ಡಿ.16 ರಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಾಂಧೀಜಿರವರ ಸ್ಥಬ್ದಚಿತ್ರ ಸಂಚಾರ

Source: sonews | By Staff Correspondent | Published on 14th December 2018, 6:09 PM | Coastal News |

ಕಾರವಾರ :  ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮಹಾತ್ಮಾಗಾಂಧೀಜಿ ಅವರ ಸಂದೇಶಗಳನ್ನು ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಎರಡನೆಯ ಹಂತದ ಗಾಂಧೀಜಿ ಅವರ ಸ್ಥಬ್ದಚಿತ್ರದ ಸಂಚಾರ ರಾಜ್ಯಾದ್ಯಂತ ಡಿಸೆಂಬರ್ 8 ರಂದು ಬೆಂಗಳೂರಿನಿಂದ ಆರಂಭಗೊಂಡಿರುತ್ತದೆ.

ಡಿಸೆಂಬರ್ 16 ರಂದು ಸ್ಥಬ್ದಚಿತ್ರ ವಾಹನವು  ಶಿವಮೊಗ್ಗ ಜಿಲ್ಲೆ ಭದ್ರಾವತಿಯಿಂದ  ಬೆಳಿಗ್ಗೆ 4ಕ್ಕೆ ಹೊರಟು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಸಂಜೆ 4ಕ್ಕೆ  ತಲುಪಲಿದೆ. ಮೆರವಣಿಗೆ ನಂತರ ವಾಸ್ತವ್ಯವಿರುತ್ತದೆ.  

17 ರಂದು ಮದ್ಯಾಹ್ನ 12ಕ್ಕೆ ಸಿದ್ದಾಪುರಕ್ಕೆ ಆಗಮಿಸಿ,  1ಕ್ಕೆ ಸಿದ್ದಾಪುರದಿಂದ ಹೊರಡುವುದು. ಸಂಜೆ 5ಕ್ಕೆ ಶಿರಸಿಯಲ್ಲಿ ಮೆರವಣಿಗೆ ನಡೆಸಿದ ಬಳಿಕ ವಾಸ್ತವ್ಯ ಹೂಡುವುದು.

18 ರಂದು ಬೆಳಗ್ಗೆ 6 ಗಂಟೆಗೆ ಶಿರಸಿಯಿಂದ ಹೊರಟು 11ಕ್ಕೆ ಯಲ್ಲಾಪುರ ಆಗಮಿಸುವುದು, ಮಧ್ಯಾಹ್ನ 12ಕ್ಕೆ ಯಲ್ಲಾಪುರದಿಂದ  ಹೊರಟು 2 ಗಂಟೆಗೆ ಮುಂಡಗೊಡ ದಲ್ಲಿ ಮೆರವಣಿಗೆÀ ಬಳಿಕ ಧಾರವಾಡ ಜಿಲ್ಲೆ ಕಲಗಟಗಿ ತಾಲೂಕಿಗೆ ವಾಹನವು ತೆರಳಲಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...