ತ್ಯಾಗಬಲಿದಾನಗಳೇ ಇಸ್ಲಾಂ ಧರ್ಮದ ತಿರುಳು;ಸೂಫಿ ಹಜರತ ಗೌಸ ಮುಹಿಯುದ್ದೀನ ಅಲಿ ಶಾ ಖಾದ್ರಿ

Source: sonews | By Staff Correspondent | Published on 19th September 2018, 11:20 PM | State News | Don't Miss |

ಹಾನಗಲ್ಲ :ತ್ಯಾಗ ಮತ್ತು ಬಲಿದಾನಗಳೇ ಇಸ್ಲಾಂ ಧರ್ಮದ ತಿರುಳಾಗಿದ್ದು ,ಕರ್ಬಲಾದ ಕಾಳಗದಲ್ಲಿ ಮಡಿದ ಹುತಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಇಸ್ಲಾಂ ಧರ್ಮಗುರು ಸೂಫಿ ಹಜರತ ಗೌಸ ಮುಹಿಯುದ್ದೀನ ಅಲಿ ಶಾ ಖಾದ್ರಿ ನುಡಿದರು .

ಅವರು ಇಲ್ಲಿಗೆ ಸಮೀಪದ ಗೊಂದಿ ಗ್ರಾಮದಲ್ಲಿ ಗ್ಲೋಬಲ್ ಸೂಫಿ ಫೋರಮ ಹಾಗೂ ಖಾನಖ್ವಾ ಎ ಫಕ್ರಿಯಾ ಗೌಸಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ಯಾದ ಎ ಹುಸೈನ್ " ಕಾರ್ಯಕ್ರಮದ ನೇತೃತ್ವವಹಿಸಿ  ಮಾತನಾಡುತ್ತಿದ್ದರು.

ಹಜರತ ಇಮಾಮ ಹುಸೈನ ರವರು ಶ್ರೇಷ್ಠ ಯುಗಪುರುಷರಾಗಿದ್ದು ಇಸ್ಲಾಂ ಧಾರ್ಮದ ಬೆಳವಣಿಗೆಗಾಗಿ ಇವರ ತ್ಯಾಗ ಮತ್ತು ಬಲಿದಾನವನ್ನು ವಿಶ್ವದಾದ್ಯಂತ ಸ್ಮರಿಸಲಾಗುತ್ತದೆಂದರು .ಸತ್ಯ ಮತ್ತು ಅಸತ್ಯದ ನಡುವಿನ ಯುದ್ಧದಲ್ಲಿ ,ಅಸತ್ಯಕ್ಕೆ ತಲೆಬಾಗದೇ ತಮ್ಮ ಪರಿವಾರದ ಜೊತೆಗೆ, ತಮ್ಮ ಪ್ರಾಣವನ್ನೇ ಬಲಿದಾನ ನೀಡಿ ವಿಶ್ವಕ್ಕೆ ಸತ್ಯದ ಸಂದೇಶ ನೀಡಿದ ಕೀರ್ತಿ ಹಜರತ ಇಮಾಮ ಹುಸೈನ ರವರಿಗೆ ಸಲ್ಲುತ್ತದೆಂದು ನುಡಿದರು. ಕರ್ಬಲಾ ಕಾಳಗದಲ್ಲಿ  ಬಲಿದಾನ ನೀಡಿದ ಹುತಾತ್ಮರನ್ನು ಮೋಹರಂ ಮಾಹೆಯಲ್ಲಿ ವಿಶೇಷವಾಗಿ ಸ್ಮರಿಸಲಾಗುತ್ತದೆಂದರು . 

ಗ್ಲೋಬಲ್ ಸೂಫಿ‌ ಫೋರಮ ಅಧ್ಯಕ್ಷ ಯಾಸೀರ ಅರಾಫತ್ ಮಕಾನದಾರ ಮಾತನಾಡಿ ಹಜರತ ಇಮಾಮ ಹುಸೈನ ರವರು ಮಾನವೀಯ ಅಂತಃಕಣವನ್ನು ಹೊಂದಿದವರಾಗಿದ್ದು ,ಇವರ ತ್ಯಾಗ ಮತ್ತು ಬಲಿದಾನವನ್ನು ಧರ್ಮಾತೀತವಾಗಿ ಜನ ಈಗಲೂ ಒಪ್ಪುತ್ತಾರೆಂದು ನುಡಿದರು.  ಭಾರತ ದೇಶದ ಬಹುತೇಕ ಕಡೆಗಳಲ್ಲಿ ಮೊಹರಂ ಹಬ್ಬದ ಹೆಸರಿನಲ್ಲಿ ಕರ್ಬಲಾದ ಹುತಾತ್ಮರನ್ನು  ಎಲ್ಲಾ ಜಾತಿ ಸಮುದಾಯದ ಜನರು ಸ್ಮರಿಸುವುದರ ಮೂಲಕ ಭಾವೈಕ್ಯದ  ಸಂದೇಶವನ್ನು ರವಾನಿಸುತ್ತಾರೆಂದರು.

ಮೋಹರಂ ಹಬ್ಬ ಭಾವೈಕ್ಯದ ಪ್ರತೀಕದಂತಿದ್ದು , ಹಿಂದೂ ಮುಸ್ಲಿಂ ಸರ್ವಧರ್ಮದವರೂ ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಿಸುವುದರ ಮೂಲಕ ಸಮಾಜಕ್ಕೆ ಭಾತೃತ್ವದ ಸಂದೇಶ ಸಾರುತ್ತಾರೆಂದರು .

ಅನಾದಿ ಕಾಲದಿಂದಲೂ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಅಲಾವಿ ಪದ ,ರಿವಾಯತ ಪದ ,ಮೋಹರಂ ಹಾಡುಗಳನ್ನು ಲಯಬದ್ಧವಾಗಿ ಹಾಡುತ್ತಾ ಮೋಹರಂ ಹಬ್ಬದ ವಿಶೇಷತೆ ಹಾಗೂ ಕರ್ಬಲಾದ ಹುತಾತ್ಮರು ಅನುಭವಿಸಿದ ಯಾತನೆಯ ಕರಾಳ ನೆನಪನ್ನು ಈ ಹಾಡುಗಳ ಮೂಲಕ ಮನಮುಟ್ಟುವಂತೆ ನಮ್ಮ ಹಿರಿಯರು ಮಾಡುತ್ತಾ ಬಂದಿದ್ದು , ಅಲಾವಿ ಪದ , ಕರ್ಬಲಾ ಕಾಳಗದ ಹಾಡುಗಳು , ರಿವಾಯತ ಪದ ,ಮೋಹರಂ ಪದಗಳೆಲ್ಲವೂ ನಮ್ಮ ಜನಪದ ಸಂಸ್ಕೃತಿಯ ಭಾಗವಾಗಿವೆ, ಇವುಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ರವಾನಿಸುವ ಅಗತ್ಯವಿದೆ ಎಂದು ಹೇಳಿದರು.

ಗ್ಲೋಬಲ್ ಸೂಫಿ ಫೋರಮ ಕಾರ್ಯದರ್ಶಿ ಮುಜೀಬುರ್ರಹ್ಮಾನ ಸೋಮಸಾಗರ ಪ್ರಸ್ತಾವಿಕವಾಗಿ ಮಾತನಾಡಿದರು. ಸೂಫಿ‌ ಹಜರತ ನಜೀರ ಅಹ್ಮದ ಶಾ ಖಾದ್ರಿ ,ಸಂಸ್ಥೆಯ ನಿರ್ದೇಶಕ  ಮಹ್ಮದ ಖಾಸಿಮ ಹವಾಲ್ದಾರ್,ಫಯಾಜ ಅಹ್ಮದ , ಫೋರಮ ಮುಖ್ಯ ಸಂಘಟಕ ರಫೀಕ ಅಹ್ಮದ ಪಿ ಜೆ , ಸಂಯೋಜಕ ಅಬ್ದುಲ್ ರಹ್ಮಾನ ಖಾದ್ರಿ, ಸಂಸ್ಥೆಯ ಹಾವೇರಿ ಜಿಲ್ಲಾಧ್ಯಕ್ಷ ಅಬ್ದುಲ್‌ ಅಜೀಜ ಬಂಕಾಪುರ ,ಸಂಪನ್ಮೂಲ ವ್ಯಕ್ತಿ ಮೌಲಾನಾ ನಿಜಾಮುದ್ದೀನ ಖಾದ್ರಿ,  ಮೌಲಾನಾ ಅಜೀಮ ,ಮೌಲಾನಾ ಶಾಹಿದ್ ಖಾದ್ರಿ , ಸಲೀಮ ಶೇಖ ವೇದಿಕೆಯ ಮೇಲಿದ್ದರು. 

 ಇದ್ರೀಸ ತಂಬಿ ಪ್ರಾರ್ಥಿಸಿದರು , ಜಾಕೀರ ಅಹ್ಮದ ಅತ್ತಾರ ಸ್ವಾಗತಿಸಿದರು, ಖಲಂದರ ಪರೂದಿ ವಂದಿಸಿದರು .

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...