ದುಬೈ: ಈಗ ಚೀನೀಯರಿಗೆ ಯು.ಎ.ಇ. ಪ್ರವೇಶಿಸಲು ವಿಸಾ ಆನ್ ಅರೈವಲ್ ಸೌಲಭ್ಯ

Source: so english | By Arshad Koppa | Published on 5th September 2016, 8:25 AM | Gulf News |

ದುಬೈ, ಸೆ ೩: ಉನ್ನತ ಸಚಿವಾಲಯ ಘೋಷಿಸಿದ ಪ್ರಕಾರ ಈಗ ಚೀನಾ ನಾಗರಿಕರು ಯು.ಎ.ಇ. ಗೆ ಪೂರ್ವ ವೀಸಾ ಇಲ್ಲದೇ ನೇರವಾಗಿ ವಿಮಾನ ನಿಲ್ದಾಣದಲ್ಲಿಯೇ ವೀಸಾ ಆನ್ ಅರೈವಲ್ ಅಥವಾ ಆಗಮನದ ಹೊತ್ತಿನ ವೀಸಾ ವನ್ನು ಪಡೆದುಕೊಳ್ಳಬಹುದು. 

ವಿಶ್ವದ ಎರಡನೆಯ ಆರ್ಥಕ ಬಲಿಷ್ಠ ರಾಷ್ಟ್ರವಾಗಿರುವ ಚೀನಾ ಯು.ಎ.ಇ. ಯನ್ನು ತನ್ನ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಾಗಿ ಅವಲಂಬಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಚೀನೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ನಗರಗಳಿಗೆ ಆಗಮಿಸುತ್ತಿದ್ದಾರೆ. 

ಚೀನಾ ಸರ್ಕಾರದಿಂದ ಈ ಬಗ್ಗೆ ಬಂದ ಮನವಿಯನ್ನು ಪುರಸ್ಕರಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಯು.ಎ.ಇ. ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ದುಬೈ ಸಂಸ್ಥಾನದ ಆಡಳಿತಗಾರರಾದ  ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ರವರು ತಿಳಿಸಿದ್ದಾರೆ

ಯು.ಎ.ಇ.ಯಲ್ಲಿ ಪ್ರವಾಸೋದ್ಯಮಕ್ಕಾಗಿ ಸುಮಾರು ಹತ್ತು ವರ್ಷಗಳ ಹಿಂದೆಯೇ ಹಲವಾರು ಬಿಲಿಯನ್ ಡಾಲರುಗಳಷ್ಟು ಬಂಡವಾಳವನ್ನು ಹೂಡಲಾಗಿದ್ದು ಪ್ರವಾಸಿಗರನ್ನು ಆಕರ್ಷಿಸಲು ಈ ನಡೆ ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ. 

2015ರಲ್ಲಿ 14.2 ಮಿಲಿಯನ್ ಪ್ರವಾಸಿಗರು ದುಬೈಗೆ ಭೇಟಿ ನೀಡಿದ್ದು 2020ರ ವೇಳೆಗೆ ಇಪ್ಪತ್ತೈದು ಮಿಲಿಯನ್ ದಾಟುವ ನಿರೀಕ್ಷೆ ಇದೆ. ವಿಶ್ವ ವಾಣಿಜ್ಯ ಜಾತ್ರೆ ಎಕ್ಸ್ಪೋ 2020 ಗಾಗಿ ಸಿದ್ದತೆಗಳು ಭರದಿಂದ ನಡೆದಿವೆ. 2015ರಲ್ಲಿ ಒಟ್ಟು 450,000 ಚೀನೀಯರು ಪ್ರವಾಸಿಗರಾಗಿ ಆಗಮಿಸಿದ್ದಾರೆ. ಇದು ಕಳೆದ ವರ್ಷಕ್ಕಿಂತ 29% ಹೆಚ್ಚು. 

ಚೀನಾದ ಸೇರ್ಪಡೆಯೊಂದಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ಒಟ್ಟು 47 ರಾಷ್ಟ್ರಗಳಿಗೆ ನೀಡಲಾಗಿದ್ದು ಇವುಗಳಲ್ಲಿ ಬಹುತೇಕ ಎಲ್ಲವೂ ಪಾಶ್ಚಾತ್ಯ ದೇಶಗಳಾಗಿವೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.