ಅಸ್ತಮಾ ಕ್ಯಾಂಪ್ ಪ್ರಯೋಜನ ಪಡೆದು ಆರೋಗ್ಯವಂತರಾಗಿ – ಕೆ.ಆರ್. ರಮೇಶ್ ಕುಮಾರ್

Source: S.O. News Service | By Mohammed Ismail | Published on 12th June 2018, 7:04 PM | State News |

ಕೋಲಾರ : ಅಲರ್ಜಿ ಉಸಿರಾಟದ ತೊಂದರೆ ಹಾಗೂ ಅಸ್ತಮಾ ತೊಂದರೆಗಳಿಂದ ಬಳಲುತ್ತಿರುವ ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ಸಾರ್ವಜನಿಕರು ಉಚಿತ ಅಸ್ತಮಾ ಕ್ಯಾಂಪ್‍ನ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹಾಗು ನಿಸ್ವಾರ್ಥ ಸೇವೆಯಿಂದ ಉಚಿತವಾಗಿ 18 ವರ್ಷದಿಂದ ಆರ್ಯುವೇದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಚಾರ್ಯ ಚಿನ್ಮಯಾನಂದ ಅವಧೂತರÀ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

 ಅವರು ಇಂದು ಕೋಲಾರ ತಾಲ್ಲೂಕು ಸುಗಟೂರು ಹೋಬಳಿ, ಕಿತ್ತಂಡೂರು ಗ್ರಾಮದ ಆನಂದ ಮಾರ್ಗ ಯೂನಿವರ್ಸಲ್ ರಿಲೀಫ್ ಟೀಮ್ ಹಾಗೂ ಆನಂದ ಸುವರ್ಣ ರೂರಲ್ ಸೆವಲೆಪ್‍ಮೆಂಟ್ ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಉಚಿತ ಅಸ್ತಮಾ ಕ್ಯಾಂಪ್‍ನ್ನು ಉದ್ಘಾಟಿಸಿ ಮಾತನಾಡಿದರು.

ಅವಧೂತರು ಸಮಾಜ ಸೇವೆಯ ಜೊತೆಗೆ ಶಾಲೆಯನ್ನು ಪ್ರಾರಂಭಿಸಿ ಬಡ ಮತ್ತು ಹಿಂದಿಳದ ವರ್ಗದ ಮಕ್ಕಳಿಗೆ ವಿದ್ಯೆ ಕೊಡುವುದರ ಜೊತೆಗೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು, ದಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ವಿದ್ಯೆ ಪಡೆಯುವ ವಾತಾವರಣವಿದ್ದು, ಇಲ್ಲಿ ಕಲಿತರವರು ಶಿಸ್ತು, ಶ್ರದ್ದೆ, ಭಕ್ತಿ, ಗುರು ಹಿರಿಯರನ್ನು, ತಂದೆ ತಾಯಿಗಳನ್ನು ಗೌರವಿಸುವ ಮತ್ತು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯ  ಕಾರ್ಯವಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಆಚಾರ್ಯ ಚಿನ್ಮಯಾನಂದ ಅವಧೂತ ಮಾತನಾಡಿ ಕೋಲಾರ ಜಿಲ್ಲೆಗೆ ಬಂದು 20 ವರ್ಷವಾಗಿದ್ದು, ಈ ಕಿತ್ತಂಡೂರು ಗ್ರಾಮದಲ್ಲಿ ಶಾಲೆ ಪ್ರಾರಂಭಿಸಿಲು ವೆಂಕಟಗಿರಿಗೌಡರು ಉಚಿತವಾಗಿ ಭೂಮಿ ನೀಡಿದ್ದು, 2000 ಇಸವಿಯಿಂದ ಶಾಲೆಯನ್ನು ನಡೆಸುತ್ತಾ ಬಂದಿದ್ದು, ಈ ಸುತ್ತಮುತ್ತಲ ಜನರಿಗೆ ಆರೋಗ್ಯ ಸಮಸ್ಯೆಗಳನ್ನು ಕಂಡು ನನ್ನ ಗುರುಗಳಾದ ಶ್ರೀ ಶ್ರೀ ಆನಂದ ಮೂರ್ತಿಜೀ ರವರ ಆರ್ಶೀವಾದದಿಂದ ಅಸ್ತಮ ಗುಣಪಡಿಸುವ ಔಷಧಿಯನ್ನು ತಯಾರಿಸಿ ಉಚಿತವಾಗಿ 18ವರ್ಷಗಳಿಂದ ನೀಡುತ್ತಿದ್ದು, ಇದರ ಪ್ರಯೋಜನವನ್ನು ಸಾವಿರಾರು ಜನ ಪಡೆದುಕೊಂಡು ಆರೋಗ್ಯವಂತಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಜನ್ನಘಟ್ಟ ಕೃಷ್ಣಪ್ಪ, ಶೆಟ್ಟಿಮಾದಮಂಗಲ ಮಂಜುನಾಥ್, ಹಾಲೇರಿ ಬಾಬು, ಆಚಾರ್ಯ ಮಹಿತೋಷಾನಂದ ಅವದೂತ, ಸುಗಟೂರ ವಿಶ್ವನಾಥ್, ಸುಗಟೂರು ಎಸ್.ಎಫ್.ಎಸ್.ಇ.ಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಕಿತ್ತಂಡೂರು ಸಂಪತ್ ಕುಮಾರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾವಿರಕ್ಕೂ ಹೆಚ್ಚು ಮಂದಿ ಅಸ್ತಮಾ ಪೀಡಿತರು ಭಾಗವಹಿಸಿ ಔಷದಿಯನ್ನು ಸೇವಿಸದರು.
 

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...