ಬಿಜೆಪಿ ಕಾಂಗ್ರೇಸ್ ಒಂದೇ ನಾಣ್ಯದ ಎರಡು ಮುಖಗಳು-ಕುಮಾರ್ ಸ್ವಾಮಿ

Source: sonews | By Staff Correspondent | Published on 17th March 2018, 11:36 PM | Coastal News | State News | Don't Miss |

ಭಟ್ಕಳ: ರಾಜ್ಯದಲ್ಲಿ ಹಿಂದೆ ಆಳಿದ ಬೆಜೆಪಿ ಮತ್ತು ಈಗ ಆಳ್ವಿಕೆ ನಡೆಸುತ್ತಿರುವ ಕಾಂಗ್ರೇಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಇವರಿಗೆ ರಾಜ್ಯದ ಅಭಿವೃದ್ಧಿ ಬೇಡವಾಗಿದೆ ಹಿಂದೂ-ಮುಸ್ಲಿಮರಲ್ಲಿ ಒಡಕನ್ನುಂಟು ಮಾಡುತ್ತ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಮುಂಬರುವ ಚುನಾವಣೆಯಲ್ಲಿ ಈ ರಾಜ್ಯವನ್ನು ನನ್ನದೇ ಚಿಂತನೆಯೊಂದಿಗೆ ಅಭಿವೃದ್ಧಿಪಥದತ್ತ ಕೊಂಡೊಯ್ಯಲು 5ವರ್ಷಗಳ ಅವಧಿಗೆ ಅವಕಾಶ ನೀಡಿ ಎಂದು ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.

ಅವರು ಇಲ್ಲಿನ ಇಸ್ಲಾಮಿಯಾ ಆಂಗ್ಲೊ ಉರ್ದು ಪ್ರೌಢಶಾಲೆ ಮೈದಾನದಲ್ಲಿ ನಡೆದ ಜೆ.ಡಿ.ಎಸ್. ನ ವಿಕಾಸ ಪರ್ವ ಕಾರ್ಯಕ್ರಮವನ್ನುದ್ದೇಶಿಸಿ ಮಾನಾಡಿದರು.  

ಉತ್ತರ ಕನ್ನಡದಲ್ಲಿ ಅರಣ್ಯ ಪ್ರದೇಶದಲ್ಲಿ ಸಣ್ಣ ಪುಟ್ಟ ಜಮೀನು ಅತಿಕ್ರಮಣ ಮಾಡಿ ವ್ಯವಸಾಯ ಮಾಡುತ್ತಿರುವ ಕುಟುಂಬ ಇಂದು ಭಯಭೀತವಾಗಿದ್ದು ನಾನು ಮುಖ್ಯ ಮಂತ್ರಿಯಾದ ಒಂದು ತಿಂಗಳೋಳಗೆ ಉತ್ತರ ಕನ್ನಡದಲ್ಲಿ ಅಧಿಕಾರಿಗಳೊಂದಿಗೆ ವಾಸ್ತವ್ಯ ಮಾಡಿ ಅತಿಕ್ರಮಣದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಹೇಳಿದರು. 

ಭಟ್ಕಳ ತಾಲೂಕೊಂದರಲ್ಲಿಯೇ 10 ಸಾವಿರ ಅತಿಕ್ರಮಣದಾರರ ಅರ್ಜಿಯಲ್ಲಿ 8 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನುಳಿದ 2 ಸಾವಿರ ಅರ್ಜಿಗಳನ್ನು ಅಧಿಕಾರಿಗಳೇ ಇಟ್ಟುಕೊಂಡಿದ್ದಾರೆ, ಇವರಿಗೆಲ್ಲ ನ್ಯಾಯ ಎಲ್ಲಿ ಸಿಗಬೇಕು ಎಂದು ಪ್ರಶ್ನಿಸಿದ ಅವರು ಒಂದೆಡೆ ಉದ್ಯೋಗ ಸೃಷ್ಟಿಸುವ ಯಾವುದೇ ಕಾರ್ಖಾನೆಗಳಿಲ್ಲ, ಇನ್ನೊಂದೆಡೆ ಇದ್ದ ಸೂರೂ ತಮ್ಮದಲ್ಲ ಎನ್ನುವ ಪ್ರಜ್ಞೆ ಜನತೆಯನ್ನು ಕಾಡುತ್ತಿರುವಾಗ ತಮ್ಮ ಸರಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಭರವಸೆಯನ್ನು ನೀಡಿದರು. 

ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಸಾವಿರಾರು ಜನರು ಇಂದು ಸ್ವ ದೇಶಕ್ಕೆ ಮರಳುತ್ತಿದ್ದಾರೆ. ಅವರಿಗೆ ಕೇರಳ ಸರಕಾರ ವಿಶೇಷ ಆರ್ಥಿಕ ಸಬಲತೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂತಹ ಸುಮಾರು 40 ರಿಂದ 50 ಸಾವಿರ ಜನರು ನಮ್ಮ ರಾಜ್ಯದಲ್ಲಿದ್ದು ಅವರಿಗೆಲ್ಲರಿಗೂ ಕಾಂಗ್ರೆಸ್ ಸರಕಾರದ ಕೊಡುಗೆ ಶೂನ್ಯ. ನಮ್ಮ ಸರಕಾರ ಬಂದರೆ ಕೊಲ್ಲಿ ರಾಷ್ಟ್ರದಿಂದ ಮರಳುವ ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆರ್ಥಿಕ ಸಬಲತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಸುಮಾರು 3700ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು ಮೊನ್ನೆ ಮೊನ್ನೆ ಹುಬ್ಬಳ್ಳಿಯ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಮೂರೂವರೆ ವರ್ಷದಲ್ಲಿ 58000 ಕೋಟಿ ಬೆಳೆ ನಾಶವಾಗಿದ್ದು, ರೈತರ ನೆರವಿಗೆ ಸರಕಾರ ಬಾರದಿರುವಾಗ ರೈತರ ಬದುಕೇನಾಗಬೇಕು  ಎಂದ ಅವರು ನಮ್ಮ ಸರಕಾರ ರೈತರ ಸರಕಾರ ಎಂದರು. ರಾಜ್ಯದ ಕರಾವಳಿ ಪ್ರದೇಶದಲ್ಲಿನ ಜನತೆ ಆತಂಕದಲ್ಲಿದ್ದಾರೆ. ಕಾಲೇಜಿಗೆ ಹೋದ, ಕೆಲಸಕ್ಕೆ ಹೋದ ತಮ್ಮ ಮನೆಯ ಜನರು ವಾಪಾಸು ಬರುತ್ತಾರೆನ್ನುವ ಖಾತ್ರಿ ಇಲ್ಲವಾಗಿದೆ. ಪುನಹ ಪುನಹ ಘಟನೆಗಳು ಜರುಗುತ್ತಿದ್ದು ಜನತೆಯನ್ನು ಕಂಗಾಲು ಮಾಡಿದೆ. ಇಂತಹ ಘಟನೆಗಳನ್ನು ನಿಭಾಯಿಸಲು ರಾಜ್ಯ ಸರಕಾರ ವಿಫಲವಾಗಿದ್ದು ಜನತೆ ಸರಕಾರದ ಮೇಲಿನ ನಂಬಿಕ ಕಳೆದುಕೊಂಡಿದ್ದಾರೆ. ಹೊನ್ನಾವರದಲ್ಲಿ ನಡೆದ ಸಣ್ಣದೊಂದು ಅಪಘಾತದ  ಘಟನೆಯನ್ನು ನಿಭಾಯಿಸಲು ಸರಕಾರ ವಿಫಲವಾಯಿತು. ಇದರಿಂದಾಗಿ ಕುಮಟಾ, ಸಿರಸಿಗಳಲ್ಲಿಯೂ ಗಲಭೆಗಳಾಯಿತು. ಕುಮಟಾ ಸಿರಸಿಗಳಲ್ಲಿ ಶಾಲಾ ಮಕ್ಕಳನ್ನು ಬಿ.ಜೆ.ಪಿ. ಪ್ರತಿಭಟನೆಗೆ ಬಳಸಿರುವುದನ್ನು ಖಂಡಿಸಿದ ಅವರು ಇಂತಹ ರಾಜಕಾರಣ ಸರಿಯಲ್ಲ ಎಂದರು. 

ಕೇಂದ್ರ ಸಚಿವ ಅನಂತಕುಮಾರ್ ಅವರ ಹೆಸರು ಹೇಳದೇ ಟೀಕಿಸಿದ ಅವರು ಕೇಂದ್ರದ ಮಂತ್ರಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅರಣ್ಯಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರಕಾರವೇ ಕೆಲವೊಂದು ಕಾನೂನು ಬದಲಾವಣೆ ಮಾಡಬೇಕಾಗಿದ್ದು  ಮಂತ್ರಿಯಾಗಿ ಅಂತಹ ಕೆಲಸ ಮಾಡುವುದನ್ನು ಬಿಟ್ಟು ಎರಡು ಕೋಮುಗಳ ನಡುವೆ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ ಎಂದು ದೂರಿದರು. 

ಇತ್ತೀಚೆಗೆ ಯಾರೇ ಸತ್ತರೂ ಕೂಡಾ ಅವರು ಬಿ.ಜೆ.ಪಿ., ಭಜರಂಗ ದಳದ ಕಾರ್ಯಕರ್ತರು ಎನ್ನುವುದನ್ನು ರೂಢಿಸಿಕೊಂಡಿದ್ದು ಸರಕಾರವನ್ನು ನರಹಂತಕ ಸರಕಾರ ಎಂದು ದೂರುತ್ತಿದ್ದಾರೆ. ಯಡ್ಯೂರಪ್ಪನವರ ಜನ ಸಂಪರ್ಕ ಯಾತ್ರೆಯನ್ನು ಠೀಕಿಸಿದ ಅವರು ಜನರ ಪರವಾಗಿ ಅವರ ಸಮಸ್ಯೆ ಪರಿಹಾರಕ್ಕಾಗಿ ಮೆರವಣಿಗೆಯನ್ನು ಮಾಡುವಂತೆ ಕರೆ ನೀಡಿದರು. 

ಜೆ.ಡಿ.ಎಸ್. ಭಟ್ಕಳ ಕ್ಷೇತ್ರದ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ದ್ವಿತೀಯ ಸ್ಥಾನವನ್ನು ಗಳಿಸಿದ ನಮ್ಮ ಪಕ್ಷ ಈ ಬಾರಿ ಗೆಲುವು ನಿಶ್ಚಿತ. ಹಲವರು ನೀವು ನಿಂತರೆ ಬಿ.ಜೆ.ಪಿ. ಗೆಲ್ಲುತ್ತದೆ ಎನ್ನುತ್ತಾರೆ. ಹುಲಿ ಬರುತ್ತದೆ ಎಂದು ಓಡಿ ಹೋಗುವವ ನಾನಲ್ಲ, ಹುಲಿ ಬಂದರೆ ಅದನ್ನು ಕತ್ತಿ, ತಲವಾರು ಹಿಡಿದು ಓಡಿಸುವ ಜಾಯಮಾನ ನನ್ನದು ಎಂದರು. 

ಕಾರ್ಯಕ್ರಮದಲ್ಲಿ ಗುಣವಂತೆಯ ಶಂಭು ಗೌಡ ಅವರು ಜೆ.ಡಿ.ಎಸ್. ಸೇರ್ಪಡೆಗೊಂಡರು.
ವೇದಿಕೆಯಲ್ಲಿ ರಾಜ್ಯ ಸಭಾ ಅಭ್ಯರ್ಥಿ ಬಿ.ಎಂ. ಫಾರೂಕ್ ಬಾವಾ,  ಶಾಸಕ ಮಧು ಬಂಗಾರಪ್ಪ, ಮರಿತಿಬ್ಬೇಗೌಡ, ಬಿ.ಆರ್. ನಾಯ್ಕ, ಗಣಪಯ್ಯ ಗೌಡ , ಗಣಪತಿ ಭಟ್ಟ ಕೊರ್ಲಿಕಾನ್, ಪ್ರದೀಪ ನಾಯ್ಕ ದೇವರಬಾವಿ, ರವೀಂದ್ರನಾಥ ನಾಯ್ಕ, ಸೈಯದ್ ಮೊಹಿದ್ದೀನ್ ಅಲ್ತಾಫ್, ಮೋಹಿನಿ ನಾಯ್ಕ, ಯೋಗೇಶ ಶೆಟ್ಟಿ, ರವಿ ಶೆಟ್ಟಿ, ಗಂಗಾಧರ, ಪಾಂಡು ನಾಯ್ಕ, ವೆಂಕಟೇಶ ನಾಯ್ಕ, ಜೈನುಲ್ಲಾಬಿದಿನ್ ಫಾರೂಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 


ಅಪಾರ್ಥಕ್ಕೀಡಾದ  ಜನಸುರಕ್ಷಾ ಯತ್ರೆ
ಉ.ಪ್ರ. ರಾಜ್ಯದಲ್ಲಿ ಜನರು ಅಸುರಕ್ಷಿತರಾಗಿದ್ದು ಮಕ್ಕಳು ಆಸ್ಪತ್ರೆಯಲ್ಲಿ ಅಸುನೀಗುತ್ತಿದ್ದಾರೆ. ಅಂತಹ ರಾಜ್ಯದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥರನ್ನು ಕರೆಸಿ ಜನಸುರಕ್ಷಾ ಯಾತ್ರೆಯಲ್ಲಿ ಭಾಷಣ ಮಾಡಿಸುತ್ತಾರೆ ಎಂದರೆ ನಮ್ಮ ರಾಜ್ಯದ ಬಿಜೆಪಿಗರ ಪರಿಸ್ಥಿತಿ ನಿಮಗೆ ಅರ್ಥವಾಗಿರಬಹುದು. ಕರಾವಳಿಯಲ್ಲಿ ಹಲವು ಸಮಸ್ಯೆಗಳಿವೆ ಅವುಗಳ ವಿರುದ್ಧ ದ್ವನಿಯಾಗಬೇಕಾದ ಈ ಭಾಗದ  ಕಳೆದ 20 ವರ್ಷಗಳಿಂದ ಸಂಸದ ರಾಗಿರುವವರು (ಈಗ ಕೇಂದ್ರ ಮಂತ್ರಿಯೂ ಆಗಿದ್ದಾರೆ) ಯಾವುದೇ ಕೆಲಸ ಮಾಡದೇ ಹಿಂದೂ-ಮುಸ್ಲಿಮರ ಮಧ್ಯೆ ಒಡಕನ್ನುಂಟು ಮಾಡುತ್ತ ಜಿಲ್ಲೆಗೆ ಬೆಂಕಿಯನ್ನು ಹಾಕುತ್ತಿದ್ದಾರೆ. -ಕುಮಾರ ಸ್ವಾಮಿ

ಫಾರೂಖ್ ಬಾವಾ ರಿಗೆ ಟೊಪ್ಪಿ ಹಾಕಿದ್ದು ಗೊತ್ತಿದೆ
ಕುಮಾರ ಸ್ವಾಮಿಯವರು ತಮ್ಮ ಭಾಷಣದಲ್ಲಿ ಸ್ಥಳಿಯ ಶಾಸಕರ 1500ಕೋಟಿ ಅಭಿವೃದ್ಧಿ ಯೋಜನೆಗಳ ಕುರಿತು ಹಾಕಿರುವ ಫ್ಲಕ್ಸ್ ಗಳನ್ನು ಪ್ರಸ್ತಾಪಿಸಿ ಇಲ್ಲಿನ ಕೇವಲ ಬೋರ್ಡ್‍ಗಳು ಮಾತ್ರ ಕಾಣುತ್ತಿವೆ ಅಭಿವೃದ್ಧಿ ಮರೆಯಾಗಿದೆ. ಇವರು ಯಾವ ಅಭಿವೃದ್ಧಿ ಮಾಡುತ್ತಾರೆ ಎನ್ನುವುದು ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಂಡಿದ್ದೇನೆ. ಫಾರೂಖ್ ಬಾವರಿಗೆ ಟೊಪ್ಪಿ ಹಾಕಿದ್ದು ಇನ್ನು ಮರೆತಿಲ್ಲಿ ಅದರ ಲೆಕ್ಕಚಾರ ಇನ್ನೂ ಬಾಕಿಯಿದೆ. ಇಂತಹ ವ್ಯಕ್ತಿಗಳಿಂದ ಯಾವ ರೀತಿಯ ಅಭಿವೃದ್ಧಿ ಆಗುತ್ತದೆ ಎನ್ನುವುದು ನಮಗೆ ಗೊತ್ತಿದೆ ಎಂದು ಕೊಂಕಿಸಿದರು. 

ಜೆಡಿಎಸ್ ಅಧಿಕಾರಕ್ಕೆ ಬಂದರೆ ಗರ್ಭಿಣಿ ಸ್ತ್ರೀಯರಿಗೆ ಪ್ರತಿ ತಿಂಗಳು 6ಸಾವಿರದಂತೆ 6ತಿಂಗಳು 36ಸಾವಿರ ಸಹಾಯಧನ ನೀಡಲಾಗುವುದು, 70 ವರ್ಷದ ವಯೋವೃದ್ಧರಿಗೆ ಪ್ರತಿ ತಿಂಗಳು 5ಸಾವಿರ ಗೌರವ ಧನ ನೀಡಲಾಗುವುದು. ಅಲ್ಪಸಂಖ್ಯಾತ ಸ್ತ್ರೀಯರು ಸೇರಿದಂತೆ ಎಲ್ಲಾ ಸಮುದಾಯದ ಮಹಿಳೆಯರಿಗೆ ಗೃಹ ಉದ್ಯೋಗಕ್ಕಾಗಿ ವಿಶೇಷ ರೀತಿಯ ಯೋಜನೆ ಹಾಕಿಕೊಳ್ಳಲಾಗುವುದು. ಸ್ರೀಶಕ್ತಿ ಸಂಘದ ಸದಸ್ಯರಿಗೆ ಸರ್ಕಾರದಿಂದ ಬಡ್ಡಿರಹಿತ ಸಾಲ, ಆರ್ಥಿಕ ಶಕ್ತಿಯನ್ನು ತುಂಬುವುದು,  5ರಿಂದ 10ಲಕ್ಷ ಕುಟುಂಬ ಗಳಿಗೆ ಸಸಿ ನೆಡುವ ಯೋಜನೆ ರೂಪಿಸುವುದು ಇದರಿಂದ ಪ್ರತಿ ತಿಂಗಳು 5ಸಾವಿರ ವರಬರುವಂತೆ ನೋಡಿಕೊಳ್ಳುವುದು. ಆನಸಾಮಾನ್ಯರ ಬದುಕು ಉತ್ತಮವಾಗಬೇಕು, ಹಿಂದು ಮುಸ್ಲಿಮ್ ಎಂಬ ಬೇಧಭಾವವನ್ನು ತೊಲಗಿಸಿ ಸಮೃದ್ಧ ಕರ್ನಾಟಕ ನನ್ನ ಗುರಿಯಾಗಿದೆ ಎಂದು ಕುಮಾರ್ ಸ್ವಾಮಿ ಹೇಳಿದರು. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...