ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ ( ಬಿಸಿಫ್) ಇದರ ವತಿಯಿಂದ "ಬೀಸಿಎಫ್ ಇಫ್ತಾರ್ ಮೀಟ್ 2017"

Source: bcf dubai | By Arshad Koppa | Published on 5th June 2017, 7:06 AM | Gulf News | Special Report |

ದುಬೈ, ಜೂನ್ ೫: UAE ಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ  ಬ್ಯಾರೀಸ್ ಕಲ್ಚರಲ್ ಫೋರಮ್ ( ಬಿಸಿಫ್) ಇದರ ವತಿಯಿಂದ ಪ್ರತೀ ವರ್ಷ ಆಯೋಜಿಸಲ್ಪಡುವ  ಇಫ್ತಾರ್ ಕಾರ್ಯಕ್ರಮ :" BCF IFTAAR MEET 2017 "  ಈ ವರ್ಷ ಇದೇ ಬರುವ  ಜೂನ್  9 ನೇ ತಾರೀಕಿನಂದು ಶುಕ್ರವಾರ ದುಬೈ ಊದ್ ಮೆಹ್ತಾ ರೋಡ್ ನಲ್ಲಿರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ (ಇಂಡಿಯನ್ ಹೈ ಸ್ಕೂಲ್ ಹತ್ತಿರ) ನಡೆಸಲಾಗುವುದು. ಕನ್ನಡಿಗ ಮತ್ತು ಕನ್ನಡೇತರ ಭಾನದವರು ತಮ್ಮ ಕುಟುಂಬ ಸಮೇತರಾಗಿ ಸೇರುವ ಈ ಕಾರ್ಯಕ್ರಮಕ್ಕೆ ಸುಮಾರು 800 ರಷ್ಟು ಜನ ಸಮೂಹ ಸೇರುವ ನಿರೀಕ್ಷೆ ಇದೆ. 


ಇಫ್ತಾರ್ ಗೂ ಮೊದಲು ಮಕ್ಕಳಿಗಾಗಿ  ಕಿರಾತ್ ಸ್ಪರ್ಧೆ, ಇಸ್ಲಾಮಿಕ್ ರಸ ಪ್ರಶ್ನೆಗಳು ಮೊದಲಾದ ಕಾರ್ಯಕ್ರಮವಿದ್ದು ಇದರಲ್ಲಿ ವಿಜೇತರಾದವರನ್ನು ಬಹುಮಾನಿಸಲಿ ಗೌರವಿಸಲಾಗುವುದು. .  ನಂತರ ಪ್ರಖ್ಯಾತ ದೀನೀ ವಿದ್ವಾಂಸ ರಿಂದ ಪ್ರವಚನ, ದುವಾ ಕಾರ್ಯಕ್ರಮವಿದೆ. 
ಇಫ್ತಾರ್ ನಂತರ BCF ನ ಪ್ರಖ್ಯಾತ ವಾರ್ಷಿಕ  BCF ಸ್ಕಾಲರ್ಶಿಪ್ ಕಾರ್ಯಕ್ರಮದ ಅಂಗವಾಗಿ ಇದೆ ಬರುವ ಆಗಸ್ಟ್ 13 2017 ರಂದು ( ಆದಿತ್ಯವಾರ) ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ   ಲೋಯಲ್ಲ ಹಾಲ್ ನಲ್ಲಿ ನಡೆಯುವ ಬ್ರಹತ್ "BCF ಸ್ಕಾಲರ್ಶಿಪ್ ಮೀಟ್ 2017”   ಕಾರ್ಯಕ್ರಮದ  ಬಗ್ಗೆ ಪ್ರಸ್ತಾವನಾ ಕಾರ್ಯಕ್ರಮ ನಡೆಸಲಾಗುವುದು. 
BCF ಅಧ್ಯಕ್ಷರಾದ ಡಾ B K ಯೂಸಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ  BCF ಇಫ್ತಾರ್ 2017 ಮೀಟ್ ನಲ್ಲಿ ಹಲವಾರು ಗಣ್ಯ ಅತಿಥಿಗಳು, ಧಾರ್ಮಿಕ ನೇತಾರರು ಹಾಗೂ ಸಂಪನ್ಮೂಉಲ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ವಿಶೇಷವಾದ BCF ಇಫ್ತಾರ್ ಕಾರ್ಯಕ್ರಮಕ್ಕೆ ಎಲ್ಲ ಕನ್ನಡಿಗ ಹಾಗೂ ಕನ್ನಡೇತರ ಭಂದುಗಳು ಹಾಗೂ UAE ಯಲ್ಲಿ ಇರುವ ಎಲ್ಲಾ ಕನ್ನಡ ಪರ  ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳು  ಹಾಗೂ  ಸದಸ್ಯರನ್ನು  BCF ಪರವಾಗಿ  BCF ಇಫ್ತಾರ್ ಕಮಿಟಿ ಯ ಚಯರ್ಮನ್  ಜ: ಅಬ್ದುಲ್ ಲತೀಫ್ ಮುಲ್ಕಿ  ಹಾಗೂ ಸದಸ್ಯರು ವಿನಮ್ರವಾಗಿ ಆಹ್ವಾನಿಸಿದ್ದಾರೆ. ಭಾಗವಹಿಸುವ ಸಮಾಜ ಸೇವಾ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬಂದ ತಕ್ಷಣ   ತಮ್ಮ ಸಂಸ್ಥೆಯ ಹೆಸರನ್ನು ಮತ್ತು ತಮ್ಮ ಹೆಸರನ್ನು  ತಿಳಿಸಿ ನೋಂದಾಯಿಸ ವಿಶೇಷವಾಗಿ ವಿಶೇಷವಾಗಿ ವಿನಂತಿಸಲಾಗಿದೆ.

ಮಹಿಳೆಯರಿಗಾಗಿ  ಪ್ರತ್ಯೇಕವಾದ ಆಸನದ ವ್ಯವಸ್ಥೆ ಹಾಗೂ ನಮಾಜು ಮಾಡುವ ವ್ಯವಸ್ಥೆ ಮಾಡಲಾಗುವುದು.
BCF ಇಫ್ತಾರ್ 2017 ಇದರ ಬಗ್ಗೆ ಯಾವುದೇ ಮಾಹಿತಿ ಬೇಕಾಗಿದ್ದಲ್ಲಿ ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸ ಬೇಕಾಗಿ ವಿನಂತಿ.
050 6983095 , 055  9576465 , 050 7649016 , 050 358425

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...