ದುಬೈ:’ಮಾರ್ಚ್ 22' ಕನ್ನಡ ಸಿನೆಮಾ ಶೀಘ್ರವೇ ಬಿಡುಗಡೆ- ಪ್ರವಾಸ ಸ್ಪರ್ಧೆಗೆ ಆಹ್ವಾನ

Source: iqbal uchila | By Arshad Koppa | Published on 28th March 2017, 8:20 AM | Gulf News |

ಕನಸಿನ ನಗರಿ ಎಂದೇ ಖ್ಯಾತಿ ಪಡೆದಿರುವ ದುಬೈಗೆ ಪ್ರವಾಸಗೈಯ್ಯಬೇಕೇ ...ಈ ಸುವರ್ಣಾವಕಾಶ ನಿಮ್ಮದಾಗಬೇಕಿದ್ದರೆ ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿಲ್ಲ....ಮಾಡಬೇಕಿರುವುದು ಏನು ಗೊತ್ತಾ...? ಕೇವಲ ಒಂದು ಲೈಕ್ ಕೊಡಬೇಕು ಅಷ್ಟೇ...! ಫೇಸ್ಬುಕ್'ಗೆ ಒಂದು ಲೈಕ್ ಒತ್ತಿ 3 ದಿನಗಳ ಸುಂದರ ದುಬೈ ಪ್ರವಾಸ ನಿಮ್ಮದಾಗಿಸಿಕೊಳ್ಳಿ....


ಬಹು ನಿರೀಕ್ಷಿತ 'ಮಾರ್ಚ್ 22' ಕನ್ನಡ ಸಿನೆಮಾ ಶೀಘ್ರವೇ ಬಿಡುಗಡೆಗೊಳ್ಳಲಿದೆ. ಈ ಸಿನೆಮಾದ ಫೇಸ್ಬುಕ್ ಪೇಜ್'ಗೆ ಹೋಗಿ ಈ ಪೇಜಿಗೆ ಲೈಕ್ ಕೊಡಬೇಕು. ನೀವು ಲೈಕ್ ಬಟನ್ ಒತ್ತಿದಂತೆ ನೀವು ಸ್ಪರ್ಧಿಯಾಗಲಿದ್ದೀರಿ. ಸಿನೆಮಾ ಬಿಡುಗಡೆಗೂ ಮುನ್ನ ಈ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗುದು. ಈ ಸ್ಪರ್ಧೆಯಲ್ಲಿ ವಿಜೇತರಾಗುವವರು ತನ್ನೊಂದಿಗೆ ಇನ್ನೊಬ್ಬರನ್ನು ದುಬೈ ಪ್ರವಾಸಕ್ಕೆ ಕರೆದೊಯ್ಯಬಹುದು. ಸ್ಪರ್ಧೆಯಲ್ಲಿ ವಿದೇಶದಲ್ಲಿರುವವರು ವಿಜೇತರಾದರೆ ಅವರು ತಮ್ಮ ಕುಟುಂಬ ಅಥವಾ ಗೆಳೆಯರಿಗೆ ದುಬೈ ಪ್ರವಾಸದ ಅವಕಾಶವನ್ನು ನೀಡಬಹುದಾಗಿದೆ.


ಯಾವುದೇ ರೀತಿಯ ಹಣವನ್ನು ನೀಡದೆ ಕೇವಲ ಒಂದು ಲೈಕ್ ಒತ್ತಿ 3 ದಿನಗಳ ದುಬೈ ಪ್ರವಾಸ ಮಾಡುವ ಜೊತೆಗೆ 'ಮಾರ್ಚ್ 22' ಸಿನೆಮಾದ ಪ್ರೀಮಿಯರ್ ಶೋವನ್ನು ಕೂಡ ದುಬೈಯಲ್ಲಿ ಗಣ್ಯರೊಂದಿಗೆ ಕೂತು ನೋಡುವ ಅದೃಷ್ಟಶಾಲಿ ನೀವಾಗಬಹುದು. ಈಗಾಗಲೇ 'ಮಾರ್ಚ್ 22' ಫೇಸ್ಬುಕ್ ಪೇಜಿಗೆ ಲೈಕ್ ಕೊಟ್ಟವರು ಕೂಡ ಈ ಸ್ಪರ್ಧೆಯ ಕಣದಲ್ಲಿರಲಿದ್ದಾರೆ.


'ಮಾರ್ಚ್ 22' ಸಿನೆಮಾದ ಫೇಸ್ಬುಕ್ ಪೇಜಿಗೆ ಲೈಕ್ ಕೊಟ್ಟರೆ ಸ್ಪರ್ಧೆಯ ಮಾಹಿತಿ ಹಾಗು ಇನ್ನಿತರ ವಿಷಯಗಳನ್ನು ಸವಿವರವಾಗಿ ತಿಳಿಸಲಾಗುದು. ಈ ಹಿನ್ನೆಲೆಯಲ್ಲಿ 'ಮಾರ್ಚ್ 22' ಸಿನೆಮಾದ ಫೇಸ್ಬುಕ್ ಪೇಜನ್ನು ನೋಡುತ್ತಾ ಇರಿ. ಜೊತೆಗೆ ಈ ಪೇಜನ್ನು ಹೆಚ್ಚೆಚ್ಚು ಶೇರ್ ಮಾಡುವವರಿಗೂ ವಿಶೇಷ ಬಹುಮಾನ ಘೋಷಿಸಲಾಗಿದೆ.


ಸ್ಪರ್ಧೆಯಲ್ಲಿ ವಿಜೇತರಾಗುವ ಇಬ್ಬರಿಗೆ 3 ದಿನಗಳ ದುಬೈ ಪ್ರವಾಸದಲ್ಲಿ ದುಬೈಗೆ ತೆರಳಿ ಹಿಂದಿರುಗಬೇಕಿರುವ ವಿಮಾನ ಟಿಕೆಟ್, ಹೋಟೆಲಿನಲ್ಲಿ ವಸತಿ ವ್ಯವಸ್ಥೆ, ಸುಖಕರವಾಗಿ  ಹಗಲು-3 ರಾತ್ರಿ ದುಬೈಯಲ್ಲಿ ಕಳೆಯಬಹುದಾಗಿದೆ.


ನಿಯಮ: ವಿಜೇತರಾಗುವ ಪುರುಷರು ಅಥವಾ ಯುವಕರು ತನ್ನೊಂದಿಗೆ ಪತ್ನಿಯನ್ನು ಅಥವಾ ಪೋಷಕರನ್ನು ಕರೆದುಕೊಂಡು ಬರಬಹುದು. ಮಹಿಳೆ ಅಥವಾ ಯುವತಿಯರು ತಮ್ಮ ಪತಿಯನ್ನು ಅಥವಾ ತಂದೆ ಅಥವಾ ತಾಯಿಯನ್ನು ಕರೆದುಕೊಂಡು ಬರಬಹುದಾಗಿದೆ. ಭಾರತೀಯ ಪಾಸ್ಸ್ಪೋರ್ಟ್ ( passport validity) ಕ್ರಮಬದ್ಧವಾಗಿರಬೇಕು.

https://www.facebook.com/march22movie/
 

Read These Next