ಉಚಿತ ಡಾಟಾ, ಟಾಕ್ಟೈಮ್: ಗೋವಾ ಸರ್ಕಾರದಿಂದ ಯುವಜನತೆಗೆ ಕೊಡುಗೆ

Source: S O News service | By Staff Correspondent | Published on 4th December 2016, 6:05 PM | National News | Don't Miss |

ಪಣಜಿ: ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಉಪಕ್ರಮಕ್ಕನುಗುಣವಾಗಿ ಗೋವಾ ಸರಕಾರವು ರಾಜ್ಯದ ಯುವಜನತೆಗೆ ಸೀಮಿತ ಉಚಿತ ಟಾಕ್‌ಟೈಮ್ ಮತ್ತು ಇಂಟರನೆಟ್ ಡಾಟಾ ಒದಗಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ನಾಳೆ, ಸೋಮವಾರ ಚಾಲನೆ ನೀಡಲಿದೆ.

ಗೋವಾ ಯುವ ಸಂಚಾರ ಯೋಜನೆಯಡಿ 16ರಿಂದ 30ವರ್ಷ ವಯೋಮಾನದ ಯುವಜನತೆಗೆ ಪ್ರತಿ ತಿಂಗಳು ಸಿಮ್ ಕಾರ್ಡ್ ಜೊತೆಗೆ 100 ನಿಮಿಷಗಳ ಟಾಕ್‌ಟೈಮ್ ಮತ್ತು 3 ಜಿಬಿ ಇಂಟರ್‌ನೆಟ್ ಡಾಟಾ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಲಕ್ಷೀಕಾಂತ ಪಾರ್ಸೇಕರ್ ಅವರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸರಕಾರವು ಇದಕ್ಕಾಗಿ ವೊಡಾಫೋನ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು, ಸುಮಾರು 1.25 ಲಕ್ಷ ಯುವಜನರಿಗೆ ಇದರ ಲಾಭ ದೊರೆಯಲಿದೆ.ಫಲಾನುಭವಿಯು ಯೋಜನೆಯ ದುರುಪಯೋಗ ಮಾಡಿಕೊಂಡರೆ ಸೌಲಭ್ಯವನ್ನು ಸರಕಾರವು ಹಿಂದೆಗೆದುಕೊಳ್ಳಲಿದೆ ಎಂದು ಪಾರ್ಸೇಕರ್ ಹೇಳಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...