ದುಬೈ: ತನ್ನದೇ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾದ ಭಾರತೀಯ ಗೃಹಿಣಿ

Source: so news | By Arshad Koppa | Published on 19th July 2016, 8:38 AM | Gulf News |

ದುಬೈ, ಜು ೧೮: ನಗರದ ಅಲ್ ಕುಸೇಸ್ ಪ್ರದೇಶದಲ್ಲಿ ಫ್ಲಾಟ್ ಒಂದರಲ್ಲಿ ಕಳೆದ ಮೂರುವರ್ಷಗಳಿಂದ ತನ್ನ ಪತಿ ಹಾಗೂ ಮೂವರು ಮಕ್ಕಳೊಡನೆ ಸಂಸಾರ ನಡೆಸುತ್ತಿದ್ದ ಗೃಹಿಣಿಯೊಬ್ಬರು ತಮ್ಮ ಫ್ಲಾಟ್ ನಲ್ಲಿಯೇ ಸ್ನಾನಗೃಹದಲ್ಲಿ ನೇಣಿಗೆ ಶರಣಾದ ಘಟನೆ ವರದಿಯಾಗಿದೆ.

ಇಲ್ಲಿನ ಮಸ್ರಾಫ್ ಬಿಲ್ಡಿಂಗ್ ನ 302ನೇ ಫ್ಲಾಟ್ ನಲ್ಲಿ ಈ ಘಟನೆ ನಡೆದಿದ್ದು ಮೃತದೇಹವನ್ನು ಫಾರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. 

ಅಕ್ಕಪಕ್ಕದವರ ಪ್ರಕಾರ ಇವರು ಸುಖೀ ಸಂಸಾರ ನಡೆಸುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣ ಕಂಡುಬಂದಿಲ್ಲ. ಇವರ ಪತಿಯ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಇವರು ರಜೆಗಾಗಿ ಊರಿಗೆ ತೆರಳುವವರಿದ್ದರು. ಅಂದು ಕೆಲವು ಬಾಕಿ ಉಳಿದ ಕೆಲಸಗಳನ್ನು ಪೂರೈಸಲು ಮನೆಯಿಂದ ಹೊರಹೋಗಿದ್ದು ಹಿಂದಿರುಗಿದಾಗ ಮಕ್ಕಳು ಟೀವಿ ನೋಡುತ್ತಿದ್ದು ಗೃಹಿಣಿ ಸ್ನಾನಗೃಹದಲ್ಲಿದ್ದರು. ಎಷ್ಟು ಹೊತ್ತಾದರೂ ಹೊರಬರದ ಆಕೆಯನ್ನು ಹಲವು ಬಾರಿ ಬಾಗಿಲು ಬಡಿದರೂ ತೆರೆಯದ ಕಾರಣ ಬಳಿಕ ಬಾಗಿಲು ಒಡೆದು ನೋಡಿದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. 

ಪತಿ ಪತ್ನಿಯರ ನಡುವೆ ಯಾವುದೇ ವಿರಸ ಕಲಹ ಇಲ್ಲದಿದ್ದು ಆರ್ಥಿಕವಾಗಿಯೂ ಯಾವುದೇ ಕೊರತೆ ಇಲ್ಲದಿದ್ದ, ಯಾವುದೇ ಮಾನಸಿಕ ಖಿನ್ನತೆಯೂ ಇಲ್ಲದಿದ್ದ ಗೃಹಿಣಿಯ ಈ ನಿರ್ಧಾರ ಇನ್ನೂ ಅರ್ಥವಾಗದಿರುವ ನಿಗೂಢವಾಗಿದೆ. ಮಕ್ಕಳಿಗೆ ತಾಯಿಯ ಮರಣದ ಬಗ್ಗೆ ನಿಧಾನವಾಗಿ ಬಳಿಕವೇ ತಿಳಿಸಲಾಯಿತು. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.