ದುಬೈ: "ಪ್ರೀತಿಯ ಪ್ರವಾದಿ - ಶಾಂತಿಯ ಹಾದಿ" ಘೋಷವಾಕ್ಯದೊಂದಿಗೆ ಈದ್ ಮಿಲಾದ್ ಆಚರಿಸಲು ಯೋಜನೆ

Source: kcf | By Arshad Koppa | Published on 26th October 2016, 8:30 PM | Gulf News | Don't Miss |

ದುಬೈ : ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ) ರವರ 1491 ನೇ ಜನ್ಮ ದಿನಾಚರಣೆಯನ್ನು ವಿಶ್ವದಾದ್ಯಂತ ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಲು ಅಣಿಯಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಲೇಷ್ಯಾ, ಲಂಡನ್ ಸಹಿತ GCC ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಧಾರ್ಮಿಕ ಸಾಂಸ್ಕೃತಿಕ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF)  "ಪ್ರೀತಿಯ ಪ್ರವಾದಿ - ಶಾಂತಿಯ ಹಾದಿ" ಎಂಬ ಘೋಷ ವಾಕ್ಯದೊಂದಿಗೆ ಪವಿತ್ರ ರಬೀವುಲ್ ಅವ್ವಲ್ ಮಾಸದಲ್ಲಿ ಪ್ರತೀ ರಾಷ್ಟ್ರಗಳಲ್ಲೂ  "ಇಲಲ್ ಹಬೀಬ್" ಎಂಬ ಶೀರ್ಷಿಕೆಯಡಿಯಲ್ಲಿ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು ಆ ಪ್ರಯುಕ್ತ KCF ದುಬೈ ಸಮಿತಿಯ ವತಿಯಿಂದ ಡಿಸಂಬರ್ 23 ರಂದು ಪ್ರಸ್ತುತ ಸಮಾವೇಶ ನಡೆಯಲಿದೆ.  ಸಮಾವೇಶದ ಯಶಸ್ವೀ ಕಾರ್ಯಾಚರಣೆಗಾಗಿ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯೊಂದಕ್ಕೆ  ರೂಪು ರೇಖೆ ನೀಡಿತು. 

ಕೆಸಿಎಫ್ ದುಬೈ ಝೋನ್ ಅಧ್ಯಕ್ಷ ಬಹು ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಸೇರಿದ ವಿಶೇಷ ಸಭೆಯನ್ನು 'ಅಸ್ಸುಫ್ಪ'  ಚೀಫ್ ಅಮೀರ್ ಬಹು ಇಬ್ರಾಹೀಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು  ಪ್ರವಾದಿ ಜನ್ಮ ದಿನಾಚರಣೆಯನ್ನು ಪವಿತ್ರ ಖುರ್ ಆನ್ ಹಾಗೂ ಹದೀಸ್ ಗಳ ಪುರಾವೆಗಳ ಸಹಿತ ಮಂಡಿಸಿದರು. 

ಪ್ರಸ್ತುತ ಮೀಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಎಸ್ ವೈಎಸ್ ಕಾರ್ಯದರ್ಶಿ ಬಹು MSM ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಭಾಗವಹಿಸಲಿದ್ದು, ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ಸಹಿತ ಹಲವು ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದಲ್ಲಿ ನಡೆಯಲಿದೆ.


ದುಬೈ ಝೋನ್ ಶಿಕ್ಷಣ ಸಮಿತಿ ಅಧ್ಯಕ್ಷರಾದ ಬಹು ಅಬ್ದುಲ್ ಅಝೀಝ್ ಲತೀಫಿ ಮೀಲಾದ್ ಸ್ವಾಗತ ಸಮಿತಿಯ ಪ್ಯಾನಲ್ ವಾಚಿಸಿದರು‌.
ಸ್ವಾಗತ ಸಮಿತಿ ಚೇರ್ಮ್ಯಾನ್ ಆಗಿ ಆಶ್ರಫ್ ಹಾಜಿ ಅಡ್ಯಾರ್, ಕನ್ವೀನರಾಗಿ ಹಂಝ ಎಮ್ಮೆಮಾಡು ಹಾಗೂ ಕೋಶಾಧಿಕಾರಿಯಾಗಿ ಕುಡ್ತಮುಗೇರು ಅಬ್ದುಲ್ಲಾ ಉಸ್ತಾದರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಇಖ್ಬಾಲ್ ಕಾಜೂರ್ ಹಾಗೂ ಫಾರೂಖ್ ಜಾರಿಗೆಬೈಲ್ ರವರನ್ನು ಆರಿಸಲಾಯಿತು. ವೈಸ್ ಚೇರ್ಮಾನ್ ಗಳಾಗಿ ಬಶೀರ್ ಬೊಳುವಾರು, ಅಬೂಬಕರ್ ಹಾಜಿ ಕೊಟ್ಟಮುಡಿ, ನಝೀರ್ ಹಾಜಿ ಕೆಮ್ಮಾರ ಹಾಗೂ ಜೋಯಿಂಟ್ ಕನ್ವೀನರಾಗಿ ಅರಫಾತ್ ನಾಪೊಕ್ಲು, ನವಾಝ್ ಹಾಜಿ ಕೋಟೆಕಾರು, ಹಸನ್ ಜಾನ್ಸಲೆಯವರನ್ನು ನೇಮಕ ಮಾಡಲಾಯಿತು.

ಕಾರ್ಯಕಾರೀ ಸದಸ್ಯರಾಗಿ ಹುಸೈನ್ ಹಾಜಿ ಕಿನ್ಯ, ಅಬ್ದುಶ್ಶಕೂರ್ ಮಣಿಲ, ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಇಬ್ರಾಹಿಂ ಮದನಿ ಹೋರ್ಲಂಝ್, ಅಬ್ದುರ್ರಹೀಂ ಕೋಡಿ, ಫರಾಝ್ ಕೋಟೆಕಾರು, ಅಝೀಂ ಉಚ್ಚಿಲ, ಮೂಸ ಹಾಜಿ ಬಸರ, ಅಬ್ದುಲ್ ಅಝೀಝ್ ಕಾಟಿಪಳ್ಳ, ಇಬ್ರಾಹೀಂ ಹಾಜಿ ಹಳೆಯಂಗಡಿ, ಅಬ್ದುರ್ರವೂಫ್ ಕೋಟೆಕಾರು, ಇಂಜಿನಿಯರ್ ಮುಹಮ್ಮದ್ ಸುಳ್ಯ ಹಾಗೂ ಅಬ್ದುಲ್ ಕರೀಂ ಉಳ್ಳಾಲ ರವರನ್ನು ಆರಿಸಲಾಯಿತು.

ಫೈನಾನ್ಸಿಯಲ್ ಚೇರ್ಮ್ಯಾನ್ ಆಗಿ ಇಬ್ರಾಹೀಂ ಹಾಜಿ ಕೊಳ್ನಾಡು ಹಾಗೂ ಕನ್ವೀನರಾಗಿ ಅಸ್ಗರ್ ಮೂರ್ನಾಡು, ಪಬ್ಲಿಷಿಂಗ್ ಚೇರ್ಮ್ಯಾನಾಗಿ ಅಬ್ದುಲ್ ಅಝೀಝ್ ಅಹ್ಸನಿ ಹಾಗೂ ಕನ್ವೀನರಾಗಿ ನಿಯಾಝ್ ಬಸರ, ಮೀಡಿಯ ಚೇರ್ಮ್ಯಾನಾಗಿ ರಿಯಾಝ್ ಕೊಂಡಂಗೇರಿ ಹಾಗೂ ಕನ್ವೀನರಾಗಿ ಆಸಿಫ್ ಇಂದ್ರಾಜೆ, ಫುಡ್ ಎಂಡ್ ರೀಫ್ರೆಶ್ಮೆಂಟ್ ಚೇರ್ಮ್ಯಾನಾಗಿ ಕಾಸಿಂ ಮದನಿ ತೆಕ್ಕಾರು, ಕನ್ವೀನರಾಗಿ ಅಬ್ದುಲ್ ಹಮೀದ್ ಅಳಿಕೆ ಹಾಗೂ ಕೋ ಆರ್ಡಿನೇಟರ್ ಆಗಿ ಅಬ್ದುಲ್ ಅಝೀಝ್ ಲತೀಫಿ, ಅಥಿತಿ ನಿರ್ವಹಣಾ ಚೇರ್ಮ್ಯಾನಾಗಿ ಅಲಿ ಕುಳೂರು ಹಾಗೂ ಕನ್ವೀನರಾಗಿ ಸೈಫುದ್ದೀನ್ ಪಟೇಲ್, ಸ್ಟೇಜ್ ನೀರ್ವಾಹಕರಾಗಿ ಅಬ್ದುಲ್ ರಹೀಮ್ ಹಾಗೂ ಮೂಸಾ ಹಾಜಿ ಬಸರ, ಟ್ರಾನ್ಸ್ಪೋರ್ಟ್ ಚೇರ್ಮ್ಯಾನಾ ಗಿ ಮಜೀದ್ ಮಂಜನಾಡಿ ಹಾಗೂ ಕನ್ವೀನರಾಗಿ ಜಮಾಲ್ ಸುಳ್ಯ, ಸ್ವಯಂ ಸೇವಕ ವಿಭಾಗದ   ಕನ್ವೀನರಾಗಿ ಇರ್ಷಾದ್ ಕೊಂಡಂಗೇರಿ ಹಾಗೂ ಜೋಯಿನ್ ಕನ್ವೀನರಾಗಿ ಆಸಿಫ್ ಸಜಿಪ, ಆಹಾರ ಸರಬರಾಜು ಚೇಯರ್ಮ್ಯಾನಾಗಿ ಖಾಸಿಂ ಮದನಿ ತೆಕ್ಕಾರು ರವರನ್ನು ನೇಮಿಸಲಾಯಿತು. 

ಸಮಾರಂಭಕ್ಕೆ ಆಗಮಿಸಿದ ಗಣ್ಯ ಅಥಿತಿಗಳನ್ನು ಶರೀಫ್ ಹೊಸ್ಮಾರ್ ಸ್ವಾಗತಿಸಿದರು. ರಫೀಖ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ ಅಬ್ದುರ್ರಶೀದ್ ಪಡೀಲ್ ಧನ್ಯವಾದವಿತ್ತರು.

Read These Next