ದುಬೈ:ಭಾರತೀಯ ದೂತಾವಾಸ ಕಟ್ಟಡದಲ್ಲಿ ಅನಾವರಣಗೊಂಡ ಮಹಾತ್ಮ ಗಾಂಧಿ ಪ್ರತಿಮೆ 

Source: so english | By Arshad Koppa | Published on 6th November 2016, 2:14 PM | Gulf News | Special Report | Don't Miss |

ದುಬೈ, ನ ೫: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಭಾರತೀಯ ದೂತಾವಾಸದ ಸಹಯೋಗದಲ್ಲಿ ಭಾರತೀಯ ದೂತಾವಾಸ ಕಟ್ಟಡದಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಭಾರತದ ರಾಯಭಾರಿ ಶ್ರೀ ಎಚ್ ಇ ಅನುರಾಗ್ ಭೂಷಣ್ ರೊಂದಿಗೆ ಹಲವಾರು ಗಣ್ಯರು ಮತ್ತು ಗಾಂಧಿ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ  ರಾಯಭಾರಿಗಳೊಂದಿಗೆ  NMC ಆಸ್ಪತ್ರೆಗಳ ಮುಖ್ಯಸ್ಥ ಡಾ ಬಿಆರ್ ಶೆಟ್ಟಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರಿನ ಕಾರ್ಯದರ್ಶಿ ಶ್ರೀ ಶಿವರಾಜ್,  ಇತಿಹಾಸಕಾರ ಮತ್ತು ಗಾಂಧಿವಾದಿ ವೇಮಗಲ್ ಸೋಮಶೇಖರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ದೀಪ ಬೆಳಗಿಸುವಿಕೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಯಭಾರಿಗಳು ಇಂದಿನ ದಿನಗಳಲ್ಲಿ ಗಾಂಧೀಜಿಯವರ ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ. ಇಂದಿನ ದಿನಗಳಲ್ಲಿ ಮಾನವೀಯತೆ ಮತ್ತು ಭ್ರಾತೃತ್ವದ ಅಸಹನೆ ಹೆಚ್ಚು ಕಂಡುಬರುತ್ತಿದೆ. ವಿಶ್ವದಲ್ಲಿ ತ್ಯಾಗ ಮತ್ತು ಶಾಂತಿಯ ಮೂಲಕ ಕ್ರೌರ್ಯವನ್ನು ಮೆಟ್ಟಿನಿಂತ ರಾಷ್ಟ್ರ ಭಾರತವೊಂದೇ ಆಗಿದೆ. ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯವರು ಭಾರತೀಯರಲ್ಲಿ ಒಗ್ಗಟ್ಟು ಹಾಗೂ ಸೌಹಾರ್ದತೆಯನ್ನು ಮೂಡಿಸಲು ಪ್ರೇರಣೆ ನೀಡಿದ್ದಾರೆ. ಗಾಂಧೀಜಿಯವರ ಜೀವನ ಪ್ರತಿ ಮನುಷ್ಯನಿಗೂ ಒಂದು ಮಾದರಿಯಾಗಿದ್ದು ಇಡಿಯ ವಿಶ್ವದ ಜನರು ಅನುಸರಿಸಬೇಕಾಗಿದೆ. ಇಂತಹ ಧೀಮಂತ ವ್ಯಕ್ತಿತ್ವವನ್ನು ಬಿಂಬಿಸುವ ಪ್ರತಿಮೆಯನ್ನು ವಿದೇಶದ ನೆಲದಲ್ಲಿ ಸ್ಥಾಪಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ದುಬೈಯಲ್ಲಿರುವ ಭಾರತೀಯ ದೂತಾವಾಸದಲ್ಲಿ ಒಂದು ಗಾಂಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಇದರಿಂದ ದೂತಾವಾಸಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಗಾಂಧಿಯವರ ಮತ್ತು ಅವರ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುವುದು ಎಂದು ತಿಳಿಸಿದರು. 


ಬಳಿಕ ಮಾತನಾಡಿ ಪದ್ಮಶ್ರೀ ಡಾ ಬಿಆರ್ ಶೆಟ್ಟಿ ಯವರು  ದುಬೈ ದೂತಾವಾಸದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಅನಾವರಣದ ಬಗ್ಗೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದರು. ನಮ್ಮ ಪ್ರಧಾನಿಯವರಾದ ಶ್ರೀ ಮೋದಿಯವರು ಜಾಗತಿಕ ದೇಶಗಳಿಗೆ ಭೇಟಿ ಕೊಡುತ್ತಿದ್ದ ಸಮಯದಲ್ಲಿ ಜಗತ್ತಿಗೇ ಗಾಂಧಿಯವರ ಮೌಲ್ಯವನ್ನು ಪಸರಿಸುತ್ತಿದ್ದಾರೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಅವರು ಅಬುಧಾಬಿಯ ಭಾರತೀಯ ಶಾಲೆಯಲ್ಲಿ ಮತ್ತು ಇಂಡಿಯನ್ ಮತ್ತು ಸೋಶಿಯಲ್ ಸೆಂಟರ್ ಕೇಂದ್ರದಲ್ಲಿಯೂ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ದೀಪಕ್ ಸೋಮಶೇಖರ ವಂದನಾರ್ಪಣೆ ಸಲ್ಲಿಸಿದರು. ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು. 
 

Read These Next

ಜ್ಞಾನದಾಹಿಗಳಿಗೆ ಜ್ಞಾನಾಮೃತ ಉಣ ಬಡಿಸುತ್ತಿರುವ ಅಂಜುಮನ್ ಸಂಸ್ಥೆಗೆ ಶತಮಾನೋತ್ಸವದ ಸಂಭ್ರಮ

ಭಟ್ಕಳ: ಕಳೆದ ನೂರು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ...

ವಿಚಾರವಾದಿಗಳ ಹತ್ಯೆ ಪ್ರಕರಣ; ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ ಕ್ರಿಮಿನಲ್ಸ್ ಗಳ ಕೃತ್ಯ; ಸಿಟ್ ತನಿಖೆಯಿಂದ ಬಹಿರಂಗ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ರನ್ನು 2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಹತ್ಯೆ ಮಾಡಿದ್ದರು. ಆದರೆ ...

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...