ಹಿರಿಯ ನಾಗರೀಕರ ಸಮಸ್ಯೆ ಆಲಿಸಿದ ನಗರ ಠಾಣೆ ಪಿ.ಎಸ್.ಐ

Source: sonews | By Staff Correspondent | Published on 5th February 2019, 5:50 PM | Coastal News | Don't Miss |

ಭಟ್ಕಳ: ಮಕ್ಕಳು ತಮ್ಮ ವೃದ್ಧ ಪಾಲಕರಿಗೆ ಸರಿಯಾದ ಆರೈಕೆ ಮಾಡಲು ವಿಫಲವಾದರೆ ಕಾನೂನು ಕ್ರಮ ಎದುರಿಸಬೇಕಾದೀತು ನಗರ ಠಾಣಾ ಪಿ.ಎಸ್.ಐ ಕೆ.ಕುಸುಮಾಧರ್ ಹೇಳಿದರು. 

ಅವರು ತಾಲೂಕಿನ ಮುಠ್ಠಳ್ಳಿ ಪಂಚಾಯತ್ ವ್ಯಾಪ್ತಿಯ ಹಿರಿಯ ನಾಗರೀಕರ ರಕ್ಷಣೆ ಕುರಿತಂತೆ ಆಯೋಜಿಸಿದ್ದ ಸಭೆಯಲ್ಲಿ ಹಿರಿಯ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. 
ವೃದ್ಧ ಮಾತಾಪಿತರು ಒಂಟಿಯಾಗಿದ್ದರೆ ಅಥವಾ ಮಕ್ಕಳಿದ್ದು ಸರಿಯಾಗಿ ನೋಡಿಕೊಳ್ಳದಿದ್ದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿ. ಸಾಧ್ಯವಾದಲ್ಲಿ ಪೊಲೀಸ ಠಾಣೆ ದೂರವಾಣಿ ಸಂಖ್ಯೆ ಬರೆದಿಟ್ಟು ಕೊಂಡರೆ ಕಷ್ಟದಲ್ಲಿರುವ ವೇಳೆ ರಕ್ಷಣೆಗೆ ಸಾಧ್ಯವಾಗುತ್ತದೆ. ಹಾಗೂ ನಿಮ್ಮೆ ಮನೆ ಅಕ್ಕಪಕ್ಕದವರಿಂದ ಕಿರುಕುಳ, ಸಮಸ್ಯೆಗಳಾಗಿದ್ದಲ್ಲಿ ಸಭೆಯಲ್ಲಿ ತಿಳಿಸಬಹುದಾಗಿದೆ. ಈ ಬಗ್ಗೆ ಅಂತಹವರಿಗೆ ಬುದ್ದಿ ಹೇಳಿ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದ ಅವರು ಕನಿಷ್ಠ ಪಕ್ಷ ಒಂದು ತಿಂಗಳಿಗೊಮ್ಮೆ ಸಭೆ ಮುಖಾಂತರ ಹಿರಿಯ ನಾಗರಿಕರನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ನೀಗಿಸುವ ಜವಾಬ್ದಾರಿ ಪೊಲೀಸರ ಮೇಲಿದ್ದು ಈ ನಿಟ್ಟಿನಲ್ಲಿ ಹಿರಿಯ ನಾಗರಿಕರು ಭಯಪಡಬೇಕಾಗಿಲ್ಲ ಎಂದರು. 

ಇದೇ ಸಂಧರ್ಭದಲ್ಲಿ ವರ್ಷಗಳ ಹಿಂದೆ ಬೆಂಗಳೂರಿಗೆ ಹೋಟೆಲ್ ಕೆಲಸಕ್ಕೆಂದು ತೆರಳಿದ ಮಗ ನಾಪತ್ತೆಯದ ಬಗ್ಗೆ ವೃದ್ಧೆಯೋರ್ವಳು ಠಾಣೆಯಲ್ಲಿ ದೂರು ನೀಡಿದ್ದು, ಇನ್ನು ತನಕ ಮಗ ಪತ್ತೆಯಾಗಿಲ್ಲದರ ಬಗ್ಗೆ ತಮ್ಮ ಅಳಲನ್ನು ತೊಡಿಕೊಂಡರು. ಹಾಗೂ ಬಡತನದಲ್ಲಿ ಜೀವನ ನಡೆಸುತ್ತಿದ್ದ ಇಲ್ಲಿನ ಹಳ್ಳೇರ ಕುಟುಂಬದವರು ಜಾಗವೊಂದನ್ನು ಖರೀಧಿ ಮಾಡಿದ್ದು ನೊಂದಣಿ ಮಾಡಿಕೊಳ್ಳಲು ಖಾಸಗಿ ವ್ಯಕ್ತಿಯೋರ್ವರು ಸತಾಯಿಸುತ್ತಿದ್ದ ಬಗ್ಗೆ ವೃದ್ಧರೊಬ್ಬರು ಪಿಎಸೈ ಗಮನಕ್ಕೆ ತಂದು ಇದರಿಂದಾಗಿ ಮನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಕಷ್ಟಕರವಾಗಿದೆ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಮುಠ್ಠಳ್ಳಿ ಪಂಚಾಯತ ಪಿಡಿಓ ರಾಜೇಶ್ವರಿ ಚಂದಾವರ, ಕಾರ್ಯದರ್ಶಿ ಮಂಜುನಾಥ ಚಿಕ್ಕನಮನೆ, ಪಂಚಾಯತ ಸಿಬ್ಬಂದಿ ಮಂಜುನಾಥ ನಾಯ್ಕ, ನಗರ ಠಾಣೆ ಸಿಬ್ಬಂದಿಗಳಾದ ಈರಣ್ಣ ಪೂಜಾರಿ ಸಿದ್ದು ಕಾಂಬ್ಲೇ, ಯಶವಂತ ನಾಯ್ಕ ಹಾಗೂ 60 ವರ್ಷಕ್ಕೂ ಮೇಲ್ಪಟ್ಟ ಪಂಚಾಯತ ವ್ಯಾಪ್ತಿಯ ಹಿರಿಯರು, ವೃದ್ಧರು ಭಾಗವಹಿಸಿದ್ದರು.


 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...