ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ..?

Source: so news | By Manju Naik | Published on 16th June 2018, 5:42 PM | State News | Don't Miss |

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಶೇ.1.75ರಷ್ಟುತುಟ್ಟಿಭತ್ಯೆ ಹೆಚ್ಚಿಸಲು ಸರ್ಕಾರ ಸಮ್ಮತಿಸಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿರುವ ಮಾದರಿಯಲ್ಲೇ, ಪ್ರಸಕ್ತ ವರ್ಷದ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೂ ಶೇ.1.75ರಷ್ಟುತುಟ್ಟಿಭತ್ಯೆ ಹೆಚ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಸೋಮವಾರ ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಕರ್ನಾಟ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿತ್ತು. ತಮ್ಮ ಮನವಿ ಪುರಸ್ಕರಿಸಿರುವ ಮುಖ್ಯಮಂತ್ರಿ ಅವರಿಗೆ ಸಂಘ ಧನ್ಯವಾದ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಎಚ್‌.ಕೆ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಯೂನಸ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ

ಕೋಲಾರ: ಕೋಲಾರದ ಈ ಮುಂಜಾನೆ ಪತ್ರಿಕೆಯ ಸಂಪಾದಕ ಮಹ್ಮದ್ ಯೂನಸ್ ಅವರನ್ನು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ...

ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗಕ್ಕೆ 16,955 ಹೆಕ್ಟೇರ್ ಬೆಳೆ ಹಾನಿ: ಶಶಿಕಾಂತ್ ಕೋಟಿಮನಿ

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀವೃಷ್ಠಿ, ಪ್ರವಾಹ ಹಾಗೂ ಕೊಳೆರೋಗಕ್ಕೆ ...

ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ...