ಎಲ್ಲರನ್ನೂ ಒಳಗೊಳ್ಳುವ ಹಿಂದೂತ್ವ- ಯಾರ ಒಳಿತಿಗಾಗಿ?

Source: sonews | By Staff Correspondent | Published on 25th September 2018, 11:53 PM | State News | National News | Special Report | Don't Miss |

ತಮ್ಮದು ಎಲ್ಲರನ್ನೂ ಒಳಗೊಳ್ಳುವ ಹಿಂದೂತ್ವವೆಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷಣೆಯು ತೋರಿಕೆಯದ್ದೇ ವಿನಃ ನೈಜವಾದದ್ದಲ್ಲ.

ಸಾರ್ವತ್ರಿಕ ಚುನಾವಣೆಗಳು ಹತ್ತಿರಬರುತ್ತಿದ್ದಂತೆ ದೇಶದ ವಿವಿಧ ರಾಜಕೀಯ ಶಕ್ತಿಗಳು ತಮ್ಮ ತಮ್ಮ ರಾಜಕೀಯ ನೆಲೆ-ನಿಲುವುಗಳನ್ನು ರೂಪಿಸಿಕೊಳ್ಳುತ್ತಾ ಅಥವಾ ಪುನರ್ರಚಿಸಿಕೊಳ್ಳುತ್ತಾ ತಾವು ಭಾವಿಸಿಕೊಂಡ ರೀತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಬಲ್ಲ ಹೊಂದಾಣಿಕೆಯನ್ನು ಮುಂದಿಡುತ್ತಿವೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ ಎಲ್ಲಾ ರೂಪಿತ ಅಥವಾ ಪುನರ್ರೂಪಿತ ಹೊಂದಾಣಿಕೆಗಳೆಲ್ಲವು sಸರ್ವಜನರ ಹಿತದ ಹೆಸರಲ್ಲಿ ನಡೆಯುತ್ತಿದ್ದರೂ ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ. ಉದಾಹರಣೆಗೆ ವಿರೋಧಪಕ್ಷಗಳು ತಾವೆಲ್ಲರೂ ಸಾರ್ವತ್ರಿಕ ಮೌಲ್ಯವಾದ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಮತ್ತು ಭಯಭೀತಿಗಳಿಲ್ಲದ ಸ್ವಾತಂತ್ರ್ಯಕ್ಕೆ ಬದ್ಧವಾಗಿದ್ದು ಅದಕ್ಕಾಗಿ ಪರಸ್ಪರರ ನಡುವಿನ ಹೊಂದಾಣಿಕೆ ತತ್ವಬದ್ಧ ಹೊಂದಾಣಿಕೆ ಮಾಡಿಕೊಂಡಿದ್ದೇವೆಂದು ಹೇಳುತ್ತಿರುವಂತೆ ಕಾಣುತ್ತಿದೆ. ರಾಜಕೀಯ ರಂಗದ ಮತ್ತೊಂದು ತುದಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಬಿಜೆಪಿ ಪಕ್ಷಗಳು ಹಿಂದೂತ್ವದಿಂದ ಮಾತ್ರ ಸರ್ವಜನರ ಹಿತವನ್ನು ಸಾಧಿಸಲು ಸಾಧ್ಯವೆಂದು ಸಾರ್ವಜನಿಕರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿz ಆತ್ಮವಿಶ್ವಾಸದ ಮುಸುಕಿನಲ್ಲಿ ಆರೆಸ್ಸೆಸ್ಸಿನ ಮುಖ್ಯಸ್ಥರು ತುಂಬಾ ಲೆಕ್ಕಾಚಾರದ ಹಾಕಿ ಮುಂದಿಡುತ್ತಿರುವ ಸರ್ವರನ್ನೂ ಒಳಗೊಳ್ಳುವ ನಿಲುವಿನ ಹಿಂದೆ ಯಾವುದೇ ಆದರ್ಶದ ಬದ್ಧತೆಯಿಲ್ಲ.

ತಮ್ಮ ಭಾಷಣಗಳ ಸರಣಿಯ ಮೂಲಕ ಮತ್ತು ಅಮಿತ್ ಶಾ-ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡದ ಮೂಲಕ ಆರೆಸ್ಸೆಸ್ಸಿನ ಮುಖ್ಯಸ್ಥರು ತಮ್ಮ ನಿಲುವುಗಳನ್ನು ಪುನರ್ರಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಹಾಲೀ ಸರ್ಕಾರದ ನೀತಿಗಳ ವಿರುದ್ಧ ಹೆಚ್ಚುತ್ತಿರುವ ವ್ಯಾಪಕ ಅಸಮಾಧಾನವನ್ನು ಗಮನಿಸಿಯೇ ಆರೆಸ್ಸೆಸ್ ಬಗೆಯ ಒಳಗೊಳ್ಳುವ ನಿಲುವನ್ನು ತೆಗೆದುಕೊಳ್ಳುತ್ತಿದೆಯೆಂದೂ ಸಹ ಅರ್ಥಮಾಡಿಕೊಳ್ಳಬಹುದು. ರಾಜಕೀಯ ಅಧಿಕಾರದ ಯಂತ್ರಾಂಗಗಳ ಮೇಲೆ ತಮ್ಮ ಹಿಡಿತವನ್ನು ಮುಂದುವರೆಸಿಕೊಂಡು ಹೋಗುವ ಮೂಲಭೂತ ಉದ್ದೇಶವನ್ನಿಟ್ಟುಕೊಂಡೇ  ಹಿಂದೂತ್ವದ ಒಳಾರ್ಥದ ವ್ಯಾಖ್ಯಾನವನ್ನು ವಿಸ್ತೃತಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹೀಗಾಗಿ ರಾಜಕೀಯ ಅಧಿಕಾರದ ಬಗ್ಗೆ ತಮಗೇ ಯಾವುದೇ ಆಸಕ್ತಿಯಿಲ್ಲವೆಂಬ ಆರೆಸ್ಸೆಸ್ಸಿನ ಪುನರ್ಘೋಷಿತ ನಿಲುವು ಒಂದು ರಕ್ಷಣಾತ್ಮಕ ತಂತ್ರವಾಗಿದೆ; ತನ್ನ ಹಿಂದೂತ್ವ ಕಾರ್ಯಸೂಚಿಯನ್ನು ಮುಂದುಮಾಡುವ ರಾಜಕೀಯ ಆಶಯದ ಪುನರ್ ಪ್ರತಿಪಾದನೆಯೇ ಆಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ಹೇಳುವುದಾದರೆ ಸಾರ್ವಜನಿಕರ ಎದಿರು ಆರೆಸ್ಸೆಸ್ಸ್ ತನ್ನ ಮೃದು ಸ್ವರೂಪದ ಪ್ರದರ್ಶನ ಮಾಡುತ್ತಿದೆ.

ಆದರೆ ಹಿಂದೂತ್ವವು ಸಕಲರಿಗೂ ಲೇಸನ್ನೇ ಬಯಸುವ ಸಾರವನ್ನು ಹೊಂದಿದೆ ಎಂಬ ಅದರ ಪ್ರಚಾರದ ಬಗ್ಗೆ  ತುಂಬಾ ಮೂಲಭೂತವಾದ ಪ್ರಶ್ನೆಗಳನ್ನು ಅತ್ಯಂತ ಗಂಭೀರವಾಗಿ ಕೇಳಬೇಕಿದೆಶೋಷಕ ಸಾಮಾಜಿಕ ಅಧಿಕಾರ ರಚನೆಗಳಿಂದಾಗಿ ಹುಟ್ಟಿಕೊಳ್ಳುತ್ತಿರುವ ಬಗೆಹರಿಸಲಾಗದ ಸಮಾಜೋ-ಆರ್ಥಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳ ಬಗ್ಗೆ ಯಾವುದೇ ಸಂವೇದನೆಯಿಲ್ಲದ ಘೋಷಣೆಯು ಕೇವಲ ಬುರುಡೆ ಮಾತಷ್ಟೇ ಆಗಿದೆ. ಇಂಥಾ ಗಂಭೀರ ವೈರುಧ್ಯಗಳನ್ನು ನಿವಾರಿಸುವ ಯಾವುದೇ ಪ್ರಯತ್ನವನ್ನೂ ಮಾಡದೆ ಹಿಂದೂತ್ವವನ್ನು ನೇರವಾಗಿ ಸರ್ವಮಾನ್ಯ ಸರ್ವಹಿತದ ಆಯ್ಕೆಂiನ್ನಾಗಿಸುವ ಪ್ರಯತ್ನವನ್ನು ಆರೆಸ್ಸೆಸ್ ಮಾಡುತ್ತಿದೆ. ಅಸ್ಥಿತ್ವದಲ್ಲಿರುವ ಅಸಮಾನತೆ, ಅನ್ಯಾಯ, ಮತ್ತು ಸಮಾಜದ ಕೆಲವು ಅತಂತ್ರ ಗುಂಪುಗಳು ನಿರಂತರವಾಗಿ ಎದುರಿಸುತ್ತಿರುವ ಅಪಮಾನ ಮತ್ತು ಭೀತಿಯ ಸಮಸ್ಯೆಗಳನ್ನು ಮೊದಲು ಪರಿಗಣಿಸಿ ನಂತರದಲ್ಲಿ ಅದನ್ನು ಬಗೆಹರಿಸುವ ಯಾವುದೇ ಗಂಭೀರ ಪ್ರಯತ್ನಗಳನ್ನೂ ಮಾಡದ ಆರೆಸ್ಸೆಸ್ ಮುಖ್ಯಸ್ಥರು ಒಂದೇ ಜಿಗಿತದಲ್ಲಿ ಸರ್ವಮಾನ್ಯ ಹಿಂದೂತ್ವದ ಗಮ್ಯಸ್ಥಾನವನ್ನು ಸೇರುವ ಪ್ರಯತ್ನವನ್ನು ನಡೆಸಿದ್ದಾರೆ. ತಮಗೆ ತಾವು ಕೆಲವು ಗಂಭೀರ ಪ್ರಶ್ನೆಗಳನ್ನು ಹಾಕಿಕೊಂಡು ಸ್ವಲ್ಪವ್ವಾದರೂ ಆತ್ಮ ನಿರೀಕ್ಷಣೆ ಮಾಡಿಕೊಳ್ಳುವ ಯಾವುದೇ ಪ್ರಯತ್ನ ಮಾಡದೆ ಸರ್ವಮಾನ್ಯ ಹಿಂದೂತ್ವದ ಬಗ್ಗೆ ಸಾರ್ವತ್ರಿಕ ಪ್ರತಿಪಾದನೆ ಮಾಡುವ ಮೂಲಕ ಆರೆಸ್ಸೆಸ್ ಒಂದು ಉದಾರವಾದಿ ಗುಣಲಕ್ಷಣಗಳನ್ನು ಸಹ ತೋರ್ಪಡಿಸಿಲ್ಲ. ಉದಾಹರಣೆಗೆ ಜಾತಿ, ಕೋಮು ಮತ್ತು ಲಿಂಗಾಧಾರಿತ ಹಿಂಸಾಚಾರಗಳು ಸಮಾಜದಲ್ಲಿ ಪುನರುತ್ಪಾದಿತಗೊಳ್ಳುವಲ್ಲಿ ತಮ್ಮ ಸಂಘಟನೆಯ ಪಾತ್ರವೆಷ್ಟು ಎಂಬುದು ಅಂಥಾ ಒಂದು ಆತ್ಮವಿಮರ್ಶಾತ್ಮಕ ಪ್ರಶ್ನೆಯಾಗಬೇಕು. ಪ್ರಯತ್ನದ ಭಾಗವಾಗಿ ಆರೆಸ್ಸೆಸ್ ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುತ್ತದೆಂಬ ಅದರ ಘೊಷಣೆಗಳನ್ನು ನಂಬುವ ಮುನ್ನ ಅಂತರ್ಜಾತಿ ಮದುವೆಗಳ ಬಗ್ಗೆ ಅಸ್ಥಿತ್ವದಲ್ಲಿರುವ ಪಿತೃಸ್ವಾಮ್ಯ ಅಸಹನೆಯನ್ನು ಅದು ಕಟುವಾಗಿ ವಿಮರ್ಶಿಸಬೇಕೆಂದು ಯಾರೇ ಆದರೂ ನಿರೀಕ್ಷಿಸುತ್ತಾರೆ. ಅದೇ ರೀತಿ ಆರೆಸ್ಸೆಸ್ ಮುಖ್ಯಸ್ಥರು ಉಜ್ವಲ ಭಾರತದ ಬಗ್ಗೆ ಕೊಚ್ಚಿಕೊಳ್ಳುವ ಮುನ್ನ ಅದೇ ಭಾರತದಲ್ಲಿ ಬಹಿಷ್ಕೃತ ಭಾರತವೇಕಿದೆ ಎಂಬುದರ ಬಗ್ಗೆ ವಿಶ್ಲೇಷಿಸಬೇಕೆಂಬ ನಿರೀಕ್ಷೆ ಹುಟ್ಟಿಕೊಳ್ಳುತ್ತದೆ. ಸಂದರ್ಭದಲ್ಲಿ ಭಾರತದ ರಾಷ್ಟ್ರೀಯವಾದಿಗಳು ಪುರಸ್ಕೃತ ಭಾರತದ ಬಗ್ಗೆ ಮಾತ್ರ ಮಾತನಾಡುತ್ತಿರುವಾಗ ಜ್ಯೋತಿಬಾ ಫುಲೆ, ಡಾ. ಬಿ.ಆರ್.ಅಂಬೇಡ್ಕರ್ ಅವರುಗಳು ಬಹಿಷ್ಕೃತ ಭಾರತವನ್ನು ಮುನ್ನೆಲೆಗೆ ತರಲು ನಡೆಸಿದ ಪ್ರಯತ್ನಗಳನ್ನು ನಾವು ನೆನೆಪಿಸಿಕೊಳ್ಳಬೇಕು. ಹಿಂದೂತ್ವವನ್ನು ಸರ್ವ ಮಾನ್ಯಗೊಳಿಸುವಲ್ಲಿ ತೋರುತ್ತಿರುವ ಆತ್ಮ ವಿಶ್ವಾವು ಅಂಥಾ ಆತ್ಮ ವಿಮರ್ಶೆಗಳಿಗೆ ಬೇಕಾದ ನೈತಿಕ ಸ್ಥೈರ್ಯವನ್ನು ಮೂಲೆಗುಂಪು ಮಾಡುತ್ತಿದೆ.

ವಿರೋಧ ಪಕ್ಷಗಳೂ ಸಹ ಇಂಥಾ ಆತ್ಮ ನಿರೀಕ್ಷಣೆಯನ್ನು ಸವಾಲನ್ನು ಗಂಭೀರವಾಗಿ ಸ್ವೀಕರಿಸುವುದು ಸಾಮಾಜಿಕವಾಗಿ ಮತ್ತು ನೈತಿಕವಾಗಿ ಅತ್ಯಗತ್ಯವಾಗಿದೆ. ಸವಾಲನ್ನು ಸ್ವೀಕರಿಸುವ ಮೂಲಕ ಭಾರತ ಗಣರಾಜ್ಯವು ಪ್ರಜಾತಂತ್ರ ಮತ್ತು ಘನತೆಯನ್ನು ಕಾಪಿಟ್ಟುಕೊಳ್ಳುವ ಗಣರಾಜ್ಯವನ್ನಾಗಿ ಮಾಡಲು ಒಂದು ಕಾರ್ಯಸಾಧು ಪರ್ಯಾಯ ಕಾರ್ಯಸೂಚಿಯನ್ನು ಸಾಮೂಹಿಕವಾಗಿ ಸಿದ್ಧಗೊಳಿಸಬೇಕಿದೆ

ಹೀಗಾಗಿ ವಿರೋಧಪಕ್ಷಗಳ ನಡುವೆ ಸೌಹಾರ್ದ ಏರ್ಪಡಬೇಕಿರುವುದು ಹಗಲುಗನಸೂ ಆಗಬೇಕಿಲ್ಲ ಅಥವಾ ಕೇವಲ ಪದಗಳ ವೀಜೃಂಭಣೆಯೂ ಆಗಬೇಕಿಲ್ಲ; ಅದಕ್ಕೆ ತದ್ವಿರುದ್ಧವಾಗಿ ಅದೊಂದು ನಿಜಕ್ಕೂ ಒಂದು ಕಠಿಣವಾದ ಸವಾಲೇ ಆಗಿದೆ. ಹಾಗಿರುವಾಗ ವಿರೋಧ ಪಕ್ಷಗಳು ಒಂದು ಕಾರ್ಯಸಾಧು ಪರ್ಯಾಯ ನೀತಿ ಮತ್ತು ಕಾರ್ಯಕ್ರಮಗಳನ್ನು ಮುಂದಿಡುತ್ತಾ ಸರ್ಕಾರದ ಬಗ್ಗೆ  ಜನರಲ್ಲಿ ಮಡುಗಟ್ಟುತ್ತಿರುವ ಅಸಮಾಧಾನವನ್ನು ಸಂಘಟಿಸಬೇಕಾಗುತ್ತದೆ. ಅಂಥಾ ಒಂದು ಕಾರ್ಯಸಾಧು ಕಾರ್ಯಸೂಚಿಯಲ್ಲಿ ಬಹುಸಂಖ್ಯಾತ ಜನತೆಯ ಜೀವನೋಪಾಯದ ವಿಷಯಗಳ ಜೊತೆಜೊತೆಗೆ ಸ್ಥಿರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮಗಳು ಇರುವ ಅಗತ್ಯವಿದೆ. ಅಂಥಾ ಒಂದು ಪರ್ಯಾಯ ಕಾರ್ಯ ಸೂಚಿಯನ್ನು ಮುಂದಿಡದೇ ಹೋದಲ್ಲಿ ರಾಜಕೀಯ ಸ್ಪರ್ಧೆಯ ಕ್ಷೇತ್ರವೂ ತುಂಬಾ ಸೀಮಿತಗೊಳ್ಳುವುದಲ್ಲದೆ ವಿರೋಧಪಕ್ಷಗಳ ಬಗ್ಗೆ ಜನರಲ್ಲಿ ಸಿನಿಕ ಗುಮಾನಿಯೂ ಮೂಡುವಂತೆ ಮಾಡುತ್ತದೆ. ನಮಗೆಲ್ಲಾ ತಿಳಿದಿರುವಂತೆ ಪ್ರಾಯೋಗಿಕ ರಾಜಕಾರಣದ ಕ್ಷೇತ್ರದಲ್ಲಿ ಉಂಟಾಗುವ ಸಿನಿಕ ಗುಮಾನಿಗಳು ಬಿಜೆಪಿ ಯಂಥ ಪಕ್ಷಗಳನ್ನು ಪ್ರಬಲ ಸ್ಪರ್ಧಿಗಳನ್ನಾಗಿ ಮಾಡುತ್ತದೆ.

ಹಾಲೀ ಸರ್ಕಾರವು ಪ್ರಜಾತಂತ್ರವನ್ನು ನಾಶ ಮಾಡುತ್ತಿದೆಯೆಂದೂ, ಮತ್ತು ಇದೊಂದು ಫ್ಯಾಸಿಸ್ಟ್ ಸರ್ಕಾರವೆಂದು ಪದೇಪದೇ ಕೂಗಾಡುವ ಮೂಲಕ ಮಾತ್ರ ಪ್ರಜಾತಂತ್ರವನ್ನು ಕಾಪಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸಿನಿಕ ಗುಮಾನಿಯಿಂದ ಹೊರಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ತಾವೇ ಸಕ್ರಿಯ ಮತ್ತು ನಿಖರವಾದ ಪಾತ್ರವಹಿಸುವಂತೆ ಜನರನ್ನು ಕಾಲಕಾಲಕ್ಕೆ ರಾಜಕೀಯವಾಗಿ ಸಜ್ಜುಗೊಳಿಸುವ ರಾಜಕೀಯ ಕಾರ್ಯಸೂಚಿಯನ್ನು ಸಹ ಹೊಂದಿರಬೇಕಾಗುತ್ತದೆ. ಹೀಗಾಗಿ ಘನತೆಯುಳ್ಳ ಜೀವನೋಪಾಯಗಳು, ಗುಣಮಟ್ಟದ ಜೀವನ ಮತ್ತು ಘನತೆಯುಳ್ಳ ಮಾನವೀಯ ಸಮಾಜವನ್ನು ಸೃಷ್ಟಿಸುವ ಕಾರ್ಯಸೂಚಿಯ ಸುತ್ತಾ ಜನರು ಸಂಘಟಿತಗೊಳ್ಳುವುದರ ಜೊತೆಗೆ ಜನತೆಯ ಭವಿಷ್ಯವೂ ಸಹ ಅನುಮಾನಕ್ಕೆಡೆಯಿಲ್ಲದಂತೆ ಬೆಸೆದುಕೊಂಡಿದೆ. ದಲಿತ, ಆದಿವಾಸಿ, ಮಹಿಳಾ ಸಂಘಟನೆಗಳು, ಎಡಪಕ್ಷಗಳು, ಸಮೂಹ ಸಂಘಟನೆಗಳು ಮತ್ತು ಜನಪರ ಚಳವಳಿಗಳು ಆಲಲ್ಲಿ ಚದುರಿದಂತೆ ವಿಷಯಗಳ ಸುತ್ತಾ ಜನರನ್ನು ಸಂಘಟಿಸುತ್ತಿರುವುದನ್ನು ಬಿಟ್ಟರೆ ಪ್ರಧಾನ ಧಾರೆ ವಿರೋಧ ಪಕ್ಷಗಳ ಚಿಂತನೆ ಮತ್ತು ಚಟುವಟಿಕೆಗಳಲ್ಲಿ ಇಂಥಾ ಪರಿವರ್ತನಾಶೀಲ ಕಾರ್ಯಸೂಚಿಯೇ ಇದ್ದಂತಿಲ್ಲ. ಇದರ ಕೊರತೆಯಿಂದಾಗಿಯೇ ವಿರೋಧಪಕ್ಷಗಳ ನಡುವೆ ಅನೈಕ್ಯಮತ್ಯ ಉದ್ಭವವಾಗುವ ಸಾಧ್ಯತೆಯೂ ಸಹ ಇದ್ದೇ ಇದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...