ಭಟ್ಕಳ: ಬೋಟ್ ನಿಂದ ಕೆಳಗೆ ಬಿದ್ದು ಮೀನುಗಾರ ಸಾವು

Source: sonews | By sub editor | Published on 7th March 2019, 6:59 PM | Coastal News | Don't Miss |

ಭಟ್ಕಳ: ಇಲ್ಲಿನ ಮಾನಿವಕುರ್ವೇ ಬಂದರ ಧಕ್ಕೆಯಲ್ಲಿ ನಿಲ್ಲಿಸಿದ್ದ ಬೋಟ್ ನಿಂದ ಇನ್ನೊಂದು ಬೋಟಿಗೆ ದಾಟುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

ಮೃತ ಮೀನುಗಾರನನ್ನು ಕಾಯ್ಕಿಣಿಯ ಮಠದ ಹಿತ್ಲು ನಿವಾಸಿ ಉದಯ ನಾರಾಯಣ ನಾಯ್ಕ (45) ಎಂದು ಗುರುತಿಸಲಾಗಿದೆ. ಮೃತ ಮೀನುಗಾರ ಆನಂದ ಮಂಜ ಖಾರ್ವಿ ಎಂಬುವವವರ ಮಾಲೀಕತ್ವದ ಸಚ್ಚಿದಾನಂದ ಮೀನುಗಾರಿಕಾ ಬೋಟನಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. 

ಗುರುವಾರದಂದು ಮಧ್ಯಾಹ್ನ 12 ಗಂಟೆ ವೇಳೆ ಮೀನುಗಾರಿಕೆ ಸಂಬಂಧ ಒಂದು ಬೋಟನಿಂದ ಇನ್ನೊಂದು ಬೋಟ್ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ದೇಹಕ್ಕಾಗಿ ಸ್ಥಳಿಯರು ಮೀನುಗಾರರು ಸಾಕಷ್ಟು ಗಂಟೆ ಪ್ರಯತ್ನ ಪಟ್ಟಿದ್ದು ನಂತರ ಸ್ಥಳಿಯ ಈಜುಗಾರರು ಬಂದು ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ತೆರಳಿದ್ದು ಪರಿಶೀಲನೆ ಕೈಗೊಂಡಿದ್ದಾರೆ. ನಂತರ ಮೃತ ದೇಹವನ್ನು ತಾಲೂಕಾ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. 

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಬೋಟ ಮಾಲೀಕ ಆನಂದ ಮಂಜ ಖಾರ್ವಿ ದೂರು ಸಲ್ಲಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಎಎಸೈ ಅಣ್ಣಪ್ಪ ವಿ. ಮೋಗೇರ ಮುಂದಿನ ತನಿಖೆ ಕೈಗೊಂಡಿದ್ದಾರೆ. 

Read These Next