ದುಬೈ: ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೆ ತಳ್ಳಿದ ಕೇರಳ ಆರೋಗ್ಯಾಧಿಕಾರಿಯ ವಿವೇಚನಾ ರಹಿತ ಆದೇಶ

Source: so english | By Arshad Koppa | Published on 14th July 2017, 10:53 AM | Gulf News |

ದುಬೈ,ಜು.11: ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಮೃತಪಟ್ಟರೆ ಅವರ ಮೃತ ದೇಹವನ್ನು ತಾಯ್ನಾಡಿಗೆ ತರಬೇಕಿದ್ದರೆ 48 ಘಂಟೆ ಮುಂಚಿತವಾಗಿ ಅನುಮತಿ ಪಡೆದಿರಬೇಕೆಂಬ ಹೊಸ ಆದೇಶವನ್ನು ಕೇರಳದ ಕರಿಪ್ಪೂರ್ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಹೊರಡಿಸಿದ್ದು ಮೊದಲೇ ಸರಕಾರಗಳ ಕಠಿಣ ಕಾನೂನುಗಳಿಂದ ಸಂಕಷ್ಟ ಅನುಭವಿಸುತ್ತಿರುವ ಅನಿವಾಸಿ ಭಾರತೀಯರಿಗೆ ಈ ನಿಯಮವು ಮತ್ತಷ್ಟು ಕಂಟಕವಾಗಿ ಪರಿಣಮಿಸಲಿದೆ.

ಅನಿವಾಸಿ ಭಾರತೀಯನೊಬ್ಬ ಕಡಲನ್ನು ದಾಟಿ ತನ್ನ ಕುಟುಂಬಕ್ಕಾಗಿ ದುಡಿದು ಸಮಾಜ ಹಾಗು ರಾಷ್ಟ್ರದ ಅಭಿವೃದ್ಧಿಯ ಭಾಗವಾಗಿ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತ ಮರಣ ಹೊಂದಿದರೆ, ಅವರ ಮೃತ ಶರೀರವನ್ನು ಊರಿಗೆ ತಲುಪಿಸಲು ಮೊದಲೇ ಜಗತ್ತಿನ ಇತರ ರಾಷ್ಟ್ರಗಳಿಗಿಂತ ಹೆಚ್ಚಾಗಿ ತೊಂದರೆಯನ್ನು ಅನುಭವಿಸುತ್ತ ಬರುತ್ತಿರುವ ಅನಿವಾಸಿ ಭಾರತೀಯರಿಗೆ, ಕರಿಪ್ಪುರಂ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಯ ಆದೇಶವು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಯುಎಇ ಯಲ್ಲಿ ಅನಿವಾಸಿ ಭಾರತೀಯರು ಮರಣ ಹೊಂದಿದರೆ ಮೊದಲು ಪೊಲೀಸ್ ವರದಿ ದಾಖಲಿಸಿ, ಆರೋಗ್ಯ ಅಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆದು ವರದಿ ಬಂದ ಬಳಿಕ ಪೊಲೀಸರು ಯುಎಇ ಆರೋಗ್ಯ ಸಚಿವಾಲಯದಿಂದ ಮರಣ ಪ್ರಮಾಣ ಪತ್ರ ನೀಡಲು ನಿರಾಕ್ಷೇಪಣಾ ಪತ್ರವು ನೀಡಿದ ಬಳಿಕ ಮರಣ ಪ್ರಮಾಣ ಪತ್ರ ಪಡೆದುಕೊಂಡು, ಯುಎಇ ಎಮಿಗ್ರಷನ್ ಕಚೇರಿಯಲ್ಲಿ ವೀಸಾವನ್ನು ರದ್ದುಪಡಿಸಬೇಕು. ಈ ಎಲ್ಲ ಪ್ರಕಿಯೆ ಮುಗಿದ ಬಳಿಕವೇ ಭಾರತೀಯ ದೂತಾವಾಸ ಕಛೇರಿಯು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಮೃತ ವ್ಯಕ್ತಿಯ ಪಾಸ್ಪೋರ್ಟನ್ನು ರದ್ದುಗೊಳಿಸಿ ಮರಣ ಪ್ರಮಾಣ ಪತ್ರವನ್ನು ನೀಡುತ್ತದೆ.

ತದನಂತರ ಈ ಎಲ್ಲಾ ದಾಖಲೆಗಳನ್ನು ಪೋಲೀಸ್ ಇಲಾಖೆಯು ಪರಿಶೀಲಿಸಿ ನಿರಾಕ್ಷೇಪಣಾ ಪತ್ರದೊಂದಿಗೆ, embalming ನಡೆಸಲು ಮೃತ ದೇಹವನ್ನು ಬಿಟ್ಟುಕೊಡುತ್ತಾರೆ. ಶರೀರವನ್ನು ಆರೋಗ್ಯ ಕೇಂದ್ರದಲ್ಲಿ embalming ನಡೆಸಿ, ಅಲ್ಲಿ ದೊರೆತ ಪ್ರಮಾಣ ಪತ್ರದೊಂದಿಗೆ ಪುನಃ ಭಾರತೀಯ ದೂತಾವಾಸ ಕಛೇರಿಗೆ ತೆರಳಿ ಎಲ್ಲಾ ದಾಖಲೆಗಳನ್ನು ಮರು ಪರಿಶೀಲನೆಗೆ ನೀಡಿ embalming ಪ್ರಮಾಣ ಪತ್ರಕ್ಕೆ ರಾಯಭಾರಿ ಕಛೇರಿಯ ಅಧಿಕಾರಿಯ ಸಹಿ ಹಾಗು ಮುದ್ರೆಯನ್ನು ಪಡೆದುಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಅಧಿಕಾರಿಕಳಿಗೆ ಎಲ್ಲಾ ದಾಖಲೆಗಳನ್ನು ನೀಡಿ ಧೃಡೀಕರಿಸಿ, ನಂತರ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳಿಗೆ ಈ ಎಲ್ಲಾ ಪತ್ರಗಳೊಂದಿಗೆ ಕಾರ್ಗೋ ಬುಕಿಂಗ್ ಹಾಗು ಮೃತ ದೇಹವನ್ನು ಊರಿಗೆ ಕೊಂಡೊಯ್ಯುವ ವ್ಯಕ್ತಿಯ ಟಿಕೆಟ್ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳನ್ನು ಪೂರೈಸಲು ಒಂದಕ್ಕಿಂತ ಹೆಚ್ಚು ದಿನಗಳು ತಗಲುತ್ತದೆ. ವಾರಾಂತ್ಯದಲ್ಲೇನಾದರು ಮರಣ ಸಂಭವಿಸಿದಲ್ಲಿ ಕನಿಷ್ಠ ೪-೫ ದಿನಗಳು ತಗಲುತ್ತದೆ.

ಯುಎಇಯಲ್ಲಿ ಸರಕಾರಿ ಕಛೇರಿಗಳ ಕೆಲಸದ ಸಮಯ ಅಪರಾಹ್ನ 2 : 30 ಕ್ಕೆ ಕೊನೆಗೊಳ್ಳುವುದರಿಂದ, ಈ ಎಲ್ಲಾ ಕಾರ್ಯವಿಧಾನಗಳು ಮಾಡುವಾಗ ಎಲ್ಲಿಯಾದರೂ
ಹೆಚ್ಚು ಸಮಯ ತಗಲಿದರೆ ಕನಿಷ್ಠ ೨-೩ ದಿವಸಗಳ ಕಾಲ ಅನಿವಾಸಿಗಳು ತಮ್ಮ ಕೆಲಸಗಳಿಗೆ ಗೈರು ಹಾಜರಾಗಿ ಇದರ ಹಿಂದೆ ಅಳೆಯಬೇಕಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳು ಪೂರ್ತಿಯಾಗಿ ಮೃತ ಶರೀರವನ್ನು ಊರಿಗೆ ತಲುಪಿಸಲು ಕನಿಷ್ಠ ೨-೩ ದಿವಸಗಳು ಬೇಕಾಗುತ್ತದೆ.

ಮೃತಪಟ್ಟ ವಿಷಯ ತಿಳಿದ ದಿನದಿಂದ ಮೃತರ ಮನೆಯಲ್ಲಿ ಆಕ್ರಂದನವು ಮುಗಿಲು ಮುಟ್ಟಿರುತ್ತದೆ, ಇವೆಲ್ಲದರ ಮಧ್ಯೆ ಇಂಥದೊಂದು ಆದೇಶವನ್ನು ಕರಿಪ್ಪುರಂನ ಆರೋಗ್ಯಾಧಿಕಾರಿಗಳು ಹೊರಡಿಸಿ ಅನಿವಾಸಿ ಭಾರತೀಯರು ಹಾಗು ಅವರ ಕುಟುಂಬದ ವಿರುದ್ಧ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.

ಆದುದರಿಂದ ಕೇಂದ್ರ ಹಾಗು ರಾಜ್ಯ ಸರಕಾರಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಈ ಆದೇಶವನ್ನು ಮರುಪರಿಶೀಲಿಸಿ ಅನಿವಾಸಿ ಭಾರತೀಯರ ಸಮಸ್ಯೆಗೆ ಸ್ಪಂದಿಸಬೇಕು ಹಾಗೂ ಸರಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಸರ್ವಾಧಿಕಾರ ಪ್ರದರ್ಶಿಸಿ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದುಬೈಯ ಸಾಮಾಜಿಕ ಕಾರ್ಯಕರ್ತ ನಾಸಿರ್ ಕಾರಾಜೆ ಆಗ್ರಹಿಸಿದ್ದಾರೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...