ಭಟ್ಕಳ: ‘ಶ್ರೀ ಹರ್ಷಾ ಗೃಹೋಪಯೋಗಿ ಅಮೋಘ ಸಂಗ್ರಹವುಳ್ಳ ನೂತನ ಮಳಿಗೆ ಉದ್ಘಾಟನೆ’

Source: S O News Service | By I.G. Bhatkali | Published on 4th November 2018, 12:06 AM | Coastal News | Don't Miss |

ಭಟ್ಕಳ: ಇಲ್ಲಿನ ಪಟ್ಟಣದ ಮುಖ್ಯರಸ್ತೆಯ ಶ್ರೀ ಹರ್ಷಾ ಇಲೆಕ್ಟ್ರಾನಿಕ್ ಅಪ್ಲಾಎನ್ಸ್‍ಸ್, ಫರ್ನಿಚರ್ಸ್, ಮೊಬೈಲ್ಸ್ ಇತ್ಯಾದಿಗಳ ಅಮೋಘ ಸಂಗ್ರಹವುಳ್ಳ ನೂತನ ಮಳಿಗೆಯನ್ನು ಶುಕ್ರವಾರದಂದು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು.

ಉದ್ಘಾಟನೆ ಮಾಡಿ ಮಾತನಾಡಿದ ಅವರು ಬೃಹತ ಪ್ರಮಾಣದ ಅಚ್ಚು ಕಟ್ಟಾಗಿ ಇಲೆಕ್ಟ್ರಾನಿಕ್ ಅಪ್ಲಾಎನ್ಸ್‍ಸ್, ಫರ್ನಿಚರ್ಸ್, ಮೊಬೈಲ್ಸ್ ಇತ್ಯಾದಿಗಳ ಅಮೋಘ ಸಂಗ್ರಹವುಳ್ಳ ನೂತನ ಮಳಿಗೆಯ ಅವಶ್ಯಕತೆಯಿದ್ದು, ಇಂದು ಲೋಕಾರ್ಪಣೆಗೊಂಡ ಶೋ-ರೂಮನಿಂದ ಸಾಮಾನ್ಯ ಜನರಿಂದ ಹಿಡಿದು ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಕೋರಿದರು.
 
ಆಮಂತ್ರಣ ತನ್ನಿ ಬಹುಮಾನ ಗೆಲ್ಲಿ ಅವಕಾಶ.
ಶ್ರೀ ಹರ್ಷಾದಲ್ಲಿ ವಸ್ತುಗಳನ್ನು ಖರೀದಿಸಿದರೆ ಕಾರನ್ನು ಗೆಲ್ಲುವ ಅವಕಾಶ ಅಥವಾ ವಿದೇಶ ಪ್ರವಾಸದ ಅದೃಷ್ಟ ಲಭಿಸಬಹುದು. ಅಲ್ಲದೇ ಈಗಾಗಲೇ ಶ್ರೀ ಹರ್ಷಾ ಆಮಂತ್ರಣ ಪತ್ರಿಕೆ ನೀಡುತ್ತಿದ್ದು ಅದರಲ್ಲಿ ಲಕ್ಕಿ ಕೂಪನ್‍ಗಳನ್ನು ನೀಡುತ್ತಿದೆ. ಯಾವುದೇ ಖರೀದಿ ಇಲ್ಲದೇ ಆಮಂತ್ರಣ ತಂದ ಗ್ರಾಹಕರು ಕೂಡ ಬಹುಮಾನಗಳನ್ನು ಗೆಲ್ಲುವ ಅವಕಾಶ ಶ್ರೀ ಹರ್ಷಾ ನೀಡಿದೆ. 

ಗ್ರಹೋಪಯೋಗಿ ಇಲೆಕ್ಟ್ರಾನಿಕ್ಸ್ ವಸ್ತುಗಳ ಬೃಹತ್ ಸಂಗ್ರಹ, ಉತ್ತಮ ಆಯ್ಕೆಗೆ ಪಟ್ಟಣದಲ್ಲಿ ನೂತನವಾಗಿ ಆರಂಭವಾಗಲಿರುವ ಶ್ರೀ ಹರ್ಷಾದಲ್ಲಿ ಉತ್ತಮ ಅವಕಾಶವಿದೆ. ರೆಫ್ರಿಜರೇಟರ್, ವಾಶಿಂಗ್ ಮಿಶನ್, ಎಲ್.ಇ.ಡಿ ಟಿವಿ, ವಿವಿಧ ಕಂಪನೆಗಳ ಹವಾನಿಯಂತ್ರಣ ಯಂತ್ರೋಪಕರಣಗಳ ಭಂಡಾರವೇ ಶ್ರೀ ಹರ್ಷಾದಲ್ಲಿ ಅಡಗಿದೆ. ಉತ್ತಮವಾದ ವಸ್ತುಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡಬೇಕು. ಆಕರ್ಷಕ ಉಡುಗೊರೆ, ಉತ್ತಮ ಸೇವೆ ನೀಡುವದೇ ಶ್ರೀ ಹರ್ಷಾದ ಮೂಲ ಧ್ಯೇಯ. ಗ್ರಾಹಕ ಸ್ನೇಹಿ ವಾತಾವರಣ ಕಲ್ಪಿಸಿದ್ದು ಮಾರಾಟದ ನಂತರದ ಸೇವೆಯನ್ನು ನಗುಮೊಗದಿಂದಲೆ ನೀಡಲಾಗುವದು ಎಂದು ಸಂಸ್ಥೆಯ ಮಾಲಿಕ ಸದಾನಂದ ಎಚ್. ನಾಯ್ಕ ಕನ್ನಡ ಜನಾಂತರಂಗ ಪತ್ರಿಕೆಗೆ ತಿಳಿಸಿದ್ದಾರೆ. 
ಎಲ್ಲಾ ಬ್ರಾಂಡಗಳ ಪರಿಕರಗಳು ಲಭ್ಯ  ಶ್ರೀ ಹರ್ಷಾ ನೂತನ ಮಳಿಗೆಯಲ್ಲಿ ಎಲ್‍ಜಿ, ಸೋನಿ, ಸ್ಯಾಮ್ಸಂಗ್, ವೊಲ್ಟಾಸ್, ಹೈರ, ಎಮ್.ಐ, ಒನಿಡಾ ಸೇರಿದಂತೆ ಎಲ್ಲಾ ಪ್ರಸಿದ್ದ ಕಂಪೆನಿಗಳ ವಸ್ತುಗಳು ಲಭ್ಯವಿದೆ. ಕೇವಲ ಗೃಹೋಪಯೋಗಿ ವಸ್ತುಗಳು ಮಾತ್ರವಲ್ಲದೇ ಮೊಬೈಲ್ ಮಾರಾಟ, ಫರ್ನಿಚರ್ಸ್ ಮಾರಾಟ ಮತ್ತು ಸೇವೆಯೂ ಇಲ್ಲಿ ಲಭ್ಯವಿದೆ. ಸುಲಭ ಕಂತುಗಳಲ್ಲಿ ಗ್ರಾಹಕರು ಇಲ್ಲಿನ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಟಿವಿಎಸ್ ಫೈನಾನ್ಸ್‍ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 

ಈ ಸಂಧರ್ಭದಲ್ಲಿ ಮಾಲೀಕ ಸದಾನಂದ ನಾಯ್ಕ ತಂದೆ ಹೊನ್ನಪ್ಪ ನಾಯ್ಕ, ತಾಯಿ ಈರಮ್ಮ ನಾಯ್ಕ, ಮಡದಿ ಭಾರತಿ ನಾಯ್ಕ, ಸಂಬಂಧಿಕರು, ಗ್ರಾಹಕರು ಮುಂತಾದವರು ಉಪಸ್ಥಿತರಿದ್ದರು. 
 

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...

ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮರನ್ನು ಥಳಿಸಿದ ದುಷ್ಕರ್ಮಿಗಳಿಂದ ಸಂತೃಸ್ತರನ್ನು ರಕ್ಷಿಸಿದ ಹಿಂದೂ ದಂಪತಿ

ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಹೋಟೆಲ್ ಉದ್ಯೋಗಿಯಾಗಿದ್ದು, ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೇಗಂಪುರ ಪ್ರದೇಶದ ...