ಭಟ್ಕಳ: ಇಲ್ಲಿನ ಮಾವಳ್ಳಿ-1ರ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 2 ವರ್ಷದಿಂದ ಇದರ ವ್ಯಾಪ್ತಿಯ ಪಡಿತದಾರರಿಗೆ ರೇಶನ್ ವಿತರಿಸಲು ಸಮಸ್ಯೆಯಾಗುತ್ತಿದ್ದು, ಇದರಿಂದಾಗಿ ತಿಂಗಳ ಪ್ರತಿದಿನವೂ ಮುಂಜಾನೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ರೇಶನ ಪಡೆಯಬೇಕಾಗಿದೆ.
ಇಲ್ಲಿನ ಮಾವಳ್ಳಿ 1- ಹಾಗೂ 2 ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 25 ಮಜಿರೆಯ 17,062 ಜನಸಂಖ್ಯೆಯುಳ್ಳ ಪ್ರದೇಶಕ್ಕೆ 30ದಿನದೊಳಗಾಗಿ ರೇಶನ ವಿತರಿಸುವುದು ಅಸಾಧ್ಯದ ಮಾತಾಗಿದೆ. ಕಳೆದ 2-3 ವರ್ಷದಿಂದ ರೇಶನ ವಿತರಣೆಯಲ್ಲಿ ಪಡಿತರದಾರರಿಗೆ ಕಿರಿಕಿರಿಯಾಗುತ್ತಿದ್ದು, ರೇಶನ ವಿತರಿಸುತ್ತಿರುವ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘವೂ ಜನರಿಗಾಗುವ ಹಾಗೂ 30 ದಿನದಲ್ಲಿ ವಿತರಿಸಲು ರೇಶನ ಅಂಗಡಿದಾರರಿಗೆ ಭಾರಿ ಒತ್ತಡವಾಗುತ್ತಿರುವ ಬಗ್ಗೆ ಸಂಘದ ಸಭೆಯಲ್ಲಿ ಸದಸ್ಯರ ಒಮ್ಮತದೊಂದಿಗೆ ಠರಾವು ಮಾಡದೇ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳುತ್ತಿದ್ದಾರೆ.
ಈ ಹಿಂದೆ ಇಲ್ಲಿ ಇರುವ ಆಯಾ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಯಿದ್ದು, ಆಗ ಮಾವಳ್ಳಿ-2ರಲ್ಲಿ ಖಾಸಗಿಯವರು ನಡೆಸಿಕೊಂಡು ಬರುತ್ತಿದ್ದ ವೇಳೆ ಕೆಲವು ಸಮಸ್ಯೆಯಿಂದ ಮುಚ್ಚಿ ಈಗ ಮಾವಳ್ಳಿ-1 ರಲ್ಲಿಯೇ ಒಂದೇ ಕಡೆ ಎರಡು ಪಂಚಾಯತ್ ವ್ಯಾಪ್ತಿಯ ರೇಶನ್ ವಿತರಣೆ ಮಾಡುತ್ತಿದ್ದು, ಆದರೆ ಜನರಿಗೆ ಪಡಿತರ ಪಡೆದುಕೊಳ್ಳುವುದೇ ಇನ್ನಷ್ಟು ತೊಂದರೆಯಾಗುತ್ತಿದೆ.
ಮಾವಳ್ಳಿ-1 ಗ್ರಾಮ ಪಂಚಾಯತನಲ್ಲಿ 13 ಮಜಿರೆಯಿಂದ 10,439 ಜನಸಂಖ್ಯೆಯಿದ್ದು, ಅದೇ ರೀತಿ ಮಾವಳ್ಳಿ-2 ಗ್ರಾಮ ಪಂಚಾಯತನಲ್ಲಿ 12 ಮಜಿರೆಯಿಂದ 6,623 ಜನಸಂಖ್ಯೆಯಿದೆ. ಸದ್ಯ ಮಾವಳ್ಳಿ-1 ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ರೇಶನ ವಿತರಿಸುವ ಕೇಂದ್ರಕ್ಕೆ ಮಾವಳ್ಳಿ-2 ವ್ಯಾಪ್ತಿಯ ದೂರದ ಗ್ರಾಮೀಣ ಪ್ರದೇಶವಾದ ಇಲ್ಲಿನ ಕೋಟದಮಕ್ಕಿ, ಕೋಡ್ಸುಲು, ಮೀಡ್ಲು, ಹಡಾಲ್ ಸೇರಿದಂತೆ ಒಟ್ಟು 10-15 ಕಿ.ಮೀ. ದೂರದ ಜನರು ಬರಬೇಕಾಗಿದ್ದು, ಈಗಿನ ಬಯೋಮೇಟ್ರಿಕ ವ್ಯವಸ್ಥೆಯಿಂದ ಜನರು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದ ಪಡಿತರದಾರಿಗೆ ದಿನದಲ್ಲಿ 40ರಿಂದ 50 ಮಂದಿಗೆ ಮಾತ್ರ ರೇಶನ ವಿತರಿಸಲು ಸಾಧ್ಯವಾಗುತ್ತಿದ್ದು, ಒಂದು ವೇಳೆ ಸರ್ವರ ಸಮಸ್ಯೆಯಿಂದ ಬಯೋಮೆಟ್ರಿಕ್‍ನಲ್ಲಿ ಏನಾದರು ಸಮಸ್ಯೆಯುಂಟಾದರೆ ದೂರದ ಪ್ರದೇಶದಿಂದ ಬಂದವರು ರೇಶನ ಪಡೆಯದೇ ಹಿಂದಿರುಗಬೇಕಾಗುತ್ತದೆ. ರೇಶನ ಸಿಗದ ಹಿನ್ನೆಲೆಯಲ್ಲಿ ದೂರದ ಪ್ರದೇಶದ ಜನರು ರೇಶನ್ ಪಡೆಯಲು ಮುಂಜಾನೆ 4ಗಂಟೆಗೆ ಬಂದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಮಾವಳ್ಳಿ-2 ಗ್ರಾಮ ಪಂಚಾಯತ್ ಸಹ ಸಾಮನ್ಯ ಸಬೆಯಲ್ಲಿ ರೇಶನ ವಿತರಣೆಯಲ್ಲಿ ಜನರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಠರಾವು ಮಾಡಿ ಇಲಾಖೆಗೆ ಕಳುಹಿಸಿ ಆ ಮೂಲಕ ಒತ್ತಡ ಹಾಕಿ ಸಮಸ್ಯೆಯನ್ನು ಪರಿಹರಿಸಕೊಳ್ಳಬಹುದಾಗಿದೆ.
ಜವಾಬ್ದಾರಿ ವಹಿಸಬೇಕಾಗಿದೆ ವ್ಯವಸಾಯ ಸಹಕಾರಿ ಸಂಘ: ಸದ್ಯ ರೇಶನ ಪಡೆಯಲು ಎರಡು ಪಂಚಾಯತ್ ಜನರು ಮಾವಳ್ಳಿ-1ಕ್ಕೆ ಬರಬೇಕಾಗಿದ್ದು, ಪಡಿತರ ಸಿಗದೇ ಕಾಯಬೇಕಾಗಿದೆ. ಎರಡು ಪಂಚಾಯತ್ ಜನರಿಗೆ ಒಂದೇ ನ್ಯಾಯಬೆಲೆ ಅಂಗಡಿಯಲ್ಲಿ ರೇಶನ ವಿತರಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಂಘದ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಒಮ್ಮತದಿಂದ ಠರಾವು ಮಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಕಳುಹಿಸಿ ಸಮಸ್ಯೆಯ ಜವಾಬ್ದಾರಿ ಹೊತ್ತು ಇತ್ಯರ್ಥ ಮಾಡಬೇಕಾಗಿದೆ.
ಜಿಲ್ಲಾಧಿಕಾರಿಗಳೇ ಇತ್ತ ಕಡೆ ಸ್ವಲ್ಪ ಗಮನ ನೀಡಿ: 10-15 ಕಿ.ಮೀ. ದೂರದ ಗ್ರಾಮೀಣ ಪ್ರದೇಶದಿಂದ ಜನರು ಪಡಿತರಕ್ಕಾಗಿ ಕಾದು ಕುಳಿತುಕೊಳ್ಳಬೇಕಾಗಿದ್ದು, ಪಡಿತರರಿಗಾಗುವ ತೊಂದರೆಯ ಬಗ್ಗೆ ಆಹಾರ ಇಲಾಖೆಯಿಂದ ಮಾಹಿತಿ ಪಡೆದು ಸಮರ್ಪಕ ರೀತಿಯಲ್ಲಿ ಪಡಿತರಕ್ಕಾಗಿ ಜನರು ಕಾಯದೇ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
'ಎರಡು ಪಂಚಾಯತ್ ವ್ಯಾಪ್ತಿಯ ಜನರಿಗೆ ಒಂದೇ ಕಡೆ ರೇಶನ ಪಡೆಯಲು ಸಮಸ್ಯೆಯಾಗುತ್ತಿದ್ದು, ಈ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದು, ಮಾವಳ್ಳಿ-2 ಪಂಚಾಯತ್ ವ್ಯಾಪ್ತಿಯ ಜನರಿಗೆ ಅನೂಕುಲವಾಗುವಂತೆ ಅದರ ವ್ಯಾಪ್ತಿಯಲ್ಲಿಯೇ ಸೂಕ್ತ ಕಟ್ಟಡವನ್ನು ಇಲಾಖೆಯ ಮೂಲಕ ನಿಗದಿ ಪಡಿತರ ವಿತರಣೆ ಅನೂಕುಲ ಮಾಡಿಕೊಡಬೇಕೆಂದು ಕೃಷ್ಣ ನಾಯ್ಕ ಜಮೀನ್ದಾರ್- ಮಾವಳ್ಳಿ-1 ಪಂಚಾಯತ್ ಸದಸ್ಯ ಮನವಿ ಮಾಡಿದರು
Read These Next
ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ...
ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ
ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...
ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ತಂಝೀಮ್ ತೀವ್ರ ಖಂಡನೆ
ಭಟ್ಕಳ: ಪುಲ್ವಾಮದಲ್ಲಿ 40 ಮಂದಿ ಸೈನಿಕರ ಮೇಲೆ ನಡೆದ ಭಯೋತ್ಪಾದನಾ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಟ್ಕಳದ ಮಜ್ಲಿಸೆ ...
ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್ಗೆ ಸೀಮಿತಗೊಳಿಸುವ ...
ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ...
ಕಾಂಗ್ರೇಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಮಜೀದ್
ಭಟ್ಕಳ: ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾಗಿ ಭಟ್ಕಳ ತಾಲೂಕಿನ ಬೆಳಲಖಂಡದ ಅಬ್ದುಲ್ ಮಜೀದ್ ಅಮೀರ್ ಸಾಬ್ ...
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?
ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...
ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...
ಹವಾಮಾನ ಬದಲಾವಣೆ ಮತ್ತು ಬಡವರು
ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...
ವಂಶಪಾರಂಪರ್ಯದ ರಾಜಕಾರಣ ಮತ್ತು ಪ್ರಜಾತಂತ್ರ
ಈ ವಿಷಯದ ಬಗ್ಗೆ ಬಿಜೆಪಿ ಪಕ್ಷದ ಪ್ರತಿಕ್ರಿಯೆ ಕೇವಲ ಆಷಾಢಭೂತಿತನದಿಂದ ಮಾತ್ರ ಕೂಡಿಲ್ಲ. ಬದಲಿಗೆ ಅವಿವೇಕತನದಿಂದಲೂ ಕೂಡಿದೆ. ...
ಸಾವಿನ ಕೂಪ ದ ಲ್ಲಿ ಗಣಿಗಾರಿಕೆ
ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...
ಕುಸಿಯುತ್ತಿರುವ ನ್ಯಾಯಾಂಗದ ವಿಶ್ವಾಸಾರ್ಹತೆ
ನ್ಯಾಯಾಂಗವು ತಾನೇ ಹಾಕಿಕೊಂಡ ಕಟ್ಟುಕಟ್ಟಳೆಗಳನ್ನು ಅನುಸರಿಸದ ಮತ್ತು ಉತ್ತರದಾಯಿತ್ವವನ್ನು ಪಾಲಿಸದ ಸಾಂಸ್ಥಿಕ ಸಮಸ್ಯೆಗಳಿಂದ ...