ಫೇಬ್ರುವರಿ ತಿಂಗಳಿನಿಂದ ಮುಂಡಗೋಡದಲ್ಲಿ ಹೆಲ್ಮೇಟ್ ಕಡ್ಡಾಯ

Source: sonews | By Staff Correspondent | Published on 26th January 2019, 6:30 PM | Coastal News |

ಮುಂಡಗೋಡ  : ಫೇಬ್ರುವರಿ ತಿಂಗಳಿನಿಂದ ದ್ವಿಚಕ್ರವಾಹನಗಳ ಸವಾರರು  ಶಿರರಕ್ಷಕ (ಹೆಲ್ಮೇಟ್) ಧರಿಸುವುದು ಕಡ್ಡಾಯ ಇದು ದ್ವೀಚಕ್ರ ವಾಹನ ಸವಾರರ ಪ್ರಾಣ ಹಾಗೂ ದೈಹಿಕ ಅಂಗಗಳ ರಕ್ಷಣೆಯೇ ನಮ್ಮ ಮೂಲ ಉದ್ದೇಶವಾಗಿದೆ  ಎಂದು ಶಿರಸಿ ಉಪವಿಭಾಗದ ಡಿಎಸ್‍ಪಿ ಜಿ.ಟಿ.ನಾಯಕ್ ಪತ್ರಕರ್ತರಿಗೆ ತಿಳಿಸಿದರು.

ಯುವಕರನ್ನು ಕಳೆದುಕೊಂಡು ಕತ್ತಲೆಯಲ್ಲಿ, ಆಶ್ರಯವಿಲ್ಲದೇ ಎಷ್ಟು ಜೀವಗಳು ದುಃಖದಲ್ಲಿ ಜೀವನ ಸಾಗಿಸುತ್ತಿದ್ದಾರೆ ಹೀಗೆ ಮುಂದೆಯು ಆಗಬಾರದು ಎಂಬ ಉದ್ದೇಶದಿಂದ ಹೆಲ್ಮೇಟ್ ಕಡ್ಡಾಯ ಮಾಡಲಾಗುತ್ತಿದೆ ಎಂದರು. 

ದ್ವಿಚಕ್ರ ವಾಹನಗಳ  ಅಪಘಾತಗಳಲ್ಲಿ ಸವಾರರು ಇತರೆ ಅಂಗಗಳ ಪೆಟ್ಟು ಬಿದ್ದು ಸಾವಿಗೀಡಾಗುವುದು ತುಂಬಾ ವಿರಳ ಆದರೆ ತಲೆಗೆ ಪೆಟ್ಟು ಬಿದ್ದು ಸಾವಿಗೀಡಾಗುತ್ತಿರುವವರ ಸಂಖ್ಯೆ ಬಹಳ. ಅಪಘಾತಗಳಲ್ಲಿ ಯುವಕರ ಸಾವು ಸಿಂಹಪಾಲು ಎಂದು ಹೇಳಿದರು. ಆದ್ದರಿಂದ ಹೆಲ್ಮೇಟ್ ಧರಿಸುವದರಿಂದ ಪ್ರಾಣ ಹಾನಿ ತಡೆಯ ಬಹುದು ಮುಂಡಗೋಡದಲ್ಲಿ ಕಳೆದ ವರ್ಷ ದ್ವೀಚಕ್ರ ವಾಹನಗಳ ಅಪಘಾತಗಳಲ್ಲಿ 16 ಯುವಕರು ಸಾವಿಗೀಡಾಗಿದ್ದಾರೆ ಎಂದರು,

ಯುವಕರು ನಿಷ್ಕಾಳಜಿಯಿಂದ,ಅತಿವೇಗದಿಂದ, ಮಾತನಾಡುತ್ತಾ, ಅತ್ತಿಂದಿತ್ತ ನೋಡುವುದು ವಾಹನ ಚಲಾಯಿಸುವುದು ಮುಂದಿನ ವಾಹನವನ್ನು ಓವರಟೇಕ್ ಮಾಡುವ ಹುಚ್ಚು ಹವ್ಯಾಸ ದಿಂದ   ವಾಹನ ಚಾಲನೆ ಮಾಡುತ್ತಿರುವುದೇ ಅಪಘಾತ ಸಂಭವಿಸಲು ಮುಖ್ಯ ಕಾರಣ ಲೈಸನ್ಸ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸುವ ಯುವಕರ ಪಾಲಕರು ಬಂದು ತಮ್ಮ ಯುವಕನಿಗೆ ವಾಹನ ಚಾಲನೆ ಮಾಡಲು ನೀಡುತ್ತಿದ್ದೇನೆ ಹಾಗೂ ವಾಹನದ ವೇಗದ ಮಿತಿ 50ಕಿಮಿ ಕ್ಕಿಂತ ಹೆಚ್ಚು ಓಡಿಸುವುದಿಲ್ಲ ಹಾಗೇನಾದರು ಯುವಕ ವೇಗದ ಮಿತಿ ದಾಟಿದರೆ ದಂಡಕ್ಕೆ ನಾವೇ ಬಾಧ್ಯಸ್ಥರಾಗುತ್ತೇವೆ ಎಂದು ಪಾಲಕರು ಪೊಲೀಸ ಠಾಣೆಯಲ್ಲಿ ಬರೆದುಕೊಡಬೇಕು ಇನ್ಸೂರೆನ್ಸ ಇಲ್ಲದ ವಾಹನಗಳನ್ನು ಓಡಿಸಲೇ ಬಾರದು ಎಂದರು.

ಅಪ್ರಾಪ್ತ 18 ವಯಸ್ಸಿನೊಳಗೆ ಇರುವ ಯುವಕರಿಗೆ ವಾಹನ ನೀಡುವುದೇ ಅಪರಾಧ. ಅಂತವರು ವಾಹನ ಚಾಲನೆ ಮಾಡುವುದನ್ನು ಕಂಡು ಬಂದರೆ ನೇರವಾಗಿ ವಾಹನ ನೀಡಿದವರೇ ಆರೋಪಿಗಳಾಗುತ್ತಾರೆ ಇವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ.

ಗ್ರಾಮೀಣ ಒಳ ರಸ್ತೆಗಳಲ್ಲಿ ಹೆಲ್ಮೇಟ್ ಧರಿಸದಿದ್ದರು ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ವಾಹನ ಚಾಲನೆ ಮಾಡುವವುರಿಗೆ ಹಲ್ಮೇಟ್ ಕಡ್ಡಾಯ. ಇದು ಸಾರ್ವಜನಿಕರ ಉಪಯೋಗಕ್ಕಾಗಿ ಸಾವು ತಡೆಯುವುದಕ್ಕಾಗಿ ಯುವಕರ ಸಾವಿನಿಂದ ಪಾಲಕರು ದುಃಖದಲ್ಲಿ ಜೀವನಸಾಗಿಸುತ್ತಿದ್ದಾರೆ ಇದನ್ನು ತಡೆಯುವುದೇ ನಮ್ಮ ಮೂಲ ಉದ್ದೇಶ ಎಂದರು.

ಮುಂಡಗೋಡ ನಲ್ಲಿ ಶಿರಸಿ-ಹುಬ್ಬಳ್ಳಿ ಹಾಗೂ ಯಲ್ಲಾಪುರ-ಬಂಕಾಪುರ ರಸ್ತೆಗಳಲ್ಲಿ ಸಂಚರಿಸುವ ದ್ವೀಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಹಾಕಲೇ ಬೇಕು. ಇಲ್ಲದಿದ್ದರೆ ಅಂತಹವರಿಗೆ ದಂಡ ಹಾಕುವುದು ಕಡ್ಡಾಯ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ಎಲ್ಲ ಸ್ಥರದ ಜನಪ್ರತಿನಿಧಿಗಳು ತಮಗೆ ಸಹಕಾರ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಪಿಆಯ್ ಶಿವಾನಂದ ಚಲವಾದಿ ಹಾಗೂ ಪಿಎಸೈ ಪೇಮಕುಮಾರ ಪಾಟೀಲ ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...