ಗಾಂಧಿಜಿಯವರ ಆದರ್ಶಗಳನ್ನು ಯುವ ಸಮೂಹಕ್ಕೆ ತಲುಪಿಸಬೇಕು : ಹಿಮಂತರಾಜು.ಜಿ.

Source: sonews | By Staff Correspondent | Published on 3rd October 2018, 5:14 PM | Coastal News | Don't Miss |

ಕಾರವಾರ: ಮಹಾತ್ಮಾಗಾಂಧೀಜಿಯವರ ಬದ್ಧತೆ, ಆದರ್ಶಗಳು, ಅವರ ತತ್ವಗಳು ಜಗತ್ತಿಗೆ ಮಾದರಿಯಾಗಿವೆ.  ಮಹಾತ್ಮಾಗಾಂಧೀಜಿಯವರ ಹೆಜ್ಜೆಗುರುತುಗಳ ಮಾಹಿತಿಯನ್ನು ರಾಜ್ಯದಲ್ಲಿ ಯುವ ಪೀಳಿಗೆಗೆ ತಲುಪಿಸಲು ಸಮಗ್ರ ಮಾಹಿತಿ ಸಂಗ್ರಹಿಸಿ ವ್ಯಾಪಕ ಪ್ರಚಾರ ಮಾಡುವ ಕಾರ್ಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಡುತ್ತಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು. ಜಿ. ತಿಳಿಸಿದರು.

ಅವರು ಮಂಗಳವಾರ ನಗರದ ರವೀಂದ್ರನಾಥ ಠಾಗೋರ ಕಡಲತೀರದ ಮಕ್ಕಳ ಉದ್ಯಾವನದಲ್ಲಿ ಗಾಂಧೀಜಿರವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ``ಗಾಂಧೀಜಿಗೆ ನಮನ” ಕಾರ್ಯಕ್ರಮದಲ್ಲಿ ಗಾಂಧಿ ವಿಚಾರಧಾರೆ ಕುರಿತು  ಮಾತನಾಡಿದರು.  

ಗಾಂಧೀಜಿ ಅವರು 21 ವರ್ಷಗಳ ದಕ್ಷಿಣ ಆಫ್ರಿಕಾದಲ್ಲಿ ಕಳೆದರು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಅವುಗಳ ವಿರುದ್ಧ ಹೋರಾಡಿದ ಅವರು ಅನೇಕ ಸಂದರ್ಭಗಳಲ್ಲಿ ಅವಮಾನಕ್ಕೆ ಒಳಗಾದರು. ಭಾರತಕ್ಕೆ ಹಿಂದಿರುಗಿದ ಸಂದರ್ಭದಲ್ಲಿ  ಅವರು  ದೇಶದೂದ್ದಕ್ಕೂ ರೈಲಿನಲ್ಲಿ ಸಂಚರಿಸಿ ಜನ ಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿÀಕೊಳ್ಳುವಂತೆ ಪ್ರೆರೇಪಿಸುವ ಮೂಲಕ ಜನಸಮಾನ್ಯರನ್ನು ಮುಖ್ಯವಾಹಿನಿಗೆ ತಂದರು. ಇಂತಹ ನಾಯಕತ್ವ  ಗುಣಗಳಿಂದ ಅವರನ್ನು ಮಹಾತ್ಮಾ, ರಾಷ್ಟ್ರಪಿತ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ.  ಗಾಂಧೀಜಿ ತಮ್ಮ ಪುಸ್ತಕದಲ್ಲಿ ಹೇಳಿದಂತೆ ಮನಸ್ಸಿನ ನಿಗ್ರಹಕ್ಕಾಗಿ  ಸತ್ಯಾಗ್ರಹ ಮಾಡಿದರು. ಅವರನ್ನು ಯುವ ಸಮೂಹ ಸದಾ ಸ್ಮರಿಸಬೇಕಾಗಿದೆ ಅವರ ವಿಚಾರ ಧಾರೆಗಳನ್ನು ಓದುತ್ತೇವೆ. ಗೌರವಿಸುತ್ತೇವೆ. ಆದರೆ ಅವರ ಜೀವನ ಸಂದೇಶಗಳನ್ನು ಪಾಲಿಸುತ್ತಿಲ್ಲ. ಗಾಂಧೀಜಿ ಅವರ ಕೆಲವು ತತ್ವಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಗೌರವ ಸಲ್ಲಿಸಿದಂತೆ. ಅವರನ್ನು ಒಂದು ದೃಷ್ಟಿಕೋನದಿಂದ ನೋಡದೇ ಪೂರ್ಣ ಪ್ರಮಾಣದಲ್ಲಿ ಅಧ್ಯಯನಮಾಡಬೇಕು. ಸತ್ಯ, ಅಹಿಂಸೆ, ನಿಯಮಗಳಿಗೆ ಅಪಚಾರವಾಗದಂತೆ ನಡೆದುಕೊಂಡ ಏಕೈಕ ವ್ಯಕ್ತಿ ಗಾಂಧೀಜಿ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕಾರವಾರದ ಖ್ಯಾತ ಗಾಯಕ ರಾಮಾ ಬಾಂದೇಕರ್ ಹಾಗೂ ತಂಡದವರಿಂದ ಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾ ರಾಮ ಭಜನ ಗೀತೆಗಳನ್ನು ಹಾಡಿದರು.
ಸಾಕ್ಷಚಿತ್ರ ಪ್ರದರ್ಶನ: ವೇದಿಕೆಯಲ್ಲಿ ಬೃಹತ್ ಎಲ್.ಇ.ಡಿ. ಪರದೆಯ ಮೂಲಕ  ಗಾಂಧೀಜಿ ಅವರ ಜೀವನ ದರ್ಶನ ಕುರಿತ ಸಾಕ್ಷಚಿತ್ರ ಪ್ರದರ್ಶನ ನೀಡಲಾತು. ಶಿವಾನಂದ ಕಳಸ ಗಾಂಧಿ ವೇಷದಲ್ಲಿ ವೇಧಿಕೆಗೆ ಮೆರಗು ನೀಡಿದರು.  

ಛಾಯಾಚಿತ್ರ ಪ್ರದರ್ಶನ: ಮಹಾತ್ಮ ಗಾಂಧೀಜಿಯವರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸೆರೆಹಿಡಿಯಲಾದ ಅಪೂರ್ವ ಛಾಯಾಚಿತ್ರ ಪ್ರದರ್ಶನ ಜರುಗಿತು. 

ಐವರು ಪೌರಕರ್ಮಿಕರಿಗೆ ಸನ್ಮಾನ: ಸ್ವಚ್ಛತಾ ಹಿ ಸೇವಾ ವಾಕ್ಯದೊಂದಿಗೆ ಗಾಂಧಿಜಿಯವರ ಜನ್ಮ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಸ್ವಚ್ಛತೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರವಾರ ನಗರಸಭೆಯ ಐದು ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...