ದುಬೈ: ಕನ್ನಡಿಗರು ದುಬೈ ವತಿಯಿಂದ ಯಶಸ್ವೀ ಇಫ್ತಾರ್ ಕೂಟ

Source: kannadigaru dubai | By Arshad Koppa | Published on 24th June 2017, 8:23 AM | Gulf News | Guest Editorial |

ದುಬೈ : 23-07-2017:ಕನ್ನಡಿಗರು  ದುಬೈ ಸಂಘದ ವತಿಯಿಂದ ದೇರದಲ್ಲಿರುವ ಪರ್ಲ್ ಕ್ರೀಕ್ ಹೋಟೆಲಿನ ಸಭಾಂಗಣದಲ್ಲಿ ಯಶಸ್ವೀಯಾಗಿ ಸರ್ವ ಧರ್ಮ  ಇಫ್ತಾರ್ ಕೂಟ ಬಹಳ ವಿಜೃಂಭಣೆಯಿಂದ ನಡೆಯಿತ್ತು, ಇಫ್ತಾರ್ ಕೂಟಕ್ಕೆ ಸಾಮಜಿಕ ಧಾರ್ಮಿಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಹಲವು ನಾಯಕರು ಭಾಗಿಯಾದರು ,

ಉಪವಾಸ ಮುರಿದ ನಂತರ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡರು ಮುಖ್ಯ ಅಥಿತಿಗಳನ್ನು ಪರಿಚಯಿಸಿ ವೇದಿಕೆಗೆ ಬರಮಾಡಿ ಕೊಂಡರು , ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ಶ್ರೀ ವೀರೇಂದ್ರ ಬಾಬು ಅವರು ವಹಿಸಿದರು , ವೇದಿಕೆಯಲ್ಲಿ ಎಮ್ ಸ್ಕ್ವೇರ್ ಕಂಪನಿ ಮಾಲಿಕಾರಾದ ಶ್ರೀ ಮುಸ್ತಫಾ , ಆರ್ ಸಿ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕಾರದ ಶ್ರೀ ರವೀಶ್ ಗೌಡ ಮತ್ತು ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಹುಸೈನ್ ಸೋಮರಪೇಟೆ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುರಾನ್ ಸೂಕ್ತ ಪಠಿಸುವುದರ ಮೂಲಕ ಚಾಲನೆ ಮಾಡಲಾಯಿತ್ತು, ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮುಸ್ತಫಾ ಮತ್ತು ರವೀಶ್ ಗೌಡರು ಕನ್ನಡಿಗರು ದುಬೈ ಸಂಗಡಿಸಿದ ಈ ಸರ್ವ ಧರ್ಮ ಇಫ್ತಾರ್ ಕೂಟಕ್ಕೆ ಶುಭ ಹಾರೈಸಿ ಮನದಾಳದಿಂದ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು , ಪ್ರಸಕ್ತ ಭಾರತದ ಪರಿಸ್ಥಿಯಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮಗಳು ಬಹಳ ಅವಶ್ಯಕವಾಗಿದೆ ಎಂದು ನುಡಿದರು , ತದನಂತರ ಮಾತಾಡಿದ ಕೊಡಗು ಶಂಸುಲ್ ಉಲಮಾ ಕಾಲೇಜು ದುಬೈ ಸೆಕ್ರೇಟರಿ ಅಶ್ರಫ್ ಅವರು ರಂಜಾನ್ ಉಪವಾಸ ಸಂದೇಶ ಭಾಷಣ ಮಾಡಿದರು , ಉಪವಾಸ ತೆಗುದುಕೊಂಡರೆ ದೇಹಕ್ಕೆ ಆಗುವ ವೈಜ್ಞಾನಿಕ  ಅನುಕೂಲಗಳು ಮತ್ತು ರಂಜಾನ್ ತಿಂಗಳಲ್ಲಿ ಇತರ ಧರ್ಮೀಯರು ನಮ್ಮೊಂದಿಗೆ ಬೆರೆಯುವ ಕ್ಷಣಗಳನ್ನು ವಿವರಿಸಿದರು , ಪರಿಶುದ್ಧ ಖುರ್ಹಾನ್, ಬೈಬಲ್ ಮತ್ತು ಭಗವತ್ಗೀತೆಯಲ್ಲಿ ಎಲ್ಲಾ ಪರಸ್ಪರ ಸಾಹೋದರೆತೆಯನ್ನು ಭೋದಿಸಿದರು ಇಂದಿನ ಕಾಲಮಾನದಲ್ಲಿನ ಕೆಲವು ಘಟನೆಗಳು ನಿಜಾವಾಗಿಯೂ ಮನಸ್ಸಿಗೆ ಬೇಸರ ಉಂಟು ಮಾಡುವವು ಎಂದು ಬೇಸರ ವ್ಯಕ್ತಪಡಿಸಿದರು,

ಕಾರ್ಯಕ್ರಮದ ಕೊನೆಯಲ್ಲಿ ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು ಅವರು ಒಂದೆರಡು ಹಿತನುಡಿಗಳನ್ನು ನುಡಿದು ಆಗಮಿಸಿದ ಸರ್ವ ಮುಖ್ಯ ಅತಿಥಿಗಳಿಗೂ , ಆಗಮಿಸಿದ ಸರ್ವ ಜನಾಂಗ ಬಾಂಧವರಿಗೂ ಹಾಗೂ ಕನ್ನಡಿಗರು ದುಬೈ ಸಂಘದ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು ,

ಈ ಕಾರ್ಯಕ್ರಮಕ್ಕೆ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ಸದನ್ ದಾಸ್, ಸಮಿತಿ ಸದಸ್ಯರುಗಳಾದ ದೀಪಕ್ ಸೋಮಶೇಖರ್ , ಅರುಣ್ ಎಮ್ ಕೆ ಬೆಂಗಳೂರು, ವಿಧ್ಯಾದರ್ ಹೀರೇಮಠ್, ಶ್ರೀನಿವಾಸ್ ಅರಸ್ , ವಿನೀತ್, ರಫೀಕಲಿ ಕೊಡಗು ಮುಂತಾದವರು ಹಾಜರಿದ್ದರು,

 

ವರದಿ : ರಫೀಕಲಿ ಕುಂಡಂಡ ಕುಂಜಿಲ
 

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...