ದುಬೈ ನೀರುಗಾಲುವೆಯನ್ನು ಈಜಿದ ಮೊದಲ ಸೌದಿ ಮಹಿಳೆ ಡಾ.ಮರ್ಯಮ್

Source: S O News service | By sub editor | Published on 13th March 2017, 12:12 AM | Gulf News | Special Report | Don't Miss |

ದುಬೈ: ವೃತ್ತಿಯಲ್ಲಿ ದಂತೆ ವೈದ್ಯೆಯಾಗಿರುವ ಸೌದಿ ಅರೇಬಿಯಾದ ಡಾ.ಮರ್ಯಮ್ ಸಲಾಹ್ ಬಿನ್‌ಲಾಡೆನ್ ದುಬೈ ಕ್ರೀಕ್ ಮತ್ತು ನೀರುಗಾಲುವೆ( ವಾಟರ್ ಕ್ಯಾನಲ್ ) ಯನ್ನು ಯಶಸ್ವಿಯಾಗಿ ಈಜುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

 24 ಕಿ.ಮೀ ದೂರದ ದುಬೈ ಕ್ರೀಕ್ ಮತ್ತು ನೀರುಗಾಲುವೆಯನ್ನು 9 ಗಂಟೆ ಮತ್ತು 10 ನಿಮಿಷಗಳಲ್ಲಿ ಈಜಿ ದಡ ಸೇರುವ ಮೂಲಕ ಈ ಸಾಧನೆ ಮಾಡಿದ ಸೌದಿ ಅರೇಬಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಶುಕ್ರವಾರ ನಸುಕಿನಲ್ಲಿ ಬೆಳಗ್ಗೆ 5 ಗಂಟೆಗೆ ಮರ್ಯಮ್‌ಅವರು ಅಲ್ ಸಿಂದಾಘದಲ್ಲಿ ದುಬೈ ಕ್ರೀಕ್‌ನಿಂದ ಈಜು ಆರಂಭಿಸಿದ್ದರು. ಭಾರೀ ಪ್ರವಾಹದ ವಿರುದ್ಧ ಈಜುತ್ತಾ ಮಧ್ಯಾಹ್ನ 2:10ಕ್ಕೆ ಪೋರ್ ಸೀಸನ್ಸ್ ಹೊಟೇಲ್ ಪಕ್ಕದ ಅಲ್ ಗುಬಾಯಿಬಾದಲ್ಲಿ ನೀರಿನಿಂದ ಹೊರಬಂದರು. ಇಂಗ್ಲೆಂಡ್‌ನಲ್ಲಿ ಜನಿಸಿ, ಜೆದ್ದಾದಲ್ಲಿ ಬೆಳೆದ ದಂತವೈದ್ಯೆ ಮರ್ಯಮ್ ಅವರು 2016ರಲ್ಲಿ ಲಂಡನ್‌ನಲ್ಲಿ ಥೇಮ್ಸ್ ನದಿಯನ್ನು( 162 ಕಿ.ಮಿ) ಈಜಿ ದಾಖಲೆ ಬರೆದಿದ್ದರು

Read These Next

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...