ದುಬೈ: ಅಕ್ಟೊಬರ್ 6 ರಂದು ಗಲ್ಫಿನಲ್ಲಿ 'ಮಾರ್ಚ್ 22'  ಸಿನೆಮಾ ಬಿಡುಗಡೆ

Source: so english | By Arshad Koppa | Published on 18th September 2017, 8:39 AM | Gulf News | Special Report | Guest Editorial |

ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  'ಮಾರ್ಚ್ 22'  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ.

ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ 'ಮಾರ್ಚ್ 22'  ಸಿನೆಮಾದಲ್ಲಿ  ನಟಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್, ಅವರ ಧರ್ಮ ಪತ್ನಿ, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್, ಯು-ಟರ್ನ್, ರಂಗತರಂಗಿ ಖ್ಯಾತಿಯ ನಟಿ ರಾಧಿಕಾ  ಚೇತನ್ ಸೇರಿದಂತೆ ಖ್ಯಾತ ನಟ-ನಟಿಯರು ಭಾಗವಹಿಸಲಿದ್ದಾರೆ. 

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಸಿನೆಮಾ ಕರ್ನಾಟಕದಾದ್ಯಂತ ಬಿಡುಗಡೆಯಾಗಿದ್ದು, ಸಿನೆಮಾ ಬಗ್ಗೆ ನಿರೀಕ್ಷೆಗೂ ಮೀರಿದ ಮೆಚ್ಚುಗೆ, ಪ್ರತಿಕ್ರಿಯೆ, ಅಭಿಪ್ರಾಯಗಳು ವ್ಯಕ್ತವಾಗಿವೆ. 

ಸಿನೆಮಾದಲ್ಲಿ ಖ್ಯಾತ ನಟ  -ನಟಿಯರ ದಂಡೇ ಇದೆ.  ಅನಂತ್‍ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್  ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ  ಮುಂತಾದವರು ನಟಿಸಿದ್ದಾರೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. 

ದುಬೈಯಲ್ಲಿ  ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಹೆಸರಾಂತ ಗಾಯಕ ಹರೀಶ್ ಶೇರಿಗಾರ್  ಹಾಗು ಅಕ್ಷತಾ ರಾವ್ ಈ ಸಿನೆಮಾದಲ್ಲಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನೆಮಾದ ಕತೆ, ಹಾಡುಗಳು ಕನ್ನಡ ಸಿನೆಮಾ ಪ್ರಿಯರ ಮನಗೆದ್ದಿದೆ. 

ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್  ರಾಜಮಗ ಸಂಗೀತನೀಡಿರುವ ಈ ಸಿನೆಮಾದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್  ರಾಜಮಗ, ಅಕ್ಷತಾ ರಾವ್  ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. 


ನೀರನ್ನು ಕೇಂದ್ರ ಬಿಂದು ಆಗಿಟ್ಟುಕೊಂಡು, ಹಿಂದೂ-ಮುಸ್ಲಿಮರ ಮಧ್ಯೆ ಸೌಹಾರ್ದತೆಯನ್ನು ಸಾರುವ ಈ ಸಿನೆಮಾ ರಾಜ್ಯಾದ್ಯಂತ ಜನರ ಮನ ಗೆದ್ದಿದೆ. ಪತ್ರಿಕೆ ಹಾಗು ಟಿವಿ ಮಾಧ್ಯಮಗಳ ಪ್ರಶಂಸೆಗೆ ಪಾತ್ರವಾಗಿರುವ ಮಾರ್ಚ್-೨೨ ಸಿನೆಮಾ ಬಗ್ಗೆ ಉತ್ತಮ ವಿಮರ್ಶೆ ಕೂಡ ವ್ಯಕ್ತವಾಗಿದೆ. 

Read These Next

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...