ಮರೆಯಾಗುತ್ತಿರುವ ಮೊಹರಂ ಹುಲಿ ನೃತ್ಯ 

Source: sonews | By Staff Correspondent | Published on 17th September 2018, 11:06 PM | Coastal News | Don't Miss |

ಮುಂಡಗೋಡ : ಮೊಹರಂ ಹಬ್ಬ ಪ್ರಾರಂಭವಾಯಿತೆಂದರೆ ಹಲಗೆ ಬಾರಿಸುವ ಸಪ್ಪಳ ಬಂದರೆ ಸಾಕು ಹುಲಿ ಬಂತಲೆ ಎಂದು ಜನರು ನೋಡುವುದಕ್ಕೆ ಮುಗಿ ಬಿಳುತ್ತಿದ್ದರು. ಹಬ್ಬದ ಪ್ರಾರಂಭದಿನದಿಂದ ಕೊನೆಯ ದಿನದವರಿಗೂ ಹುಲಿವೇಶ ಬಣ್ಣ ಹಚ್ಚಿಕೊಂಡು  ದೇವರ ಮುಂದೆ ಕುಣಿಯುವುದು, ಜನರನ್ನು ರಂಜಿಸಲು ಅಂಗಡಿ ಮುಂದೆ ಕುಣಿಯುವುದು ಹುಲಿ ಕುಣ್ಯಾಕತ್ಯಾತಿ ಎಂದು ಮಕ್ಕಳು ಸೇರಿದಂತೆ ದೊಡ್ಡವರು ನಿಂತು ಹುಲಿವೇಶದಲ್ಲಿಕುಣಿಯುವುದನ್ನು ನೋಡುತ್ತಿರುವುದು  ನಾವು ಈ ಮೋದಲು ನೋಡಿದ್ದೇವೆ.

ಇತ್ತಿಚಿನ ದಿನಗಳಲ್ಲಿ ಹುಲಿವೇಶಧರಿಸುವವರ ಸಂಖ್ಯೆಕಡಿಮೆಯಾಗಿದೆಯಾದರೂ   ನೋಡುಗರ ಆಸೆ ಕಡಿಮೆಯಾಗಿಲ್ಲಾ ನೋಡುಗರ ಸಂಖ್ಯೆ ತುಂಬಾನೆ ಇದೆ.
  
ಬೇಡಿಕೆ ಈಡೇರಿಕೆಗಾಗಿ ಕೆಲ ಜನಾಂಗದವರು ದೇವರಿಗೆ ಬೇಡಿಕೊಂಡು ನನ್ನ ಬೇಡಿಕೆ ಈಡೇರಿದರೆ ಮೊಹರಂ ಹಬ್ಬದ ಪ್ರಾರಂಭದಿಂದ ಮೊಹರಂ ಕೊನೆಯ ದಿನದವರಿಗೂ, ಇನ್ನೂ ಕೆಲವರು ಇಂತಿಷ್ಟೆ ದಿನ ಹುಲಿವೇಶ ಹಾಕಿಕೊಂಡು ಕುಣಿಯುತ್ತೇನೆ ನನ್ನ ಬೇಡಿಕೆ ಈಡೇರಬೇಕು ಎಂದು ಬೇಡಿಕೊಂಡು ಆ ಪ್ರಕಾರ ನಡೆಯುತ್ತಿದ್ದರು ಕುಣಿಯುತ್ತಿದ್ದರು.

ಹುಲಿ ವೇಶದಲ್ಲಿರುವುದನ್ನು ನೋಡುವುದೆ ಸೇರಿದಂತೆ ಆತನ ವೇಶಭೂಷಣವಾದ ಹುಲಿಯ ತಲೆಹೊಲುವಂತ ಟೊಪ್ಪಿಗೆ, ಕೊರಳಲ್ಲಿ ನೋಟಿನ ಹಾರ ನೋಡುವುದೇ ಒಂದು ಮಜಾ ಸೀಗುತ್ತಿತ್ತು. ಕೆಲವರು ಖುಷಿಪಟ್ಟು ಹುಲಿಯ ಕೊರಳಿಗೆ ಹಾಕಿದ ನೋಟಿನ ಹಾರಕ್ಕೆ ನೋಟನ್ನು ಜೋಡಿಸುವುದು, ದುಡ್ಡನ್ನು ಕೆಳಗೆ ಚೆಲ್ಲಿದಾಗ ಅದನ್ನು ಹುಲಿವೇಶದಾರಿ ಬಾಯಿಂದ ಎತ್ತುಕೊಂಡು ತನ್ನ ಜೇಬಿಗೆ ಇಳಿಸುವುದು ಇನ್ನೂ ಕೆಲವರು ಹುಲಿಗೆ ಹಾಲು ಕುಡಿಸುವುದು ನೋಡುವುದೇ ಖುಷಿ ಕೊಡುತ್ತಿತ್ತು. ಆದರೆ ಈಗೆಲ್ಲಾ ಇದೆಲ್ಲಾ ಮಾಯವಾಗಿದೆ. ಆದರೂ ಹುಲಿವೇಶದಲ್ಲಿರುವವರನ್ನು ಕೆಲಜನರು ಮೋಜಿಗಾಗಿ ದುಡ್ಡುಕೊಟ್ಟು ಕುಣಿಸುವುದು ಇಂದಿಗೂ ಕಾಣುತ್ತೇವೆ ಹುಲಿ ಸರಿಯಾಗಿ ಕುಣಿಯಲು ಹಲಗೆ ಹೊಡೆಯುವವನು ಚಮತ್ಕಾರವಾಗಿ ಬಾರಿಸಿದರೆ ನೋಡುಗರಿಗೆ ಹಾಗೂ ಕೇಳುಗರಿಗೂ ಆನಂದ.

ಸೋಮವಾರ ಹುಲಿವೇಷಧಾರಿ ಕುಣಿಯುವುದನ್ನು ಬಾಲವಾಡಿ ಮಕ್ಕಳು ಬಂದು ವಿಸ್ಮಯವಾಗಿ ನೋಡುತ್ತಾ ಖುಷಿ ಪಟ್ಟರು.
 

* ನಝೀರ್ ತಾಡಪತ್ರಿ
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...