭಟನೆ ಮಾಡಿದರು.
 ಹುಬ್ಬಳ್ಳಿ ಧಾರವಾಡ ದಲ್ಲಿ  ನಿಧಾನಗತಿಯಾಗಿ  ಬಿಆರ್ ಟಿಎಸ್ ಕಾಮಗಾರಿ ನಡೆಯುತ್ತಿದ್ದು , ಇದರಿಂದಾಗಿ ವಾಹನಗಳಲ್ಲಿ ಓಡಾಡುವ ಜನರಿಗೆ ತುಂಬಾ ತೊಂದರೆ ಆಗುತ್ತಿದೆ.ದೂಳು ತಗ್ಗು ಗುಂಡಿಗಳು ಟ್ರಾಫಿಕ್ ಸಮಸ್ಯೆ ಹೀಗೆ ಹಲವಾರು ಸಮಸ್ಯೆ ಗಳು ಇದ್ದರೂ ಜನಪ್ರತಿನಿದಿಗಳು ಇತ್ತ ಗಮನಹರಿಸುತ್ತಿಲ್ಲಾ ,ಮುಂದಿನ ದಿನಗಳಲ್ಲಿ ರಸ್ತೆಗಳನ್ನು ಸುಧಾರಣೆ ಮಾಡಿಲಿಲ್ಲ ಅಂದರೇ ಜೆಡಿಯು ಪಕ್ಷದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆ ಯಲ್ಲಿ ,ಎನ್ ಐಬತ್ತಿ.ರಾಜು ನಾಯಕವಾಡಿ, ಪೈರೊಜ್ ಖಾನ್ ಇನ್ನಿತರರು ಇದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...