ದುಬೈ:  ಡಿಸೆಂಬರ್ 23 ರಂದು ಕೆಸಿಎಫ್ ದುಬೈ ಇಲಲ್ ಹಬೀಬ್ ಮೀಲಾದ್ ಸಮಾವೇಶ

Source: kcf dubai | By Arshad Koppa | Published on 23rd December 2016, 1:06 PM | Gulf News | Guest Editorial |

ದುಬೈ, ಡಿ ೨೨: ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ಝೋನ್ ಸಮಿತಿ ಆಶ್ರಯದಲ್ಲಿ ಪ್ರೀತಿಯ ಪ್ರವಾದಿ ಶಾಂತಿಯ ಹಾದಿ ಎಂಬ ಶೀರ್ಷಿಕೆಯಲ್ಲಿ ನಡೆಯುವ ಇಲಲ್ ಹಬೀಬ್ ಬೃಹತ್ ಮೀಲಾದ್ ಸಮಾವೇಶ ಡಿಸೆಂಬರ್ 23 ರಂದು ಶುಕ್ರವಾರ ಸಂಜೆ 5 ಘಂಟೆಗೆ ದುಬೈ ದೇರಾ ಬನಿಯಾಸ್ ರಸ್ತೆಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 

 

ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಹಾಜಿ ಅಡ್ಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙ್ಙಳ್ ಎಮ್ಮೆಮಾಡು (ನಿರ್ದೇಶಕರು ಬೈತುಲ್ ಹಿಝ್ಝ,ನರಿಕ್ಕುಂಞಿ) ಉದ್ಘಾಟಿಸಲಿದ್ದಾರೆ.  ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ ವಿಜೇತರಾದ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರೂ ಆದ ಯುವ ವಾಗ್ಮಿ ಮೌಲಾನಾ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯ ಭಾಷಣ ಮಾಡಲಿದ್ದಾರೆ. ಕೆಸಿಎಫ್ ದುಬೈ ಝೋನ್ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙ್ಙಳ್ ಕಿಲ್ಲೂರು ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಲಿದ್ದಾರೆ. 

 

 

ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವಾ ಮಂಗಳೂರು, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಕೊಡಗು ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಹಂಝ ಕೊಟ್ಟಮುಡಿ ಸೇರಿದಂತೆ ಹಲವು ಉಲಮಾ ಉಮರಾ ಸಾಮಾಜಿಕ ನಾಯಕರುಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.  

 

ಸಂಜೆ 5 ಘಂಟೆಗೆ ಸರಿಯಾಗಿ ಮೌಲೂದ್ ಪಾರಾಯಣ ನಡೆಯಲಿದ್ದು ನಂತರ ಕೆಸಿಎಫ್ ದುಬೈ ಬುರ್ದಾ ತಂಡದಿಂದ ಬುರ್ದಾ ಆಲಾಪನೆ ಹಾಗೂ ನಆತೇ ಷರೀಫ್ ನಡೆಯಲಿದೆ, ಪ್ರಸ್ತುತ ಕಾರ್ಯಕ್ರಮಕ್ಕೆ ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಪ್ರವಾದಿ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೆಸಿಎಫ್ ದುಬೈ ಝೋನ್ ಪ್ರಧಾನ ಕಾರ್ಯದರ್ಶಿ ಕಲಂದರ್ ಕಬಕ ಹಾಗೂ ಮೀಲಾದ್ ಸಮಿತಿ ಕನ್ವೀನರ್ ಹಂಝ ಎಮ್ಮೆಮಾಡು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...