ದುಬೈ:ಪ್ರವಾಸಿ ಭಾರತೀಯ ದಿವಸ್, ಕೆಸಿಎಫ್ ಯುಎಇ ಪ್ರತಿನಿಧಿಯಾಗಿ ಮಹಬೂಬ್ ಸಖಾಫಿ ಪ್ರಯಾಣ 

Source: kcf dubai | By Arshad Koppa | Published on 8th January 2017, 8:49 PM | Gulf News | Guest Editorial | Don't Miss |

ದುಬೈ : ಭಾರತೀಯ ವಿದೇಶಾಂಗ ಸಚಿವಾಲಯದ ವತಿಯಿಂದ ಅನಿವಾಸಿ ಭಾರತೀಯರ ಏಳಿಗೆಗಾಗಿ ಜನವರಿ 7, 8, 9 ರಂದು  ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ಸಮಿತಿಯ ಪ್ರತಿನಿಧಿಯಾಗಿ ದುಬೈ ಝೋನ್ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯ ಶನಿವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. 

ಯು ಎ ಇ ಯಿಂದ ಆಯ್ಕೆಗೊಂಡ 100 ಪ್ರತಿನಿಧಿಗಳಲ್ಲಿ ಒಬ್ಬರಾಗಿರುವ ಮಹಬೂಬ್ ಸಖಾಫಿ ಕಿನ್ಯರವರು  ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್)  ದುಬೈ ಝೋನ್ ಅಧ್ಯಕ್ಷರಾಗಿದ್ದು, ಕೆ.ಸಿ.ಎಫ್ ಯು ಎ ಇ ನ್ಯಾಷನಲ್ ಪಬ್ಲಿಷಿಂಗ್ ಡಿವಿಷನ್ ಸಂಚಾಲಕರಾಗಿಯೂ, ಕರ್ನಾಟಕದ ಹಲವಾರು ಬಡ ನಿರ್ಗತಿಕ ಸಂಘಸಂಸ್ಥೆಗಳ ಅಭಿವೃದ್ದಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಮೆಹಬೂಬ್ ಸಖಾಫಿ ರವರು ಬಡ ನಿರ್ಗತಿಕ ಕುಟುಂಬಗಳ ಆಶಾಕೇಂದ್ರ ಮಲ್ಜಾ-ಉ ದುಆತಿ ವದ್ದ-ಅವತುಲ್ ಇಸ್ಲಾಮಿಯ್ಯ ಇದರ ಯು ಎ ಇ ಸಂಯೋಜಕರಾಗಿಯೂ, ದಾರುಲ್ ಮುಸ್ತಾಫಾ ಮೋರಲ್ ಅಕಾಡೆಮಿ ದುಬೈ ಇದರ ಗೌರವಾಧ್ಯಕ್ಷರಾಗಿಯೂ ತನ್ನ ಕಾರ್ಯವೈಖರಿಯನ್ನು ವಿಸ್ತರಿಸಿಕೊಂಡಿದ್ದಾರೆ.  ಅರ್ಹರವಾಗಿಯೇ "ಅನಿವಾಸಿ ಭಾರತೀಯ ದಿವಸ್" ಗೆ ಪ್ರತಿನಿಧಿಯಾಗಿ ಆಯ್ಕೆಗೊಂಡ ಮೆಹಬೂಬ್ ಸಖಾಫಿ ಕಿನ್ಯ ತನ್ನ ವಾಕ್ಚಾತುರ್ಯದಿಂದ ಜನಮನ ಗೆದ್ದ ಕನ್ನಡ ವಾಗ್ಮಿಯೂ ಯು ಎ ಇ ಗಲ್ಫ್ ಇಶಾರ ಮಾಸಪತ್ರಿಕೆಯ ಉಧ್ಘಾಟನ ಸಮಾರಂಭಾದಲ್ಲಿ ಅಂದಿನ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಆಗಿದ್ದ ಶ್ರೀ   ಕಾಗೋಡ್ ತಿಮ್ಮಪ್ಪರವರಿಂದಮೆಚ್ಚುಗೆಯನ್ನು ಪಡೆದುಕೊಂಡಿದ್ದರು. 

ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಪ್ರದಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೋರ್ಚುಗೀಸ್ ಪ್ರಧಾನ ಮಂತ್ರಿ ಡಾ ! ಅಂಟೋನಿಯಾ ಕೋಸ್ಟಾ, ಮಲೇಷಿಯನ್ ಸಚಿವರಾದ ಸ್ವಾಮೀ ವೇಲು , ಮಲೇಷಿಯನ್ ಸರಕಾರದ ಪ್ರತ್ಯೇಕ ಪ್ರತಿನಿಧಿ ಡಾ! ಸುಬ್ರಮಣ್ಯನ್, ಮಾರಿಷಸ್ ಅರೋಗ್ಯ ಮಂತ್ರಿಗಳಾದ ಪೃಥ್ವಿ ರಾಜ್ ಸಿಂಗ್ ರೂಪಲ್, ಕೇಂದ್ರ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್, ಶ್ರೀ ವಿಜಯ್ ಗೋಯಲ್, ಶ್ರೀ ವಿ ಕೆ ಸಿಂಗ್, ಪ್ರಕಾಶ್ ಜಾವಡೇಕರ್, ಶ್ರೀ ಎಂ ಜೆ ಅಕ್ಬರ್ ಸೇರಿದಂತೆ  ವಿವಿಧ ರಾಜ್ಯದ ಮುಖ್ಯ ಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾಡಲಿದ್ದಾರೆ. 

ವಿಶ್ವದ ವಿವಿದ ಅನಿವಾಸಿ ಸಂಘ ಸಂಸ್ಥೆಗಳ ಸುಮಾರು 4000 ಪ್ರತಿನಿಧಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರ ಏಳಿಗೆಗೆ ಬೇಕಾದ ಹಲವು ಕಾರ್ಯಕ್ರಮಗಳು ನಡೆಯಲಿದೆ. 

ಕೆಸಿಎಫ್ ಹಾಗು ವಿವಿಧ ಸುನ್ನಿ ಸಂಘಟನೆಗಳಿಂದ ಅಭಿನಂದನೆ:

ಕೆಸಿಎಫ್ ದುಬೈ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ, ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಶುಭ ಹಾರೈಸಿ ಮಾತನಾಡಿದರು, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಅಬ್ದುಲ್ ಕರೀಂ ಮುಸ್ಲಿಯಾರ್, ರಹೀಮ್ ಕೋಡಿ, ದುಬೈ ಸಮಿತಿ ನಾಯಕರಾದ ಅಬ್ದುಲ್ ಅಝೀಝ್ ಲತೀಫಿ, ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ನಝೀರ್ ಕೆಮ್ಮಾರ, ಕಲಂದರ್ ಕಬಕ ಸೇರಿದಂತೆ ಹಲವು ನಾಯಕರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹಬೂಬ್ ಸಖಾಫಿ ರವರು ಇದು ಕೇವಲ ನನ್ನ ವರ್ಚಸ್ಸಿನಿಂದ ದೊರಕಿದ ಅವಕಾಶವಲ್ಲ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕೆಸಿಎಫ್ ಗೆ ಸಿಕ್ಕಿದ ಅಂಗೀಕಾರ, ಇದಕ್ಕೆ ನಿಮಗೆಲ್ಲರಿಗೂ ನಾನು ಅಭಾರಿ ಯಾಗಿದ್ದೇನೆಂದು ಹೇಳಿದರು.

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...