ಶಾಸಕ ವೈದ್ಯರಿಂದ ಕಿವುಡರ ಸಂಘ ಉದ್ಘಾಟನೆ

Source: S O News service | By Staff Correspondent | Published on 24th October 2016, 5:53 PM | Coastal News |


ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಸುಮಾರು ೧೫೦ ಕಿವುಡ ಸದಸ್ಯರ ಸಹಯೋಗದಲ್ಲಿ ಹಲವಾರು ಉದ್ದೇಶದೊಂದಿಗೆ ಸ್ಥಾಪನೆಯಾಗಿದ ಕಿವುಡರ ಸಂಘವನ್ನು  ಶಿರಾಲಿಯ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಶಾಸಕ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ ಮಾತನಾಡಿ ನಿಮ್ಮೆಲ್ಲರ ಕೋರಿಕೆಯಂತೆ ಜಿಲ್ಲೆಯಲ್ಲಿ ಸಂಘದ ಕಟ್ಟಡಕ್ಕೆ ಸಿಗಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಹಾಗೂ ಸರ್ಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸಮಾಜದಲ್ಲಿ ಕೆಲವರು ತಮ್ಮ ಕೈಯಲ್ಲಿ ಕೆಲಸ ಮಾಡಲು ಸಾಧ್ಯವಾದರು ಸಹ ಆಲಸ್ಯದಿಂದ ಜೀವನ ಸಾಗಿಸುತ್ತಾರೆ ಆದರೆ ನಿಮ್ಮಲ್ಲಿನ ಅಂಗವೈಕಲ್ಯವನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡು ಸಮಾಜದಲ್ಲಿ ನೀವು ಒಬ್ಬರು ಎನ್ನುವುದನ್ನು ತೋರಿಸಿಕೊಡುತ್ತಿರುವುದು ಸಂತಸ ವಿಚಾರವಾಗಿದೆ ಎಂದರು.
ಭಟ್ಕಳ ಪ್ರಭಾರ ಸಹಾಯಕ ಆಯುಕ್ತ ರಮೇಶ ಕಳಸದ್ ಮಾತನಾಡಿ  ಕಾನೂನಾತ್ಮಕ, ಶಾಸನಬದ್ದವಾಗಿ ಈಡೇರಲು ಈ ವೇದಿಕೆ ಅನೂಕೂಲವಾಗಬೇಕು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಿವುಡರಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯುವುದು. ಈ ಮೂಲಕವಾಗಿ ಶಿಕ್ಷಣ ಸಿಗುವಂತಾಗಬೇಕು. ಹೀಗೆ ಕಿವುಡರು ಸಹ ಸಮಾಜದಲ್ಲಿ ಎಲ್ಲಾ ರೀತಿಯಲ್ಲು ಬದುಕುವ ಅವಕಾಶವನ್ನು ಮಾಡಿಕೊಡ ಬೇಕಾಗಿರುವುದು ಸರ್ಕಾರದ ಕಾರ್ಯವಾಗಿದೆ. ಕಿವುಡರು ಸಲ್ಲಿಸಿರುವ ಹಲವಾರು ಬೇಡಿಕೆಗಳನುಸಾರವಾಗಿ ಒಂದೊಂದೇ ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ ಡಿಕೋಸ್ತಾ, ಗುತ್ತಿಗೆದಾರ ಬಾಬು ಮೋಗೇರ, ರಾಜ್ಯ ಕಿವುಡರ ಸಂಘದ ಅಧ್ಯಕ್ಷರು, ವಿವಿಧ ಜಿಲ್ಲಾ ಸಂಘಟನೆಯ ಪದಾದಿಕಾರಿಗಳು, ದೇವಾಲಯದ ಧರ್ಮದರ್ಶಿಗಳು, ಬೆಂಗಳೂರಿನ ಕಿವುಡರ ಸಂಘದ ಸದಸ್ಯರು, ಜಿಲ್ಲೆಯ ವಿವಿಧ ತಾಲೂಕಿನ ಕಿವುಡ ಸದಸ್ಯರು, ಸಂಘದ ತಾಲೂಕಾ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೨೩ ಜಿಲ್ಲೆಯಿಂದ ೩೦೦ಕ್ಕೂ ಅಧಿಕ ಕಿವುಡರು ಭಾಗವಹಿಸಿದ್ದರು.

ಅ. ೨೫ ಸತ್ಕಾರ್ ಸಭಾಂಗಣದಲ್ಲಿ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿ ಸಭೆ
ಭಟ್ಕಳ; ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಸಭೆಯನ್ನು ಅ. ೨೫ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಸತ್ಕಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ತಿಳಿಸಿದ್ದಾರೆ. 
ಅಂದಿನ ಸಭೆಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಕೊಡುವಲ್ಲಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅರಣ್ಯ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಮಂಜೂರಿ ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಹಾಗೂ ಅತಿಕ್ರಮಣದಾರರಿಗೆ ಪಟ್ಟಾ ಕೊಡುವಲ್ಲಿ ಆಗುವ ವಿಳಂಬದ ಕುರಿತು ಚರ್ಚಿಸಲಾಗುವುದು ಎಂದಿರುವ ಅವರು ಸಭೆಯಲ್ಲಿ  ಹೋರಾಟಗಾರರು ಹಾಗೂ ಜಿಲ್ಲಾಪಂಚಾಯತ್ ಸದಸ್ಯರು, ಹಾಗೂ ವಕೀಲರಾದ ಶಿರಸಿಯ ಜಿ.ಎನ್. ಹೆಗಡೆ ಮುರೇಗಾರ್, ಅಂಕೋಲಾದ ಹೋರಾಟಗಾರರು ಹಾಗೂ ಜಿಲ್ಲಾ ಪಂಚಾಯತ್‌ನ್ ಮಾಜಿ ಸದಸ್ಯರಾದ ಜಿ.ಎಮ್.ಶೆಟಿ,, ಹೊನ್ನಾವರದ ಹೋರಾಟಗಾರರು ಹಾಗೂ ಅತಿಕ್ರಮಣ ಹೋರಾಟ ಸಮಿತಿಯ ಗೌರವಾಧ್ಯಕ್ಷರು ಹಾಗೂ ವಕೀಲರಾದ ಎಂ.ಎನ್ . ಸುಭ್ರಹ್ಮಣ್ಯ  ಮತ್ತು ಹೊನ್ನಾವರ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ ಗೇರುಸೊಪ್ಪ,  ಭಟ್ಕಳ ತಂಜೀಂ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಆಗಮಿಸಲಿದ್ದಾರೆ. ತಾಲೂಕಿನ ಎಲ್ಲಾ ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ  ತಾಲೂಕಿನ  ಎಲ್ಲಾ ಅತಿಕ್ರಣದಾರರು ತಪ್ಪದೇ ಹಾಜರಿದ್ದು ಅತಿಕ್ರಮಣ ಸಮಸ್ಯೆ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಲಹೆ, ಸೂಚನೆ ನೀಡಬೇಕೆಂದೂ ರಾಮಾ ಮೊಗೇರ ವಿನಂತಿಸಿದ್ದಾರೆ.  

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...