ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಜಾಗೊಳಿಸುವಂತೆ ಉಪವಿಭಾಗಧಿಕಾರಿಗಳಿಗೆ ಸದಸ್ಯರ ಮನವಿ 

Source: sonews | By Staff Correspondent | Published on 9th October 2018, 10:49 PM | Coastal News | State News | Don't Miss |

ಮುಂಡಗೋಡ:  ತಾಲೂಕಿನ ಚವಡಳ್ಳಿ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ವಜಾಗೊಳಿಸಬೇಕೆಂದು ಚವಡಳ್ಳಿಯ 9 ಗ್ರಾ.ಪಂ ಸದಸ್ಯರು ಶಿರಸಿ ಉಪವಿಭಾಗಧಿಕಾರಿಗಳಿಗೆ ಮನವಿ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅಧ್ಯಕ್ಷ ಉಪಾಧ್ಯಕ್ಷರು ಸರಕಾರ ಯೋಜನೆಗಳನ್ನು ಸಮರ್ಪಕವಾಗಿ ಬಳಸದೇ ತಮ್ಮ ತೋಚಿದ ರೀತಿಯಲ್ಲಿ ಬಳಸುತ್ತಿರುವುದರಿಂದ ಇದು ಕಾನೂನ ಬಾಹಿರ ಕೆಲಸವಾಗಿರುತ್ತದೆ. ಅಧ್ಯಕ್ಷ ಉಪಾಧ್ಯಕ್ಷ ಮಾಡುತ್ತಿರುತ್ತದೆ.ಇದರಿಂದ ಇವರು ಮಾಡುತ್ತಿರುವ ಕೆಲಸ ಕಾರ್ಯಗಳಿಂದ ನಾವು ಅಪಾದನೆ ಹೋರಬೇಕಾಗಿದೆ.

ಇತ್ತಿತ್ತಲಾಗಿ ಗ್ರಾ.ಪಂ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಾರ್ಯವಿಧಾನಗಳು ಸಂಪೂರ್ಣ ಬದಲಾಗಿದ್ದು ಗ್ರಾ.ಪಂ ಗೆ ಸಂಬಂದಪಟ್ಟ ಕೆಲಸಗಳನ್ನು ಪಂಚಾಯತಿಯ ಎಲ್ಲ ಸದಸ್ಯರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅಲ್ಲದೆ ಮಹಿಳಾ ಸದಸ್ಯರಿಗೆ ಸಂಪೂರ್ಣವಾದ ವಾಸ್ತವಾಂಶದ ಮಾಹಿತಿ ನೀಡದೇ ಕೆಲವೊಂದು ವಿಚಾರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮದಷ್ಟೇ ನಿಲುವನ್ನು ತಳೆದು ನಿರ್ಣಯ ಪಾಸು ಮಾಡುತ್ತಿದ್ದಾರೆ.  ಪಂಚಾಯತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ಆ ವಾರ್ಡುಗಳ ಸದಸ್ಯರಿಗೆ ಬಂದಿರುವ ಅನುದಾನವನ್ನು ಸರಿಯಾಗಿ ನೀಡದೇ ತಮಗೆ ಬೇಕಾಗುವ ವಾರ್ಡುಗಳ ಸದಸ್ಯರಿಗೆ ಮಾತ್ರ ಕಾಮಗಾರಿಯನ್ನು ನೀಡಿರುತ್ತಾರೆ. ಎನ್.ಆರ್.ಜಿ. ಯೋಜನೆಯಲ್ಲಿ ಈಗಾಗಲೇ ಅರಣ್ಯ ಪ್ರದೇಶದಲ್ಲಿನ ಕೆರೆ ಹೂಳೆತ್ತುವ ಹಾಗೂ ಜಮೀನುಗಳಲ್ಲಿ ಕೃಷಿ ಹೊಂಡದ ಹೆಸರಿನಲ್ಲಿ ಜನರಿಗೆ ಕೂಲಿ ಕೆಲಸ ಕೊಡದೇ ಯಂತ್ರಗಳ ಮೂಲಕ ಹೊಂಡಗಳನ್ನು ತೆಗೆಸಿ ಸರಕಾರಕ್ಕೆ ವಂಚನೆ ಮಾಡಿರುತ್ತಾರೆ. ಇದರಿಂದ ಪಂಚಾಯಿತಿಗೆ ಕೆಟ್ಟ ಹೆಸರು ತಂದಿರುತ್ತಾರೆ. ಅಲ್ಲದೇ ನಿಧಿ 2ರಲ್ಲಿ ಯಾವುದೇ ಸಾರ್ವಜನಿಕ ಕೆಲಸಕ್ಕೆ ಬಳಸದೇ ತಮ್ಮ ವೈಯಕ್ತಿಕವಾಗಿ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ಸಾರ್ವಜನಿಕ ಕೆಲಸಕ್ಕೆ ಬಳಸದೇ ತಮ್ಮ ವೈಯಕ್ತಿಕವಾಗಿ ಕೆಲಸ ಮಾಡಿಸಿರುತ್ತಾರೆ. ಆದ್ದರಿಂದ ಚವಡಳ್ಳಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು ಮಾಡಿದ ಕಾನೂನು ಬಾಹಿರ ಕೆಲಸದಿಂದ ಉಳಿದ ಸದಸ್ಯರು ಆಪಾದನೆ ಹೊರಬೇಕಾಗಿದೆ. ಈ ಕುರಿತು ಕೂಡಲೇ ಕೂಲಂಕುಶವಾಗಿ ಪರಿಶೀಲಿಸಿ ಚವಡಳ್ಳಿ ಗ್ರಾ.ಪಂ. ಅಧ್ಯಕ್ಷರನ್ನು ಮತ್ತು ಉಪಾಧ್ಯಕ್ಷರನ್ನು ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. 

ಮನವಿಗೆ ಚವಡಳ್ಳಿ ಗ್ರಾ.ಪಂ. ಸದಸ್ಯರಾದ ಶಿವಪುತ್ರ ಹರಿಜನ, ಬಸವರಾಜ ಉಗ್ಗಿನಕೇರಿ, ಮಂಜುನಾಥ ಕಟಗಿ, ಲಕ್ಷ್ಮಣ ರಾಠೋಡ, ದಶರಥ ಪಾಟೀಲ, ಲಕ್ಷ್ಮವ್ವ ವಡ್ಡರ, ಬಯ್ಯಾಬಾಯಿ ಕಾತ್ರಟ, ಸುಮಿತ್ರಾ ಯಳವಟ್ಟಿ ಮತ್ತು ರುಕ್ಮಾಬಾಯಿ ಚವ್ಹಾಣ ಸಹಿ ಮಾಡಿದ್ದಾರೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...