ವಿಸನ್ ಇಂಡಿಯಾ ಮಿಷನ್ ಫೌಂಡೇಶನ್ ನಿಂದ ಸ್ವಾತಂತ್ರ್ಯೋತ್ಸವ ಕುರಿತು ಪ್ರಬಂಧ ಸ್ಪರ್ಧೆ

Source: sonews | By Staff Correspondent | Published on 16th August 2018, 11:38 PM | Coastal News | Don't Miss |

ಭಟ್ಕಳ: ಇಲ್ಲಿನ ಮಣ್ಕುಳಿಯಲ್ಲಿರುವ ವಿಸನ್ ಇಂಡಿಯಾ ಮಿಷನ್ ಫೌಂಡೇಶನ್ ಸಂಸ್ಥೆಯು 72ನೇ ಸ್ವಾಂತ್ರತ್ರ್ಯೋತ್ಸವದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಎರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮಣ್ಕುಳಿಯಲ್ಲಿನ ಕಚೇರಿಯಲ್ಲಿ ನಡೆಸಲಾಯಿತು. 

ಪ್ರಥಮ ಬಹುಮಾನವನ್ನು ಅಂಜುಮಾನ್ ಹೆಣ್ಣುಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ಹಾಜಿರಾ ಆಯಿಫಾ, ದ್ವಿತೀಯ ಬಹುಮಾನವನ್ನು ಬೀನಾ ವೈದ್ಯ ಶಾಲೆಯ ದರ್ಶಿನಿ ವೈ. ಚಂದ್ರಗಿರಿ ಮೂರನೇ ಬಹುಮಾನವನ್ನು ನ್ಯೂ ಶಮ್ಸ್ ಶಾಲೆಯ ಮಜಿಯಾ ಮಕಬೂಲ್ ತಮ್ಮದಾಗಿಸಿಕೊಂಡರು. 

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ತಹಸೀಲ್ದಾರ್ ವಿ. ಎನ್. ಬಾಡಕರ್ ಅವರು ಇಂದಿನ ಯುವ ಜನಾಂಗ ಶೈಕ್ಷಣಿಕವಾಗಿ ತೀರಾ ಮುಂಎ ಇದ್ದು ಅಂಕ ಗಳಿಕೆಯಲ್ಲಿಯೂ ಸಹ ತೀವ್ರ ಪೈಪೋಟಿಯಲ್ಲಿದ್ದಾರೆ. ಹಿಂದಿನ ಕಾಲದಲ್ಲಿ ಇಷ್ಟೊಂದು ವ್ಯವಸ್ಥೆಯೇ ಇಲ್ಲವಾಗಿತ್ತು ಅಲ್ಲದೇ ಮಾರ್ಗದರ್ಶನದ ಕೊರತೆ ಇದ್ದು ಕೇವಲ ಕೆಲವರಿಗಷ್ಟೇ ಅವಕಾಶ ದೊರೆಯುತಿತ್ತು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಷನ್ ಇಂಡಿಯಾ ಮಿಷನ್ ಫೌಂಡೇಶನ್‍ನ ಅಧ್ಯಕ್ಷ ಮುಹಮ್ಮದ್ ಫಾರೂಕ್ ಶೇಖ್ ವಹಿಸಿದ್ದರು. 
ಅಂಜುಮಾನ್ ಹೆಚ್ಚುವರಿ ಕಾರ್ಯದರ್ಶಿ ಇಸಾಕ್ ಶಾಬಂದ್ರಿ, ಸಮಾಜ ಸೇವಕ ನಜೀರ್ ಕಾಶಿಮಜಿ, ಭಟ್ಕಳ ಸಿಟಿ ಜೆ.ಸಿ.ಐ. ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಸಿ.ಎ. ಪಾಸು ಮಾಡಿದ ಧನಶ್ರೀ ರವೀಂದ್ರ ಪ್ರಭು ಹಾಗೂ ಇಂಜಿನಿಯರಿಂಗ್‍ನಲ್ಲಿ 6 ಚಿನ್ನದ ಪದಕ ಪಡೆದ ಅಬ್ದುಲ್ ಬಾಯಿಸ ಕಡ್ಲಿ ಇವರನ್ನು ಗೌರವಿಸಲಾಯಿತು. 
ಮೌಲವಿ ಮುಹಮ್ಮದ್ ಅಬುಜರ್ ನದ್ವಿ ಪ್ರಾರ್ಥಿಸಿದರು. ನಜೀರ್ ಅಹಮ್ಮದ್ ಶೇಖ್ ಸ್ವಾಗತಿಸಿದರು. ಅಮ್ಜದ್ ಅಲಿ ಶೇಖ್ ವರದಿ ವಾಚಿಸಿದರು. ಶೌಖತ್ ಖತೀಬ್ ಅತಿಥಿಗಳನ್ನು ಪರಿಚಯಿಸಿದರು. ಡಾ. ನಸೀಮ್ ಖಾನ್ ವಂದಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...