ದುಬೈ:ಒಂದು ಮಹಿಳೆಗೆ ವಿದ್ಯಾಭ್ಯಾಸ ನೀಡಿದರೆ ಇಡೀ ಕುಟುಂಬಕ್ಕೆ ವಿದ್ಯಾಭ್ಯಾಸ ನೀಡಿದಂತೆ - ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ತುಂಬೆ

Source: yusuf | By Arshad Koppa | Published on 29th March 2017, 8:26 AM | Gulf News | Special Report |

ದುಬೈ. ದಕ್ಷಿಣ ಕನ್ನಡ ಜೆಲ್ಲೆಯ ಹಲವು ವಿದ್ಯಾ ಸಂಸ್ಥೆಗಳ ರೂವಾರಿಯೂ ಸ್ಥಾಪಕ ಅಧ್ಯಕ್ಷರೂ ಟ್ರಸ್ಟಿ ಯು ಆಗಿ ಕಾರ್ಯನಿರ್ವಹಿಸಿ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾದ ಅಲ್ಲದೆ ಮುಸ್ಲಿಂ ಸೆಂಟ್ರಲ್ ಕಮಿಟಿ, ಪುತ್ತೂರು, ಬಂಟ್ವಾಳ, ಮಂಗಳೂರು ಸೀರತ್ ಕಮಿಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮುದಾಯದ ಸಂಘಟನೆ ಗೆ ನೇತೃತ್ವವನ್ನು ನೀಡುತ್ತಾ ಬರುತ್ತಿದ್ದ ಭಾರತ ಸರ್ಕಾರದ ಅಧ್ಯಕ್ಷರಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರಿಂದ ಅಲ್ಲದೆ ವಿವಿಧ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸನ್ಮಾನಿತರಾದ ಅಲ್ಲದೆ ಡಾಕ್ಟರೇಟ್ ಪದವಿಯನ್ನು ಪಡೆದು ಕರ್ನಾಟಕ ರಾಜ್ಯದ ಹೆಸರುವಾಸಿ ಸಮಾಜ ಸೇವಕರು, ಅಂತರಾಷ್ಟ್ರೀಯ ಹೆಸರುವಾಸಿ ಉದ್ಯಮಿಯು ಆದ ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ತುಂಬೆ ರವರನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಯು.ಎ.ಇ ವತಿಯಿಂದ ಅಜ್ಮಾನ್ ಮೊಯುದ್ದೀನ್ ವುಡ್ ವರ್ಕ್ಸ್ ನ ಸಭಾಂಗಣದಲ್ಲಿ ಸ್ಮರಣಿಕೆ ನೀಡಿ ಸಾಲು ಹೊದಿಸಿ ಸನ್ಮಾನಿಸಲಯಿತು.

ಇದೇ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಹಾಗೂ ಅಲ್ ಇಹ್ಸಾನ್ ವಿದ್ಯಾ ಸಮುಚ್ಛಯದ ಕಿರು ಡಾಕಿಮೆಂಟ್ರಿ ಯನ್ನು ವೀಕ್ಷಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ. ಅಹಮದ್ ಹಾಜಿ ಯವರು ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡ ಡಿ.ಕೆ.ಎಸ್.ಸಿ ಸಂಘಟನೆಗೆ ಅಭಿನಂದನೆ ಸಲ್ಲಿಸುತ್ತಾ ತಾವು ಸಮುದಾಯದ ವಿದ್ಯಾಭಾಸಕ್ಕಾಗಿ  ಮಾಡುತ್ತಿರುವ ಸೇವೆಯನ್ನು ಪ್ರಶಸಿಸುವುದರೊಂದಿಗೆ ಒಂದು ಮಹಿಳೆಗೆ ವಿದ್ಯೆ ಕಲಿಸಿದರೆ ಇಡೀ ಕುಟುಂಬಕ್ಕೆ ವಿದ್ಯಾಭ್ಯಾಸ ನೀಡಿದಂತೆ ಎಂಬ ಮಾತಿನೊಂದಿಗೆ ತಾವು ತಮ್ಮ ಯೋಜನೆಯಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದರು.   ಕಾರ್ಯಕ್ರಮದಲ್ಲಿ ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ರವರ ಪುತ್ರರೂ ಅಜ್ಮಾನ್ ಮೊಯುದ್ದೀನ್ ವುಡ್ ವರ್ಕ್ಸ್ ಇದರ ಮೆನೇಜಿಂಗ್ ಡೈರೆಕ್ಟರ್ ಡಿ.ಕೆ.ಎಸ್.ಸಿ ಯ ಹಿತೈಷಿಯೂ ಆದ ಬಿ.ಎಂ.ಅಶ್ರಫ್ ತುಂಬೆ ರವರು ಅತಿಥಿಗಳಾಗಿ ಭಾಗವಹಿಸಿದರು.  ಈ ಸಮಾರಂಭವು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್  ಸ್ವಾಗತಿಸಿ  ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಹಾಜಿ.ಇಸ್ಮಾಯಿಲ್ ಕಿನ್ಯ (ಸೌದಿ ಅರೇಬಿಯಾ) ರವರು ಡಿ.ಕೆ.ಎಸ್.ಸಿ ಹಾಗೂ ಅದರ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ನ ಬಗ್ಗೆ ವಿವರಿಸಿದರು. ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಹಾಜಿ.ಎಂ.ಇ.ಮೂಳೂರು ರವರು ಪ್ರಾರಂಭವಾಗಲಿರುವ ಅಲ್ ಇಹ್ಸಾನ್ ಮಹಿಳಾ ಕಾಲೇಜು ಗೆ ಕೆಲವೊಂದು ಅಗತ್ಯದ ಬಗ್ಗೆ ಸಭೆಯಲ್ಲಿ ವಿವರಿಸಿದರು. ಈ ಸಂದರ್ಭದಲ್ಲಿ   ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ, ಹಾಜಿ. ಅಬ್ದುಲ್ಲಾ ಬೀಜಾಡಿ, ಸಲಹೆಗಾರರಾದ ಹಾಜಿ.ಹಸನಬ್ಬ ಕೊಳ್ನಾಡು, ಸೆಂಟ್ರಲ್ ಕಮಿಟಿ ಸದಸ್ಯರಾದ ಹಾಜಿ.ಜಮಾಲ್ ಕಣ್ಣಂಗಾರ್, ಇ.ಕೆ.ಇಬ್ರಾಹಿಂ ಕಿನ್ಯ, ದೇರಾ ಯುನಿಟ್ ಕೋಶಾಧಿಕಾರಿ ಶಕೂರು ಮಣಿಲ, ಅಲ್ ಗ್ವಿಸಸ್ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಅರಂತೋಡು, ಮೂಸಾ ಹಾಜಿ ಕಿನ್ಯ ಹಾಗೂ ಅಜ್ಮಾನ್ ಯುನಿಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ರವರು ಅತಿಥಿ ಪರಿಚಯದೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...