ಲಾರಿ ಸಮೇತ 12.ಲಕ್ಷ ರೂ.ಮೌಲ್ಯದ ಗೋವಾ ಮದ್ಯ ವಶ ; ಇಬ್ಬರ ಬಂಧನ

Source: sonews | By Staff Correspondent | Published on 11th October 2018, 9:53 PM | Coastal News | Don't Miss |

ಕಾರವಾರ: ಲಾರಿಯೊಂದರಲ್ಲಿ ಸುಮಾರು ೧೨ಲಕ್ಷ ರೂ ಮೌಲ್ಯದ ಗೋವಾ ಮದ್ಯ ಸಾಗಿಸುತ್ತಿರುವಾಗ ಕಾರ್ಯಾಚರಣೆ ಮಾಡಿಕ ಅಬಕಾರಿ ಇಲಾಖೆ ಪೊಲೀಸರು ಮಧ್ಯ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಅನಮೋಡ ಚೆಕ್ ಪೋಸ್ಟ್ ನಲ್ಲಿ ಜರಗಿದೆ.

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಪೂನಾ ಮೂಲದ ಸಚಿನ್ ಲಕ್ಷ್ಮಣ ಅಟ್ಕೆ ಮತ್ತು ಅಮರ ಪ್ರಕಾಶ ಯಡ್ಗೆ  ಎಂದು ಗುರುತಿಸಲಾಗಿದ್ದು ಅಬಕಾರಿ ಇಲಾಖೆ ಅಧಿಕಾರಿಗಳು, ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಲಾರಿ ಮತ್ತು 12.66 ಲಕ್ಷ ರೂ. ಮೌಲ್ಯ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಬಂದಿದೆ.

Read These Next