ದುಬೈ: ಆಗಸ್ಟ್ 18ರಂದು ಕೆಸಿಎಫ್ ವತಿಯಿಂದ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸರ್ವ ಧರ್ಮೀಯರ "ಸ್ನೇಹ ಮಿಲನ"

Source: kcf dubai | By Arshad Koppa | Published on 14th August 2017, 7:41 AM | Gulf News | Special Report | Guest Editorial |

ದುಬೈ : ಭವ್ಯ ಭಾರತದ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್  (ಕೆಸಿಎಫ್) ದುಬೈ ವತಿಯಿಂದ "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋಷ ವಾಕ್ಯ ದೊಂದಿಗೆ ಸರ್ವ ಧರ್ಮೀಯರ ಸ್ನೇಹ ಮಿಲನ ಸಮಾವೇಶ ನಡೆಯಲಿದೆ.

ಆಗಸ್ಟ್ 18 ನೇ ಶುಕ್ರವಾರ ಸಂಜೆ 7:00 ಕ್ಕೆ ದುಬೈ ದೇರಾ ಸಿಟಿ ಸೆಂಟರ್ ಸಮೀಪದ ಸಿಟಿ ಸೂಟ್ ಹೋಟೆಲ್ ಸಭಾಂಗಣದಲ್ಲಿ ಜರಗಲಿದೆ.

2013 ನೇ ಫೆಬ್ರವರಿ ತಿಂಗಳಲ್ಲಿ ಚಾಲ್ತಿಗೆ ಬಂದ ಅನಿವಾಸಿ ಕನ್ನಡಿಗರ ಸಾಂಸ್ಕೃತಿಕ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿಸಿಸಿ ಹಾಗೂ ಮಲೇಷ್ಯಾ ಲಂಡನ್ ರಾಷ್ಟ್ರಗಳಲ್ಲಿ ಹದಿಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರನ್ನು ಒಳಗೊಂಡಿದೆ.

ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ರಂಗದಲ್ಲಿ ಅನೇಕ ಜನಪರ ಸೇವೆಗಳನ್ನು ಸಲ್ಲಿಸಿದ ಕೆಸಿಎಫ್ ಸಂಘಟನೆಯ ಮುಖವಾಣಿ "ಗಲ್ಫ್ ಇಶಾರ" ಕನ್ನಡ ಮಾಸ ಪತ್ರಿಕೆ ಯನ್ನು ಹೊರ ತರುವ ಮೂಲಕ ರಾಷ್ಟ್ರದ ಹೊರಗೆ ಆವೃತ್ತಿ ಹೊಂದಿರುವ ಕನ್ನಡದ ಏಕೈಕ ಪತ್ರಿಕೆ ಎಂಬ ಹೆಗ್ಗಳಿಕೆ ಪಡೆದಿದೆ. 

ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಹಾಗೂ ರಾಷ್ಟ್ರದ ಜಾತ್ಯಾತೀತ ನಿಲುವಿನ ಉಳಿವಿಗಾಗಿ ಕಳೆದ ಮೂರು ವರ್ಷಗಳಿಂದ ಸ್ವಾತಂತ್ರೋತ್ಸವದ ಪ್ರಯುಕ್ತ  ಸಂಘಟನೆಯು ದೇಶ ಪ್ರೇಮ,ಸ್ನೇಹ ಸಂಗಮ ಗಳನ್ನು ನಡೆಸುತ್ತಾ ಬಂದಿದೆ.

ಇದೀಗ ಈ ವರ್ಷವು "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋಷಣೆಯೊಂದಿಗೆ ಸರ್ವ ಧರ್ಮೀಯರನ್ನು ಆಹ್ವಾನಿಸಿ "ಸ್ನೇಹ ಮಿಲನ" ಕಾರ್ಯಕ್ರಮವನ್ನು ಆಯೋಜಿಸಿದೆ.

ಸಾಮಾಜಿಕ ಮುಂದಾಳು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ರಾದ ಅಬ್ದುರ್ರಝಾಖ್ DEWA ರವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಮಹಾ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ಸಮಾರಂಭವನ್ನು ಉದ್ಘಾಟಿಸುವರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಸಂದೇಶ ಭಾಷಣ ಮಾಡುವರು.

ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜ,ಕೆಸಿಎಫ್ ಯುಎಇ ರಾಷ್ಟ್ರಾಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ,ಕರ್ನಾಟಕ  ಎನ್.ಆರ್.ಐ ಫೋರಂ ಯುಎಇ ಅಧ್ಯಕ್ಷ ಶ್ರೀ ಪ್ರವೀಣ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.

ಶಾರ್ಜ ಕರ್ನಾಟಕ ಸಂಘದ ಪೋಷಕರಾದ ಮಿ.ಮಾರ್ಕ್ ಡೆನ್ನಿಸ್ ಡಿಸೋಜ ,ದುಬೈ ಕರ್ನಾಟಕ ಸಂಘ ಉಪಾಧ್ಯಕ್ಷ ಕೆ.ಆರ್ ತಂತ್ರಿ,ಮಂಗಳೂರು ಕೊಂಕಣಿ ಸಮಿತಿಯ ಜೇಮ್ಸ್  ಮೆಂಡೋನ್ಸ,ಕೆಸಿಎಫ್ ಯುಎಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಕೊಡಗು,ಶಾರ್ಜ ಕರ್ನಾಟಕ ಸಂಘ ಅಧ್ಯಕ್ಷ ಸುಗಂದ್ರಾಜ್ ಬೇಕಲ್,ಮೊಗವೀರಾಸ್ ದುಬೈಯ ಬಾಲಕೃಷ್ಣ ಸಾಲ್ಯಾನ್,ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಇಲಾಖೆಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ,ಕಾವೇರಿ ಟ್ರೇಡಿಂಗ್ ವಾಣಿಜ್ಯ ಉದ್ಯಮಿ ಶ್ರೀ ಅರುಣ್ ಕಾರಿಯಪ್ಪ ,ದುಬೈ ಗೌಡ ಕನ್ನಡಿಗರು ಸಂಘದ ಮಲ್ಲಿಕಾರ್ಜುನ ಗೌಡ,ದುಬೈ ಸುನ್ನೀ ಸಂಘ ಸಂಸ್ಥೆಗಳ ಮುಂದಾಳು ಅಶ್ರಫ್ ಹಾಜಿ ಅಡ್ಯಾರು,ದುಬೈ ತುಳು ಕೂಟದ ಸತೀಷ್ ಶೆಟ್ಟಿ ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸುವರು.

ಅಮೇರಿಕಾದ ಅಲಬಾಮದಲ್ಲಿ, ನಾಸಾ ಯುಎಸ್ ಸ್ಪೇಸ್ ಅಕಾಡೆಮಿ ವಿಂಗ್ಸ್ ಅಧೀನದಲ್ಲಿ ಆಯೋಜಿಸಲ್ಪಟ್ಟ ಯುಎಸ್ SPACE AND ROCKETRY PROGRAMME ತರಬೇತು ಶಿಬಿರದಲ್ಲಿ ವಿಶೇಷ ಅಭ್ಯರ್ಥಿಯಾಗಿ ಪಾಲ್ಗೊಳ್ಳಲು UAE ಯಿಂದ ಆರಿಸಲ್ಪಟ್ಟು ಪ್ರಥಮ ಪದಕ ಪಡೆದ ಮಾಸ್ಟರ್ ತಸ್ದೀಕ್ ಅಬ್ದುಲ್ ರಝಾಕ್ ರವರ ಪ್ರತಿಭೆಯನ್ನು ಗುರುತಿಸಿ ವೇದಿಕೆಯಲ್ಲಿ ಸಂಘಟನೆ ವತಿಯಿಂದ  ಸನ್ಮಾನಿಸಲಾಗುವುದು.

ಜಾತಿ,ಧರ್ಮದ ಅಡೆತಡೆ ಗಳಿಲ್ಲದೆ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರನ್ನು ಸ್ಮರಿಸುವ "ಸ್ನೇಹ ಮಿಲನ" ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡಿಗರೆಲ್ಲರೂ ಪ್ರೀತಿ ಪೂರ್ವಕ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಿಕಾ ಸಭೆಯಲ್ಲಿ ಭಾಗವಹಿಸಿದವರು.                                                                                                                                                                 1. ಅಬ್ದುಲ್ ರಝಾಕ್ DEWA - ಅಧ್ಯಕ್ಶರು, ದುಬೈ KCF ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿ
2. ಮೆಹ್ ಬೂಬ್  ರಹ್ಮಾನ್ ಸಖಾಫಿ ಕಿನ್ಯ - ಕಾರ್ಯಾಧ್ಯಕ್ಷರು, ದುಬೈ KCF ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿ
3. ಅಬ್ದುಲ್ ಶುಕೂರ್ ಮನಿಲಾ – ಉಪಾಧ್ಯಕ್ಷರು, ದುಬೈ KCF ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿ
4. ಅಬ್ದುಲ್ ಜಲೀಲ್ ನಿಝಾಮಿ – ಅಧ್ಯಕ್ಶರು, KCF UAE ಶಿಕ್ಷಣ ವಿಬಾಗ,
5. ಇಕ್ಬಾಲ್ ಕಾಜೂರ್ -  ಕಾರ್ಯದರ್ಶಿ, KCF UAE ಸಾಂತ್ವನ ವಿಬಾಗ
6. ಅಬ್ದುಲ್ ರಹೀಮ್ ಕೋಡಿ - ಕಾರ್ಯದರ್ಶಿ,  ದುಬೈ KCF ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿ
      7.Abdullah Musliyar Kudthamuger KCF Dubai North Zone.
8.Shahul Hameed Saqafi Kodagu KCF Dubai South Zone

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...