ಮೊಬೈಲ್ ಕಳೆದರೂ ಪತ್ತೆ ಹಚ್ಚುವ ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೀನುಗಾರರನ್ನು ಪತ್ತೆ ಮಾಡದಿರುವುದಕ್ಕೆ ಮೀನುಗಾರ ಮುಖಂಡ ವಸಂತ ಖಾರ್ವಿ ಆಕ್ರೋಶ

Source: sonews | By Staff Correspondent | Published on 9th January 2019, 11:49 PM | Coastal News | Don't Miss |

ಮಿನುಗಾರಿಕಾ ಸಚಿವರೆದುರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೀನುಗಾರರು

ಭಟ್ಕಳ: ಮೀನುಗಾರರು ನಾಪತ್ತೆಯಾಗಿ ಈಗಾಗಲೆ 24 ದಿನಗಳು ಕಳೆದು ಹೋಗಿದೆ. ಸರ್ಕಾರವಾಗಲಿ, ಜನಪ್ರತಿನಿಧಿ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಒಂದು ಮೊಬೈಲ್ ಕಳೆದು ಹೋದರು ಹುಡುಕುವ ತಂತ್ರಜ್ಞಾನವಿರುವ ದೇಶದಲ್ಲಿ ಮೀನುಗಾರರು ನಾಪತ್ತೆಯಾದರೆ ಹುಡುಕುವ ಸೌಲಭ್ಯವಿಲ್ಲ ಎಂದು ಮೀನುಗಾರರ ಮುಖಂಡ ವಸಂತ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಬುಧವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ  ನಡೆದ ಮೀನುಗಾರರ ಮುಖಂಡರ ಸಭೆಯಲ್ಲಿ ಮೀನುಗಾರಿಕಾ ಸಚಿವ ನಾಡಗೌಡರ ಎದುರೇ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು  ತರಾಟೆಗೆ ತೆಗೆದುಕೊಂಡರು. 

ಇದಕ್ಕೆ ಉತ್ತರಿಸಿದ ಸಚಿವರು ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಸೀಬರ್ಡನ ನೌಕಾನೆಲೆಯ ಸಹಾಯವನ್ನು ಯಾಚಿಸಿದೆ. ಹೆಲಿಕಾಪ್ಟರ್, ಕಾವಲು ಪಡೆ ಸೇರಿದಂತೆ ಯಾವದನ್ನು ಬಳಸಬಹುದೊ ಎಲ್ಲವನ್ನು ಮಾಡಿದೆ. ಮತ್ತೇನು ಕ್ರಮ ಕೈಗೊಳ್ಳಬೇಕು ಎಂದು ನೀವೆ ಹೇಳಿ ಸರ್ಕಾರ ಅದನ್ನು ಮಾಡಲು ಸಿದ್ಧವಿದೆ. ಬಡತನದಲ್ಲಿರುವ ಮೀನುಗಾರರ ಕುಟುಂಬಕ್ಕೆ 1 ಲಕ್ಷ ರೂ ಸಹಾಯಧನ ನೀಡುವಂತೆ ಮುಖ್ಯಮಂತ್ರಿ ಅವರ ಹತ್ತಿರ ಮಾತನಾಡಿದ್ದು ಗುರುವಾರ ನಡೆಯುವ ಕ್ಯಾಬಿನೆಟ್ ಸಬೆಯಲ್ಲಿ ಅದನ್ನು ಅಂತಿಮಗೊಳಿಸಲಾಗುವದು. ಈ ಕುರಿತು ಪ್ರಸ್ತಾವನೆ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಮೀನುಗಾರರು ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿರುವಂತೆ ಸರ್ಕಾರ ಅವರ ಪತ್ತೆಗೆ ಕ್ರಮ ಕೈಗೊಂಡಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಇಲ್ಲಿಯವರೆಗೂ ಅವರ ಹುಡುಕಾಟದಲ್ಲೆ ನಿರತವಾಗಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ ನಾಡಗೌಡ ವಿವರಿಸಿದರು.
  
ತಾಲೂಕಿನ ನಾಪತ್ತೆಯಾದ ಮೀನುಗಾರರ ಮನೆಗೆ ಬೇಟಿ ನೀಡಿ, ನಂತರ ಪ್ರವಾಸಿ ಮಂದಿರದಲ್ಲಿ ಮೀನುಗಾರ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮೊದಲು ಅಳಿವೆಕೋಡಿಯ ಮೀನುಗಾರ ಹರೀಶ ಮೊಗೇರ, ನಂತರ ಬೆಳ್ನಿಯ ಮೀನುಗಾರ ರಮೇಶ ಮೊಗೇರ ಮನೆಗಳಿಗೆ ಬೇಟಿ ನೀಡಿ ಸಾಂತ್ವಾನ ಹೇಳಿದರು. 
     
ಜಿಲ್ಲಾಧಿಕಾರಿ ಎಸ್ ನಕುಲ್ ಮಾತನಾಡಿ ಜಿಲ್ಲಾಡಳಿತಕ್ಕೆ ನಾಪತ್ತೆಯಾದ ಮಾಹಿತಿ ದೊರೆತ ತಕ್ಷಣ ಗೋವಾ ಮತ್ತು ಮಹಾರಾಷ್ಟ್ರದ ಕಲೆಕ್ಟರ್‍ಗಳ ಜೊತೆ ಮಾತನಾಡಿ ಪತ್ತೆ ಮಾಡುವ ಕಾರ್ಯ ನಡೆಸಲಾಗಿದೆ. ಅಲ್ಲಿಯ ನಲೆಗಳ ಬಳಿಯೂ ತೆರಳಿ ಪರೀಶೀಲನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...