ಫೇಸ್ಬುಕ್ ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ; ದೂರು ದಾಖಲು

Source: sonews | By sub editor | Published on 27th July 2018, 11:57 PM | Coastal News | Don't Miss |

ಮೂಡುಬಿದಿರೆ: ದುಬೈನ ಅಬುಧಾಬಿಯಲ್ಲಿದ್ದುಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಈ ಹಿಂದೆ ವ್ಯಕ್ತಿಗಳ ವೈಯಕ್ತಿಕ ಮಾನಹಾನಿ ನಡೆಸುತ್ತಿದ್ದ ಆರೋಪಿಯು ಇದೀಗ ಹಿಂದೂ ದೇವತೆಗಳ ಅರೆನಗ್ನ ಚಿತ್ರಗಳನ್ನು ಪೇಸ್‌ಬುಕ್‌ನಲ್ಲಿ ಹಾಕಿದ್ದಲ್ಲದೆ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವ ಬಗ್ಗೆ ದೂರು ದಾಖಲಾಗಿದೆ.

 

ಸುಳ್ಯ ತಾಲೂಕಿನ ಮುರಳಿ ಗ್ರಾಮದ ನಿವಾಸಿ ಇಬ್ರಾಹಿಂ ಖಲೀಲ್ ಎಂಬಾತ ಪ್ರಕರಣದ ಆರೋಪಿ. ಸದ್ಯ ಈತ ದುಬೈನ ಅಬುಧಾಬಿಯಲ್ಲಿ ನೆಲೆಸಿದ್ದು, ಈ ಹಿಂದೆ ಈತ ಹಿಂದೂ-ಮುಸ್ಲಿಂ ವ್ಯಕ್ತಿಗಳ ಹೆಸರಿನ ಸಹಿತ ಹಲವು ನಕಲಿ ಪೇಸ್‌ಬುಕ್ ಖಾತೆ ತೆರೆದು ಕೋಮು ಪ್ರಚೋದನಕಾರಿ ಸಂದೇಶ ರವಾನಿಸುತ್ತಿದ್ದ ಎಂದು ಈ ಬಗ್ಗೆ ಮೂಡುಬಿದಿರೆ ಪೋಲಿಸ್ ಠಾಣೆ, ಸೈಬರ್ ಕ್ರೈಂ ಠಾಣೆ ಸಹಿತ ಹಲವು ಕಡೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆರೋಪಿಯು ದೂರುದಾರರಾಗಿದ್ದ ಲತೀಫ್ ಎಂಬವರ ತಂದೆಯ ಚಿತ್ರವನ್ನೇ ಬಳಸಿಕೊಂಡು, ದೂರು ಹಿಂಪಡೆಯದಿದ್ದಲ್ಲಿ ಇನ್ನಷ್ಟು ತೊಂದರೆ ಕೊಡುವುದಾಗಿ ಬೆದರಿಸಿದ್ದ ಮಾತ್ರವಲ್ಲ ಕರೆ ಮಾಡಿ ನಿನ್ನನ್ನು ಮುಗಿಸಲು ಡೀಲ್ ನೀಡಿರುವುದಾಗಿ ಬೆದರಿಸಿದ್ದ ಎಂದು ದೂರಲಾಗಿದೆ.

ಆರೋಪಿಯು ವಿರೂಪಗೊಳಿಸಿರುವ ಹಿಂದೂ ದೇವತೆಗಳ ಚಿತ್ರವನ್ನು ಮತ್ತು ಅವಹೇಳನಕಾರಿಯಾಗಿ ಪ್ರಕಟಿಸಿರುವ ಬರಹಗಳನ್ನು ದೂರುದಾರ ಲತೀಫ್ ಹೆಸರಿನ ನಕಲಿ ಖಾತೆಗೂ ಶೇರ್ ಮಾಡಿದ್ದು ಹಿಂದೂಗಳು ಲತೀಫ್ ಅಂಗಡಿಗೆ ಹೋಗಬೇಡಿ ಎಂದು ಕಥೆಕಟ್ಟಿದ್ದಾನೆ. ಮಾತ್ರವಲ್ಲ ಹಿಂದೂ ದೇವತೆಗಳ ಕೈಯಲ್ಲಿರುವ ಆಯುಧಗಳ ಮೂಲಕ ಸಿಕ್ಸ್ ಬಾರಿಸಬಹುದು ಎಂದಿದ್ದಾನೆ. ಜೊತೆಗೆ ಬೇರೆ ಖಾತೆಗಳಲ್ಲಿ ಮುಸ್ಲಿಂ ಧರ್ಮದ ಬಗ್ಗೆಯೂ ಅವಹೇಳನ ಬರಹ ಬರೆದಿದ್ದು, ದರ್ಗಾಗಳನ್ನು ಉಚಿತವಾಗಿ ನೆಲಸಮ ಮಾಡಲು ನಾನಿದ್ದೇನೆ ಎಂದಿದ್ದಾನೆ.

ಕಮೀಷನರ್‌ನಿಂದ ಕ್ರಮದ ಭರವಸೆ

ಪ್ರಕರಣದ ಬಗ್ಗೆ ಮೂಡುಬಿದಿರೆ ಲತೀಫ್ ಸಹಿತ ಹಲವು ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಲತೀಫ್ ಖುದ್ದು ಮಂಗಳೂರು ಕಮಿಷನರ್‌ನ್ನು ಭೇಟಿಯಾಗಿ ದೂರು ನೀಡಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದು, ಈಗಾಗಲೇ ಈತನ ಹಲವು ನಕಲಿ ಖಾತೆಗಳನ್ನು ಸೈಬರ್ ಕ್ರೈಂ ಪೋಲಿಸರು ಪತ್ತೆ ಹಚ್ಚಿದ್ದು, ಈತನ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

Read These Next

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...