ಜಮಾಅತೆ ಇಸ್ಲಾಮೀ ಹಿಂದ್ ಉಡುಪಿಯಿಂದ  ವಿಕಲಚೇತನ ವಿದ್ಯಾರ್ಥಿಗಳಿಗೆ ನೆರವು

Source: sonews | By Staff Correspondent | Published on 2nd September 2018, 10:09 PM | Coastal News | State News | Don't Miss |

ಉಡುಪಿ : ಸರಳೇ ಬೆಟ್ಟು ವಾರ್ಡಿನ ಗಣೇಶಬಾಗ್ ನಿವಾಸಿ ಪ್ರಮೀಳಾ ಪೂಜಾರಿ ಎಂಬವರ ಮಕ್ಕಳಾದ ಧನುಷ್(19) ಮತ್ತು ದರ್ಶನ್(16) ಎಂಬ  ವಿಕಲಚೇತನ ಸಹೋದರರಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿಯಿಂದ ಲ್ಯಾಪ್ ಟಾಪ್ ಹಾಗೂ ವೀಃಲ್ ಚೇರ್‍ಅನ್ನು ರವಿವಾರ ನೀಡಲಾಯಿತು.

ಧನುಷ್ ಎಸ್ ಎಸ್ ಎಲ್ ಸಿ ಮುಗಿಸಿ ಮಣಿಪಾಲ ಎಮ್.ಐ.ಟಿಯಲ್ಲಿ ಪ್ರಥಮ ಡಿಪ್ಲೊಮೋ ಕಂಪ್ಯೂಟರ್ ಸಯನ್ಸ್ ಕಲಿಯುತ್ತಿದ್ದು ಹಾಗೂ ದರ್ಶನ್ ಮಣಿಪಾಲ ಜೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಮುಂದುವರಿಸಲು ವಿಕಲಚೇತನವು ಅಡೆಚಣೆಯಾಗಿತ್ತು.

ಪ್ರಮೀಳಾ ಪೂಜಾರಿಯವರು ಎರಡೂ ಮಕ್ಕಳನ್ನು ಮಣಿಪಾಲದ ಆಸ್ಪತ್ರೆಯಲ್ಲಿ ವೈದ್ಯರ ಪರಿಕ್ಷೆಗೆ ಒಳಪಡಿಸಿದ್ದರು. ಅವರಿಗೆ ಕಾಯಿಲೆ ಇದೆ ಎಂಬುದು ಪತ್ತೆಯಾಗಿತ್ತು. ಸಾಕಷ್ಟು ಚಿಕಿತ್ಸೆ ನೀಡಿದ್ದರೂ ಈವರೆಗೆ ಗುಣಮುಖರಾಗಿಲ್ಲ. ಇದೀಗ ಮಕ್ಕಳು ಇತರರ ಸಹಾಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಕುಟುಂಬವು ಸರಕಾರದಿಂದ ಮಂಜೂರಾದ 660 ಚದರ ಅಡಿಯ ಮನೆಯಲ್ಲಿ ವಾಸವಾಗಿದೆ. ಮಕ್ಕಳನ್ನು ಕಾಲು ದಾರಿಯಲ್ಲಿ ಹೊತ್ತುಕೊಂಡೇ ಗುಡ್ಡವೇರಬೇಕಾದ ಇವರಿಗೆ ಫೋಲ್ಡಿಂಗ್ ವೀಃಲ್ ಚೇರ್‍ನ ಅಗತ್ಯವಿತ್ತು. ಪ್ರತಿಭಾವಂತರಾಗಿರುವ ಇವರು ಮನೆಯಲ್ಲೇ ಕುಳಿತು ಕಂಪ್ಯೂಟರಿನಲ್ಲಿ ಉದ್ಯೊಗ ಮಾಡುವ ಇರಾದೆ ಹೊಂದಿದ್ದರಿಂದ ಕಂಪ್ಯೂಟರಿನ ಅಗತ್ಯವೂ ಇತ್ತು. ಇದನ್ನು ಮನಗಂಡ ಜಮಾಅತೆ ಇಸ್ಲಾಮೀ ಹಿಂದ್ ಲ್ಯಾಪ್ ಟಾಪ್ ಹಾಗೂ ವೀಃಲ್ ಚೇರ್‍ಅನ್ನು ಹಸ್ತಾಂತರಿಸಲಾಯಿತು. ಅವರ ಮನೆಯಲ್ಲೇ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಮಲ್ಪೆ, ಸೋಮಪ್ಪ ಕೋಟ್ಯಾನ್, ಸರಳಬೆಟ್ಟು ಮಣಿಪಾಲ, ಇದ್ರಿಸ್ ಹೂಡೆ, ಉಡುಪಿ ಜಮಾಅತ್‍ನ ಹಂಗಾಮಿ ಅಧ್ಯಕ್ಷ ಅಬ್ದುಲ್ ಅಝೀಝ್ ಆದಿಉಡುಪಿ, ವೆಲ್ಫೇರ್ ಪಾರ್ಟಿಯ ಅಬ್ದುಲ್ ಅಝೀಝ್ ಉದ್ಯಾವರ, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ, ಫೈರೋಜ್ ಮನ್ನಾ, ನಿಸಾರ್ ಅಹಮದ್, ಎಸ್.ಐ.ಓ ಉಡುಪಿ ಅಧ್ಯಕ್ಷ ಫಾಝಿಲ್, ಅಬ್ದುಲ್ ಸಮೀ ಉಡುಪಿ ಇವರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...