ಗುರು ಸುಧೀಂದ್ರ ಕಾಲೇಜು 90 ಶೇ ಫಲಿತಾಂಶ

Source: sonews | By Staff Correspondent | Published on 15th February 2019, 6:31 PM | Coastal News |

ಭಟ್ಕಳ : ಕಳೆದ ನವೆಂಬರ್ ತಿಂಗಳಲ್ಲಿ  ಜರುಗಿದ ಬಿ.ಕಾಂ. ಪ್ರಥಮ ಪರೀಕ್ಷೆಯಲ್ಲಿ ನಗರದ ಗುರು ಸುಧೀಂದ್ರ ಪದವಿ ಕಾಲೇಜಿಗೆ ಶೇ.90 ಫಲಿತಾಂಶ ಲಭಿಸಿರುತ್ತದೆ.

ನರಸಿಂಹ ಜಿ. ಕಾಮತ್ ಶೇ 88.86 ಅಂಕದೊಂದಿಗೆ ಪ್ರಥಮ ಸ್ಥಾನವನ್ನು, ಪಲ್ಲವಿ ಎಸ್. ನಾಯ್ಕ್ ಶೇ.87.86 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು , ಪ್ರೇಮಾ ಎಮ್. ನಾಯ್ಕ್ ಶೇ. 87.43 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇದರೊಂದಿಗೆ ಫೈನಾನ್ಶಿಯಲ್ ಅಕೌಂಟಿಂಗ್ ವಿಷಯದಲ್ಲಿ 5 ವಿದ್ಯಾರ್ಥಿಗಳು ನೂರಕ್ಕೆ ನೂರು ಆಂಕ ಗಳಿಸಿರುತ್ತಾರೆ. ಮತ್ತು ಹಿಂದಿ ವಿಷಯದಲ್ಲಿ ಶೇಕಡಾ ನೂರರ ಫಲಿತಾಂಶ ಲಭಿಸಿರುತ್ತದೆ. ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟೃಸ್ಟ್‍ನ ಅಧ್ಯಕ್ಷ ಡಾ|| ಸುರೇಶ ವಿ ನಾಯಕ್, ಆಡಳಿತಾಧಿಕಾರಿ ಶ್ರೀ ನಾಗೇಶ ಎಮ್. ಭಟ್, ಪ್ರಾಂಶುಪಾಲ ಶ್ರೀ ಶ್ರೀನಾಥ್ ಪೈ, ಶೈಕ್ಷಣಿಕ ಸಂಯೋಜಕ ಫಣಿಯಪ್ಪಯ್ಯ ಹೆಬ್ಬಾರ ಹರ್ಷ ವ್ಯಕ್ತಪಡಿಸಿರುತ್ತಾರೆ.


 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...