ಗುಂಡಿಯಲ್ಲಿ ಬಿದ್ದ ಎತ್ತನ್ನು ಸಾವಿನಂಚಿನಿಂದ ಪಾರುಮಾಡಿದ ಅಗ್ನಿಶಾಮಕ ದಳ

Source: S O News | By MV Bhatkal | Published on 27th March 2017, 10:07 PM | Coastal News | Don't Miss |

ಅಂಕೋಲಾ : ರಾತ್ರಿ ವೇಳೆ ಗುಂಡಿಯಲ್ಲಿ ಬಿದ್ದಿರುವ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಾರು ಮಾಡಿದ ಘಟನೆ ಇಲ್ಲಿಯ ಲಕ್ಷ್ಮೇಶ್ವರದಲ್ಲಿ ನಡೆದಿದೆ.
ಲಕ್ಷ್ಮೇಶ್ವರದ ಶಾಂತಾರಾಮ ದೇವಳಿಯವರ ಕಂಪೌಂಡಗೆ ನುಗ್ಗಿ ಎತ್ತು ಆಯತಪ್ಪಿ ಪಕ್ಕದಲ್ಲೇ ಇರುವ ಗುಂಡಿಯೊಂದರಲ್ಲಿ ಸಿಲುಕಿ ಬಿದ್ದಿತ್ತು. ಬೆಳಗಿನ ಜಾವ ಅದನ್ನು ಗಮನಿಸಿದ ಸ್ಥಳೀಯರು ತಾ.ಪಂ ಅಧ್ಯಕ್ಷರಿಗೆ ವಿಷಯ ತಿಳಿಸಿದಾಗ ತಕ್ಷಣವೇ ಸುಜಾತಾ ಗಾಂವಕರರವರು 2-3 ಇಲಾಖೆಯವರಿಗೆ ಕರೆ ಮಾಡಿದಾಗ ಕೆಲವರು ಮಾನವೀಯತೆಯನ್ನು ಮರೆತು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಪ್ರಯತ್ನ ಮಾಡಿದರು. ಅಂತಿಮವಾಗಿ ಅಗ್ನಿಶಾಮಕದಳಕ್ಕೆ ಕರೆ ಹೋದಾಗ ತಕ್ಷಣವೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ವಿಶೇಷ ಪ್ರಯತ್ನ ಮಾಡಿ ಸಾವಿನಂಚಿನಲ್ಲಿದ್ದ ಎತ್ತನ್ನು ಮೇಲಕ್ಕÉತ್ತಿ ಕರ್ತವ್ಯ ಪ್ರಜ್ಞೆ ಮೆರೆದರು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಪೂರ್ವ ಪಕ್ಕದ ಸಿಮೆಂಟ ರಸ್ತೆಗೆ ನೀರು ಹಾಕಲು ತಂದೆಯೊಂದಿಗೆ ಸಹಾಯಕನಾಗಿ ಆಗಮಿಸಿದ ಆದಿತ್ಯ ರಾಜು ನಾಯ್ಕ ಕುಂಬಾರಕೇರಿ, ಎತ್ತು ಗುಂಡಿಯಲ್ಲಿ ಬಿದ್ದುದ್ದನ್ನು ಕಂಡು ತನ್ನ ತಂದೆ ಹಾಗೂ ಊರನಾಗರಿಕರಲ್ಲಿ ಅದನ್ನು ರಕ್ಷಿಸುವಂತೆ ಕೇಳಿಕೊಂಡು ತದನಂತರ ಎತ್ತನ್ನು ಮೇಲೆತ್ತಿದಾಗ ತೋರ್ಪಡಿಸಿದ ಖುಷಿ ಆ ಪುಟಾಣಿಯ ಪ್ರಾಣಿದಯೆಗೆ ಸಾಕ್ಷೀಯಾಗಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಗ್ನಿಶಾಮಕ ದಳ ಮತ್ತು ಊರ ನಾಗರಿಕರ ಕಾರ್ಯಕ್ಕೆ ಚಿನ್ನದಗರಿ ಯುವಕ ಸಂಘದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...