ಭಟ್ಕಳ: ಶಾರ್ಟ್‌ಸೆರ್ಕ್ಯೂಟ್ ; ಸಂಪೂರ್ಣ ಬೆಂಕಿಗಾಹುತಿಯಾದ ಮನೆ

Source: sonews | By Staff Correspondent | Published on 21st November 2017, 11:56 PM | Coastal News | Incidents | Don't Miss |

ಭಟ್ಕಳ: ಇಲ್ಲಿನ ಮಗ್ದೂಮ್ ಕಾಲೋನಿಯ ಸಫಾ ಸ್ಟ್ರೀಟ್ ನಲ್ಲಿರುವ ಮನೆಯೊಂದರಲ್ಲಿ ಅಕಸ್ಮಿಕವಾಗಿ ಶಾರ್ಟ್‌ಸೆರ್ಕ್ಯೂಟ್ ನಿಂದ ಬೆಂಕಿಕಾಣಿಸಿಕೊಂಡಿದ್ದು ಸಂಪೂರ್ಣ ಮನೆಯು ಬೆಂಕಿಗಾಹುತಿಯಾದ ಘಟನೆ ಮಂಗಳರವಾರ ೭ಗಂಟೆ ಸುಮಾರು ಜರಗಿದೆ.

ಬೆಂಕಿಗಾಹುತಿಯಾದ ಮನೆಯನ್ನು ಶಫಿಖುನ್ನಿಸಾ ಮುಹಮ್ಮದ್ ಖಲೀಲ್ ಶೇಕ್ ಎಂಬುವರರಿಗೆ ಸೇರಿದ್ದು ಎನ್ನಲಾಗಿದ್ದು ದುರ್ಘಟನೆಯ ವೇಳೆ ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ ನೆರೆ ಮನೆಯವರೊಂದಿಗಿದ್ದರು ಎಂದು ತಿಳಿದುಬಂದಿದೆ.  ಅಕಸ್ಮಿಕವಾಗಿ ನಡೆದ ಈ ದುರ್ಘಟನೆಯಿಂದಾಗಿ ಅವರು ಆತಂಕಕ್ಕೀಡಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಜೀವಪಾಯದಿಂದ ಪಾರಾಗಿದ್ದಾರೆ.

ಶಾರ್ಟ್‌ಸೆರ್ಕ್ಯೂನಿಂದಾಗಿ ಉಂಟಾದ ಬೆಂಕಿಯೂ ಇಡೀ ಮನೆಯನ್ನು ಸುಟ್ಟುಬೂದಿಯನ್ನಾಗಿಸಿದೆ. ಪಕ್ಕ ಮನೆಗಳಿಗೂ ಬೆಂಕಿ ಹರಡಿಕೊಳ್ಳುವದನ್ನು ತಪ್ಪಿಸಿದ ಅಗ್ನಿಶಾಮಕ ದಳದವರು ಕೂಡಲೆ ಅಗ್ನಿಜ್ವಾಲೆಗಳನ್ನು ತಮ್ಮ ಹಿಡಿತಕ್ಕೆ ತರುವಲ್ಲಿ ಯಶಸ್ವಿಯಾದರು. ಸ್ಥಳಿಯ ಯುವಕರು ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ.

ಮನೆಯಲ್ಲಿದ್ದ ಫ್ರೀಜ್,ವಾಶಿಂಗ್ ಮಷಿನ್,ಗ್ರೆಂಡರ್ ಮತ್ತಿತರ ಅವಶ್ಯಕ ವಸ್ತುಗಳು ಸೇರಿದಂತೆ ಹಲವು ಬೆಲೆಬಾಳುವ ಬಟ್ಟೆಗೆ, ಉಡುಗೆಗಳು  ಸಂಪೂರ್ಣವಾಗಿ ಸುಟ್ಟುಕರಕಲಾಗಿದ್ದು ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಟ್ಕಳ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...