ದುಬೈ:ಡಿ.ಕೆ.ಎಸ್.ಸಿ. ಯು.ಎ.ಇ ವತಿಯಿಂದ ನವಂಬರ್ 24 ರಂದು  ಬೃಹತ್ ಮೀಲಾದ್ ಸಮಾವೇಶ.

Source: yusuf | By Arshad Koppa | Published on 18th October 2017, 7:43 AM | Gulf News |

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ರಾಷ್ಟ್ರಿಯ ಸಮಿತಿ ವತಿಯಿಂದ ಪ್ರತಿ ವರ್ಷ ಪ್ರವಾದಿ ( ಸ ಅ) ರವರ ಜನ್ಮ ತಿಂಗಳಲ್ಲಿ ಮೀಲಾದ್ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಕಳೆದ 19 ವರ್ಷಗಳಿಂದ ತಪ್ಪದೆ ಆಚರಿಸುತ್ತ ಬರುತ್ತಿದೆ. ಅದೇ ರೀತಿ ಈ ವರ್ಷವೂ ನವಂಬರ್ 24 ಶುಕ್ರವಾರ ಸಾಯಂಕಾಲ  ದೇರಾ ದುಬೈ ನಲ್ಲಿರುವ ಕ್ರೀಕ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ಸಮಾರಂಭದ ಮಖ್ಯ ಅತಿಥಿಗಳಾಗಿ ಕುಂಬೋಲ್  ತಂಘಳ್ ರವರು  ಹಾಗೂ ಇತರ ಧಾರ್ಮಿಕ ಸಾಮಾಜಿಕ ರಂಗದ ಪ್ರಮುಖರು ಭಾಗವಹಿಸಲಿದ್ದಾರೆ. ಸಮಾರಂಭವು ದಫ್, ವಿಶೇಷ ತಂಡದಿಂದ ಬುರ್ದಾ, ನಾತ್, ಮೌಲೀದ್ ಮಜಲೀಸ್ ನೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಈ ಕಾರ್ಯಕ್ರಮಗದಲ್ಲಿ ಡಿ.ಕೆ.ಎಸ್.ಸಿ ವತಿಯಿಂದ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ   ಸಂಘಟಿಸಿದ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಅದೀನದಲ್ಲಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ರಾಷ್ಟ್ರಿಯ ಸಮಿತಿ ಸಲಹೆಗಾರಾದ ಅಬೂಬಕ್ಕರ್ ಮದನಿ ಕೆಮ್ಮಾರ ರವರ  ದುಃವಾ ದೊಂದಿಗೆ ದೇರಾ ಎವರ್ ಪೈನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸ್ವಾಗತ ಸಮಿತಿ ರಚನಾ ಸಭೆಯನ್ನು ನಡೆಸಲಾಯಿತು. ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಯುಸೂಫ್ ಅರ್ಲಪದವು ಎಲ್ಲರನ್ನು ಸ್ವಾಗತಿಸಿ  ವಿಷಯ ಪ್ರಸ್ತಾಪಿಸಿದರು. ಮೀಲಾದ್ ಸಮಿತಿ ಛೇರ್ಮನ್ ಹಾಗಿ ಆಯ್ಕೆ ಗೊಂಡ ಜನಾಬ್  ಮುಹಮ್ಮದ್ ಶಕೂರ್ ಮನಿಲಾ ಮೀಲಾದ್ ಕಾರ್ಯಕ್ರಮದ ವಿವರವನ್ನು ಸವಿಸ್ತಾರವಾಗಿ ವಿವರಿಸಿದರು , ಪ್ರಸ್ತುತ ಸಭೆಯಲ್ಲಿ ರಾಷ್ಟ್ರಿಯ ಸಮಿತಿಯ ನಾಯಕರುಗಳಾದ ಹುಸೈನ್ ಹಾಜಿ ಕಿನ್ಯ, ಹಾಜಿ. ಹಸನಬ್ಬ ಕೊಲ್ನಾಡ್,  ಲತೀಫ್ ಮುಲ್ಕಿ ಮೊದಲಾದವರು ವೇದಿಕೆಯಲ್ಲಿ ಉಪಸಿತರಿದ್ದರು , ರಾಷ್ಟ್ರಿಯ ಸಮಿತಿ ಕಾರ್ಯದರ್ಶಿಗಳಾದ ಜನಾಬ್ ಕಮರುದ್ದೀನ್ ಗುರುಪುರ ಸ್ವಾಗತಿಸಿ ಹಾಜಿ ನವಾಝ್ ಕೋಟೆಕ್ಕಾರ್ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ  ಸ್ವಾಗತ ಸಮಿತಿಯನ್ನು ಈ ಕೆಳಗಿನಂತೆ  ರಚಿಸಲಾಯಿತು.
ಚೈರ್ಮಾನ್ : ಮುಹಮ್ಮದ್ ಶಕೂರ್ ಮನಿಲಾ .
ಜನರಲ್ ಕನ್ವಿನರ್ : ಹಾಜಿ ನವಾಝ್ ಕೋಟೆಕ್ಕಾರ್
ಕೋಶಾಧಿಕಾರಿ : ಹಸನ್ ಬಾವ  ಹಳೆಯಂಗಡಿ .
ಫೈನಾನ್ಸ್ ತಂಡ  : ಅಬ್ದುಲ್ ರಹಿಮಾನ್ ಸಜಿಪ , ಹಮೀದ್ ಸುಳ್ಯ , ನಜೀರ್ ಕಣ್ಣಂಗಾರ್ , ಶೇಖಬ್ಬ ಕಿನ್ಯ.
ಪ್ರಚಾರ ಸಮಿತಿ ಮತ್ತು ಮಾಧ್ಯಮ ವಿಭಾಗ : ಕಮರುದ್ದೀನ್ ಗುರುಪುರ , ಅಶ್ರಫ್ ಕಾನಾ,  ಕಮಾಲ್ ಅಜ್ಜಾವರ .
ಮಜಲೀಸ್ ನಿರ್ವಹಣೆ : ಅಬ್ದುಲ್ಲಾ ಮುಸ್ಲಿಯಾರ್ , ಅಬೂಬಕ್ಕರ್ ಮದನಿ ಕೆಮ್ಮಾರ , ಹಾಜಿ. ಅಬ್ದುಲ್ ರಹಿಮಾನ್ ಸಂಟ್ಯಾರ್.
ಕಾರ್ಯಕ್ರಮ ನಿಯಂತ್ರಣ ತಂಡ :  ಸಮದ್ ಬೀರಲಿ , ಸಮೀರ್ ಕೊಲ್ನಾಡ್ , ಇಬ್ರಾಹಿಂ ಕಳತ್ತೂರ್ , ಅಶ್ರಫ್ ಉಳ್ಳಾಲ್.

ಮುಹಮ್ಮದ್ ಶಕೂರ್ ಮನಿಲಾ Photo 4277
ಹಾಜಿ ನವಾಝ್ ಕೋಟೆಕ್ಕಾರ್ PHOTO 4278
ಹಸನ್ ಬಾವ  ಹಳೆಯಂಗಡಿ .PHOTO 4280

ವರದಿ:

S.Yousuf Arlapadavu
DKSC _ UAE
971 50 7240659

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.