ಜಿಲ್ಲೆಯ ಜನರಲ್ಲಿ ‘ಭರವಸೆಯ ನಾಯಕ’ನಾಗಿ ಹೊರಹೊಮ್ಮುತ್ತಿರುವ:ಹೊನ್ನಾವರದ ಪ್ರತಿಭಾವಂತ ಯುವಕ ಎಮ್.ಎಚ್. ಗಣೇಶ

Source: S.O. News Service | By Manju Naik | Published on 17th August 2018, 12:42 PM | Coastal News | Don't Miss |

ಹೊನ್ನಾವರ: ತಾಲೂಕಿನ ಹೆಬ್ಬಾನಕೇರಿ ಗ್ರಾಮದ ಮೃದು ಸ್ವಭಾವದ ಯುವಕ ಸದ್ಯ ಜಿಲ್ಲೆಯಲ್ಲಿ ಭರವಸೆಯ ನಾಯಕ ನಟನಾಗಿದ್ದಾನೆ. ಚಿಕ್ಕದಿನಿಂದಲೂ ತುಂಬಾ ಬುದ್ಧಿವಂತ ಹುಡುಗನಾಗದಿದ್ದರು ಸಹ ಪ್ರಾಥಮಿಕ ಶಿಕ್ಷಣವನ್ನು ಹೆಬ್ಬಾನಕೇರಿಯಲ್ಲಿ ಮಾಡಿದ್ದು, ಇಲ್ಲಿಂದಲೇ ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಈತ ಹೈಸ್ಕೂಲು ಶಿಕ್ಷಣವನ್ನು ಅರೇಅಂಗಡಿಗೆ ತೆರಳಿ ಬಳಿಕ ಪಿಯುಸಿ ಹಾಗೂ ಡಿಗ್ರಿಯನ್ನು ಹೊನ್ನಾವರ ಮತ್ತು ಕುಮಟಾದಲ್ಲಿ ಮಾಡಿ ಈಗ ಎಂಕಾಮ್ ಪದವೀಧರನಾಗಿದ್ದಾನೆ. ಹೆಬ್ಬಾನಕೇರಿಯ ಹೇರಂಬ ಮತ್ತು ವೀಣಾ ದಂಪತಿಯ ಮಗನಾಗಿ 1994 ಮೇ ಜನಿಸಿದ್ದ ಇತ ತಂದೆತಾಯಿಯ ಹೆಸರು ಉಳಿಸಿ ಹೆಮ್ಮಯ ಪುತ್ರನಾಗಿದ್ದಾನೆ. ಈತನಿಗೆ ಓರ್ವ ತಂಗಿ ಇದ್ದು, ಆಕೆಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಆಸೆ ಇವನದ್ದಾಗಿದೆ. ಅಷ್ಟೇನೂ ಸಿರಿವಂತ ಕುಟುಂಬ ಅಲ್ಲದಿದ್ದರೂ ಕಲಾವಿದ ಕುಟುಂಬ. ಮಕ್ಕಿ ಮನೆ ಎಂಬ ಮರ್ಯಾದ ಕುಟುಂಬದ ಎಮ್.ಎಚ್. ಗಣೇಶನ ದೊಡ್ಡ ಅಜ್ಜ ಮಕ್ಕಿಮನೆ ಮಹಾಬಲೇಶ್ವರ್ ಹೆಗಡೆ ಯಕ್ಷಗಾನ ಕ್ಷೇತ್ರದ ಅಪ್ರತಿಮ ಭಾಗವತ, ಮದ್ದಲೆ ವಾದಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗಿನತಲೆಮಾರಿನ ಯಕ್ಷಗಾನ ಕಲಾವಿದರು ಎಂದಿಗೂ ಇವರನ್ನು ಸ್ಮರಿಸಿಕೊಳ್ಳುತ್ತಾರೆ. ಇವರಿಗೆ 1984ರಲ್ಲಿ ಇವರ ಯಕ್ಷಗಾನ ಕ್ಷೇತ್ರದ ಸಾಧನೆಗೆ ರಾಜ್ಯ ಪ್ರಶಸ್ತಿ ದೊರೆತಿದೆ. ಇನ್ನು ಇತನ ಅಜ್ಜ ಗಣಪತಿ ಹೆಗಡೆ ಮಕ್ಕಿಮನೆ ಕೂಡ ಯಕ್ಷಗಾನದಲ್ಲಿ ಪ್ರಸಿದ್ಧ ಮದ್ದಲೆ ವಾದಕರು, ಹಾಗೂ ಇತನ ತಂದೆ ಹೇರಂಬ ಹೆಗಡೆ ಕಲಾರಾಧಕರಾಗಿದ್ದಾರೆ. 

ತಂದೆಯೇ ಮೊದಲ ಗುರು : ಚಿಕ್ಕವನಿರುವಾಗಲೇ ಪ್ರತಿದಿನ ರಾತ್ರಿ ಕಾಲ ಮೇಲೆ ಕುಳಿತು ದೇವರ ಭಜನೆಯನ್ನು ಹಾಡುತ್ತಿದ್ದ ಇತನಿಗೆ ಅಪ್ಪನೇ ಮೊದಲ ಗುರುವಾಗಿದ್ದಾರೆ. ಊರಿನಲ್ಲಿರುವ ಸಣ್ಣ ಪುಟ್ಟ ಅಂಗಡಿಯವರೆಲ್ಲ ನಾನು ಶಾಲೆ ಬಿಟ್ಟು ಬರುವಾಗ ಪ್ರೀತಿಯಿಂದ ಕರೆದು ಅಂಗಡಿಯಲ್ಲೇ ನಿಲ್ಲಿಸಿ ಒಂದೆರಡು ಭಜನೆ ಹೇಳಿಸಿ ತಿಂಡಿ ಕೊಟ್ಟು ಕಳುಹಿಸುತ್ತಿದ್ದ ಕ್ಷಣಗಳು ಸಹ ಇವೆ. ಈತನ ಜೀವನದಲ್ಲಿ ಬಹುವಾಗಿ ಪ್ರಭಾವ ಬೀರಿದವರು ಸಂಗೀತ ಗುರು ಶ್ರೀಯುತ ವಿಶ್ವೇಶ್ವರ ಭಟ್ ಕರ್ವ ಇವರಾಗಿದ್ದು, ಇತನು ವಿದ್ಯಾಭ್ಯಾಸದಲ್ಲಿ ಬರೆದಿದ್ದಕ್ಕಿಂತ ಸಾಂಸ್ಕೃತಿಕವಾಗಿ ತೊಡಗಿಕೊಂಡಿದ್ದೆ ಹೆಚ್ಚು. 
ಪಿಯುಸಿ ಓದುವಾಗ ತಂದೆ ಮನೆ ಕಟ್ಟಲು ತಾನು ಸಹ ಆರ್ಥಿಕವಾಗಿ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಶೃಂಗೇರಿಯ ಭಗವದ್ಗೀತಾ ಅಭಿಯಾನ ಚಲ ವಿದ್ದು ಹಗಲು ರಾತ್ರಿ ಇಡೀ ಭಗವದ್ಗೀತೆಯನ್ನು ಕಂಠಪಾಠ ಮಾಡಿ ಶೃಂಗೇರಿ ಜಗದ್ಗುರುಗಳ ಎದುರಿಗೆ ಚೂರು ತಪ್ಪದೇ ಒಪ್ಪಿಸಿದ ಈತನ ಪ್ರತಿಭೆಗೆ ಎಲ್ಲರು ನಿಬ್ಬೆರಗಾಗಿದ್ದರು. ಭಗವದ್ಗೀತೆ ಕಂಠಪಾಠದಲ್ಲಿ ಗೆದ್ದ ಈತನಿಗೆ 21,000 ನಗದೊಂದಿಗೆ ಮತ್ತು 5 ಸಾವಿರ ರೂ.ಗಳನ್ನು ಆರ್ಶೀವಾದವಾಗಿ ನೀಡಿದ್ದ ನೆನಪು ಮಾಡಿಕೊಳ್ಳುವಂತಹದ್ದು ಎನ್ನುತ್ತಾನೆ ಎಮ್.ಎಚ್. ಮೊದಮೊದಲು ಹಣಕ್ಕಾಗಿ ಕಂಠ ಪಾಠ ಮಾಡಿದರೂ ಬರಬರುತ್ತಾ ಅದರ ಆಡ ಅರ್ಥಗಳು, ಮೌಲ್ಯಗಳು ಈತನನ್ನು ಪ್ರಭಾವಿಸುತ್ತ ಬಂದಿತ್ತು. 

ನಾಟಕ, ನಟನೆ ಕ್ಷೇತ್ರದತ್ತ ಒಲವು: ಈ ಮಧ್ಯೆ ಈತನಲ್ಲಿ ಕಥೆ ಕಾದಂಬರಿ ಓದುವ ಆಸಕ್ತಿ ಹುಟ್ಟಿದ್ದು, ಹಲವಾರು ಕಥೆ ಕಾದಂಬರಿಗಳನ್ನು ಓದಲು ಆರಂಭಿಸಿದ. ತೇಜಸ್ವಿ ಕಾದಂಬರಿಗಳು ಇತನಲ್ಲಿ ಓದಲು ಆಸಕ್ತಿ ನೀಡಿತು. ಇನ್ನು ರವಿ ಬೆಳೆಗೆರೆ, ಭೈರಪ್ಪ, ತರಾಸು ಇವರುಗಳ ಅಭಿಮಾನಿಯಾಗಿದ್ದ ಈತನಲ್ಲಿ ಗೊತ್ತೋ ಗೊತ್ತಿಲ್ಲದೇಯೋ ಪುಟ್ಟ ನಾಟಕ ಕಲಾವಿದನೊಬ್ಬ ಚಡಪಡಿಸುತ್ತಿದ್ದ. ಈತನಲ್ಲಿ ನಟನೆ ಆಸಕ್ತಿ ಹುಟ್ಟಿದ್ದು ಇಲ್ಲಿನ ಸ್ಥಳಿಯ ಶ್ರೇಷ್ಠ ನಾಟಕ ಕಲಾವಿದ ರಂಗಭೂಮಿಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಜಿ.ಡಿ.ಭಟ್ ಕೆಕ್ಕಾರ ಇವರ ಅಪ್ಪಟ ಅಭಿಮಾನಿಯಾಗಿದ್ದ. ಅವರ ಅತ್ಯದ್ಭುತ ನಾಟಕಗಳನ್ನು ಕಣ್ಣಾರೆ ನೋಡದಿದ್ದರು ಸಹ ಅವರನ್ನು ಆರಾಧಿಸುತ್ತಿದ್ದ. ಒಂದು ರೀತಿಯಲ್ಲಿ ಮಾನಸಿಕವಾಗಿ ಅವರ ಶಿಷ್ಯನಾಗಿದ್ದ ಈತನ ನಟನೆಗೆ ಒಂದು ರೂಪ ನೀಡಿದ್ದು ನೀನಾಸಂ ಕಲಾವಿದರುಗಳಾದ ಶ್ರೀಕಾಂತ್ ನೀನಾಸಂ ಹಾಗೂ ರಾಘು ಶಿರಸಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರುಗಳು ಶಿಷ್ಯತ್ವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಅಭಿನಯಿಸಿದ್ದ ಎಮ್.ಎಚ್. ಅಲ್ಲಿಂದ ನಟನೆ, ನಾಟಕ ಕ್ಷೇತ್ರಕ್ಕೆ ಕಾಲಿಟ್ಟ. 

‘ನಂಬಿಕೆಯ ಪಯಣದಲ್ಲಿ’ ಮೊದಲ ಹೆಜ್ಜೆ : ಇಲ್ಲಿನ ಕುಮಟಾದ ವಾರಿಧಿ ರಂಗಕೇಂದ್ರ ನಾಟಕಗಳನ್ನು ಮಾಡುತ್ತಾ ಇರುವಾಗ ಪ್ರಯೋಗಾರ್ಥವಾಗಿ ಇದೇ ತಂಡದಿಂದ ‘ನಂಬಿಕೆಯ ಪಯಣದಲ್ಲಿ’ ಎಂಬ ಮೊದಲ ಕಿರುಚಿತ್ರವನ್ನು ಶ್ರೀಕಾಂತ್ ನೀನಾಸಂ ಅವರ ನಿರ್ದೇಶನದಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಿರುಚಿತ್ರದಲ್ಲಿ ಮೊದಲ ಹೆಜ್ಜೆ ಇರಿಸಿದ್ದ. ಚಿತ್ರದಲ್ಲಿನ ನಿಸರ್ಗ ದೃಶ್ಯಗಳು ಕಲಾವಿದರ ಅಭಿನಯ ಜನರ ಮನಸ್ಸು ಮುಟ್ಟಿ ಎಮ್.ಎಚ್. ನಟನೆಗೆ ಇನ್ನಷ್ಟು ಬೆಂಬಲ ಸಿಕ್ಕಂತಾಯಿತು. ಇದಾದ ಬಳಿಕ ಒಂದು ಕಡೆ ಕಾಲೇಜು ವಿದ್ಯಾಬ್ಯಾಸ ಇನ್ನೊಂದು ಕಡೆ ಸಂಗೀತ ಹಾಗೂ ಕಿರು ಚಿತ್ರದಲ್ಲಿನ ನಟನೆ ನಡೆಯುತ್ತಾ ಬಂದಿತ್ತು. ಇದೇ ವೇಳೆ ಜಿಲ್ಲೆಯಲ್ಲಿ ಕಿರು ಚಿತ್ರ ಕ್ರೇಜ್ ಹೆಚ್ಚುತ್ತಿರುವ ವೇಳೆ ಈತನಿಗೆ ಒಂದರ ಮೇಲೊಂದರಂತೆ ಕಿರು ಚಿತ್ರದಲ್ಲಿ ನಟಿಸುವ ಈತನ ಕಲೆಯನ್ನು ತೋರಿಸುವ ಅವಕಾಶ ದೊರಕಿ ಬಂತು. ಸದ್ಯ “ಸೂಚಿತ, ಸಂದಿಗ,್ಧ ಜೆಗ್ರ್ಗಸಿ, ಚತುರಥ ಕಿರುಚಿತ್ರದಲ್ಲಿ ಈಗಾಗಲೇ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಹಾಗೂ ನಟನೆಯ ಜೊತೆಗೆ ಆತನೇ ಕಥೆ ಬರೆದು ನಿರ್ದೇಶನ ಮಾಡಲು ಮುಂದಾಗಿದ್ದು ‘ನಾಸ್ತಿ’ಎಂಬ ಕಿರುಚಿತ್ರವನ್ನು ಜುಲೈ 15ರಂದು ಕೆಕ್ಕಾರ ಶ್ರೀ ಭಾರತೀ ಸಭಾಭವನದಲ್ಲಿ ಬಿಡುಗಡೆಗೊಳಿಸಲು ಎಲ್ಲಾ ತಯಾರಿ ನಡೆಸಿದ್ದಾರೆ. ಅದೇ ರೀತಿ ‘ಐಸ್‍ಕ್ಯಾಂಡಿ, ಪಿಜಿ, ಹಾಗೂ ಸಂಧಿಗ್ಧಂ-2, ಬಂಧಿ ಎಂಬ ಕಿರುಚಿತ್ರದ ್ಲ ಶೂಟಿಂಗ ಮುಗಿದ್ದು ತೆರೆಯ ಮೇಲೆ ಬಂದಿದೇ
ಕಾಲೇಜು ದಿನದಲ್ಲಿಯೇ ನಾಟಕಗಳಲ್ಲಿ ನಟನೆ ಮಾಡುತ್ತಾ ಬಂದಿದ್ದ ಇವನು ಈಗಾಗಲೇ 10-12 ಕಿರು ಚಿತ್ರ, 15-20 ನಾಟಕದಲ್ಲಿ ನಟನೆ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ. ಕಾಲೇಜು ದಿನದಲ್ಲಿ ‘ದಲಿತ ಲೋಕ’ ಎಂಬ ನಾಟಕದಲ್ಲಿ ನಟನೆ ಮಾಡಿ ಈತ ನಾಟಕವೂ ಯುನಿವಸಿಟಿಯಲ್ಲಿ ಎರಡನೇ ಸ್ಥಾನ, ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ‘ಧರಣಿ ಮಂಡಲ ಮಧ್ಯದೊಳಗೆ ಎಂಬ ನಾಟಕದಲ್ಲಿ ಜಿಲ್ಲೆಯಾದ್ಯಂತ ಹೆಸರುವಾಸಿ ಪಡೆದಿದ್ದು, ನಾಟಕದಲ್ಲಿ ಎಮ್.ಎಚ್.ಗಣೇಶ ಲಾಲ್ಸಡಾನ ಕೆ. ಎಂಬ ಬ್ರಿಟಿಷ ಅಧಿಕಾರಿ ಪಾತ್ರಧಾರಿಯಾಗಿ ಅಭಿನಯಿಸಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು. 

ಭರವಸೆಯ ನಾಯಕ ಬಿರುದು: ಜಿಲ್ಲೆಯಾದ್ಯಂತ ಈಗಾಗಲೇ ಕಿರು ಚಿತ್ರ ನಟನೆಯಲ್ಲಿ ಸಾಮ್ರಾಟ ಆಗಿ ಹೆಸರು ಪಡೆದಿರುವ ಎಮ್.ಎಚ್.ಗಣೇಶಗೆ ನಿರ್ದೇಶಕ, ಪತ್ರಕರ್ತ ವಿನಾಯಕ ಬ್ರಹ್ಮೂರು ಅವರು ಅವರ ನಿರ್ದೇಶನದ ಸಂಧಿಗ್ಧಂ ಕಿರು ಚಿತ್ರದಲ್ಲಿ ಭರವಸೆಯ ನಾಯಕ ಬಿರುದು ನೀಡಿದರು. ಅಲ್ಲಿಂದ ಆರಂಭವಾದ ಭರವಸೆಯ ನಟನೆ ಇಂದಿಗೂ ಮುಂದುವರೆದುಕೊಂಡು ಹೋಗುತ್ತಿದೆ. ಒಂದೊಂದು ಕಿರುಚಿತ್ರದಲ್ಲಿ ಒಂದೊಂದು ಪಾತ್ರ ಒಂದೊಂದು ಅನುಭವ ಬೇರೆ ಬೇರೆ ನಿರ್ದೇಶಕರು ಮಾರ್ಗದರ್ಶನದಲ್ಲಿ ನನ್ನ ಕೈಲಾದಷ್ಟು ಕಿರು ಪಾತ್ರ ಅನುಭವಿಸಿದೆ ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದಕ್ಕೆ ಇಲ್ಲಿಯೇ ನಡೆಗಳು ತುಂಬಾ ಪ್ರಭಾವ ಬೀರಿದವು. ಕಿರು ಚಿತ್ರದಲ್ಲಿ ಸೈಕೋ ಆಗಿ ಹುಚ್ಚನಾಗಿ ನಿರುದ್ಯೋಗಸ್ಥನಾಗಿ, ಅಣ್ಣನಾಗಿ, ಜ್ಯೋತಿಷಿಯಾಗಿ, ಕಂಪೌಂಡರ್ ಆಗಿ, ಐಸ್‍ಕ್ಯಾಂಡಿ ವಡಾಪಾವ್ ಮಾರುವವನಾಗಿ ಎಲ್ಲಾ ಪಾತ್ರಕ್ಕೂ ನ್ಯಾಯ ದೊರಕಿಸಿದ್ದಾನೆ ಎನ್ನಬಹುದು. 

ಸ್ವಂತ ಖರ್ಚಿಗೆ ನಾನೇ ದುಡಿಯಬೇಕೆಂದು ದೇವಸ್ಥಾನದಲ್ಲಿ ಪ್ರತಿ ಸೋಮವಾರ ಪಾವತಿ ಬರೆಯುತ್ತಿದ್ದ, ಅಡುಗೆಯವನಾಗಿ ಬಡಿಸುತ್ತಿದ್ದ, ಜೊತೆಗೆ ಖಾಸಗಿ ಟಿವಿವೊಂದರಲ್ಲಿ ಆಂಕರ್ ಆಗಿ ದುಡಿಯುತ್ತಿದ್ದ. ಸಂಗೀತದ ಜರ್ನಿ ಮುಗಿಸಿ ಸೀನಿಯರ್ ಪದವಿ ಪಡೆದು ವಾರದಲ್ಲಿ ನಾಲ್ಕು ದಿನ ಸಂಗೀತ ಶಿಕ್ಷಕನಾಗಿ ಸೇವೆ ಮಾಡುವುದರ ಜೊತೆಗೆ ಯೂನಿವರ್ಸಿಟಿಯಲ್ಲಿ ಎರಡು ಬಾರಿ ಶಾಸ್ತ್ರೀಯ ಸಂಗೀತದಲ್ಲಿ ಯೂನಿವರ್ಸಿಟಿ ಬ್ಲೂ ಆಗಿದ್ದಾರೆ. ಹಲವಾರು ಚಿತ್ರಕ್ಕೆ ಕಥೆಯನ್ನು ಬರೆದು ಕೊಟ್ಟಿದ್ದು, ಮುಂದಿನ ದಿನದಲ್ಲಿ ಫ್ಯೂಚರ್ ಫಿಲ್ ಮಾಡಲು ಕಥೆ ಮತ್ತು ಚಿತ್ರಕಥೆ ಬರೆದಿಟ್ಟುಕೊಂಡಿದ್ದಾರೆ. ಈಗ ಬರೀ ಕಿರುಚಿತ್ರವನ್ನು ಮಾಡುತ್ತಿರುವ ಇಲ್ಲಿಯ ಎಲ್ಲ ಗೆಳೆಯರು ಸೇರಿ ಒಂದು ಫ್ಯೂಚರ್ ಫಿಲ್ ಮಾಡಿ ರಾಷ್ಟ್ರಕ್ಕೆ ತಲುಪಿಸಬೇಕೆಂಬ ಹಿರಿಯಾಸೆ ಇದೆ.

Read These Next

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...