ಅಂಕೋಲಾದಲ್ಲಿ ಸಮುದ್ರದಲೆಗಳ ರಭಸಕ್ಕೆ ಮುಳುಗುತ್ತಿದ್ದ ಬೋಟ್: ಐವರ ರಕ್ಷಣೆ

Source: sonews | By Manju Naik | Published on 5th August 2018, 1:55 PM | Coastal News |

ಅಂಕೋಲಾ:ಮುಳುಗುತ್ತಿದ್ದ ಮೀನುಗಾರಿಕಾ ಬೋಟ್​ನಲ್ಲಿದ್ದ ಐವರು ಮೀನುಗಾರರನ್ನು ಇಬ್ಬರು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ನಡೆದಿದೆ.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೃಷ್ಣರಾಮ ಬಾಣವಾಳೇಕರ್ ಎನ್ನುವವರಿಗೆ ಸೇರಿದ ರಾಮೇಶ್ವರ ಎಂಬ ಹೆಸರಿನ ಬೋಟ್ ಅಲೆಗಳ ರಭಸಕ್ಕೆ ಸಿಲುಕಿ ಬೆಳಂಬರ ಗ್ರಾಮದ ಬಳಿಯ ಸಮುದ್ರದಲ್ಲಿ ಮುಳುಗಡೆಯಾಗುತ್ತಿತ್ತು. ಇದರಲ್ಲಿ ಐವರು ಮೀನುಗಾರರಿದ್ದರು.
ಈ ವೇಳೆ ಸಮೀಪದಲ್ಲಿದ್ದ ಹಾರವಾಡದ ಶಾಂತದುರ್ಗಾ ಎಂಬ ಇನ್ನೊಂದು ಬೋಟ್​ನ ತುಕಾರಾಮ ವಿಠ್ಠಲ ಖಾರ್ವಿ ಮತ್ತು ಸಂತೋಷ ಧಾಕು ಖಾರ್ವಿ ಅಪಾಯದಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ.

Read These Next