ವರ್ಣರಂಜಿತ ಪ್ರೋ-ಕಬಡ್ಡಿಗೆ ಭಟ್ಕಳದ ಹರೀಶ ನಾಯ್ಕ ಆಯ್ಕೆ

Source: S.O. News Service | By I.G. Bhatkali | Published on 25th June 2016, 12:46 PM | Coastal News | Sports News |

ಭಟ್ಕಳ: ವರ್ಣರಂಜಿತ ಪ್ರೋ-ಕಬಡ್ಡಿ ಸೀಸನ್-3 ಪಂದ್ಯಾವಳಿಗೆ ತಾಲೂಕಿನ ಸರ್ಪನಕಟ್ಟೆ ಸ್ಪೋಟ್ರ್ಸ ಕ್ಲಬ್ಬಿನ ಆಟಗಾರ ಹರೀಶ ನಾಯ್ಕ ಆಯ್ಕೆಯಾಗಿದ್ದಾರೆ.

 ಪಂದ್ಯಾವಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಆಟಗಾರರಾಗಿರುವ ಹರೀಶ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡಲಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದ ಈತನು ಅತ್ಯಂತ ಕಠಿಣ ಪರಿಶ್ರಮದಿಂದ ಈ ಸಾಧನೆಯ ಶಿಖರವನ್ನೇರಿದ್ದಾನೆ. ಪ್ರಸ್ತುತ ಧಾರವಾಡದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವ್ಯಾಸಂಗ ಮಾಡುತ್ತಿರುವ ಈತನು ಪಿಯುಸಿಯಲ್ಲಿ ಓದುತ್ತಿರುವಾಗಲೇ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾನೆ. ಭಟ್ಕಳದ ಸರ್ಪನಕಟ್ಟೆಯ ಸ್ಪೋಟ್ರ್ಸ ಕ್ಲಬ್ ಈತನ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದು, ಇದೀಗ ಫಲ ನೀಡಿದೆ. ಗುರುವಾರ ಸಂಜೆ ತಾಲೂಕಿನ ಖಾಸಗಿ ಹೊಟೆಲ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ಕಬಡ್ಡಿ ಅಮೋಚೂರ್ ಅಸೋಶಿಯೇಶನ್ನಿನ ಪ್ರಮುಖರು, ಹರೀಶ ಆಯ್ಕೆಯೊಂದಿಗೆ ಭಟ್ಕಳ ಕಬಡ್ಡಿಗೆ ಹೆಸರುವಾಸಿಯಾಗಿರುವುದು ಇನ್ನೊಮ್ಮೆ ಸಾಬೀತಾಗಿದೆ. ಇದು ಭಟ್ಕಳಿಗರಲ್ಲಿ ಉತ್ಸಾಹವನ್ನು ಹೆಚ್ಚಿಸಿದ್ದು, ಯುವ ಪೀಳಿಗೆ ಇದನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ಎಮ್.ಬಿ.ನಾಯ್ಕ, ಇನಾಯಿತುಲ್ಲಾ ಶಾಬಂದ್ರಿ, ಶ್ರೀಧರ ನಾಯ್ಕ, ಜಾಫರ್, ಗಣೇಶ ನಾಯ್ಕ, ಹನ್ಮಂತ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ವಾಸು ನಾಯ್ಕ, ಉಮೇಶ ನಾಯ್ಕ, ತುಳಸೀದಾಸ ನಾಯ್ಕ, ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
 

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...