ದುಬೈ: ಉಸ್ತಾದ್ ಎಂ.ಎಸ್.ಎಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರಿಗೆ ಡಿ.ಕೆ.ಎಸ್.ಸಿ. ಯು.ಎ.ಇ ವತಿಯಿಂದ ಸನ್ಮಾನ 

Source: yusuf arlapadavu | By Arshad Koppa | Published on 20th December 2016, 8:12 AM | Gulf News |

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ಇದರ "ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್" ಸಮಿತಿ ಸಭೆಗೆ ಆಗಮಿಸಿದ ಕೆ.ಸಿ.ಎಫ್. ನೀಡಿದ ”ಶೈಖ್ ಝಾಯೆದ್ ಸಾಮರಸ್ಯ” ಪ್ರಶಸ್ತಿ ಸ್ವೀಕರಿಸಿದ ಹಾಗೂ ಡಿ.ಕೆ.ಎಸ್.ಸಿ ಇದರ ೨೦ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕರಣಕರ್ತರೊಬ್ಬರಾದ ಕನ್ನಡ ವಾಗ್ಮಿ, ಬರಹಗಾರ ಹಾಗೂ ಕೆಸಿಎಫ್ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಎಂ.ಎಸ್.ಎಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರನ್ನು ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ  ಜನಾಬ್.ಲತೀಫ್ ಮುಲ್ಕಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಹೆಜಮಾಡಿ ,"ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್"  ಕನ್ವಿನರ್ ಎಸ್.ಯೂಸುಫ್ ಅರ್ಲಪದವು , ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಸದಸ್ಯರಾದ ಜಮಾಲ್ ಕಣ್ಣಂಗಾರ್, ಡಿ.ಕೆ.ಎಸ್.ಸಿ. ಶಾರ್ಜಾ ಯುನಿಟ್ ಅಧ್ಯಕ್ಷರಾದ ಬಷೀರ್ ಕಾಪಿಕ್ಕಾಡ್, ಮಿಲಾದ್ ಸ್ವಾಗತ ಸಮಿತಿ ಚೆಯರ್ಮೆನ್ ಆದ ಶಕೂರು ಮನಿಲಾ ರವರು ಸಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಉಸ್ತಾದ್ ರವರು ಡಿ.ಕೆ.ಎಸ್.ಸಿ ಸಂಘಟನೆ ಹಾಗೂ ಅದರ ಅಧೀನ ಸಂಸ್ಥೆ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಅಲ್ಲದೆ ೨೦ ನೇ ವಾರ್ಷಿಕ ಸಮ್ಮೇಳನ ದ ಯಶಸ್ವಿ ಕಾರ್ಯಕ್ರಮ ದ ಬಗ್ಗೆ ವಿವರಿಸಿದರು. ಸಭೆಯಲ್ಲಿ ಡಿ.ಕೆ.ಎಸ್.ಸಿ ನಾಯಕರಾದ  ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್,  ಇಸ್ಮಾಯಿಲ್ ಬಾಬಾ ಮೂಳೂರು,  ಶೈಫುದ್ದೀನ್ ಪಟೇಲ್,  ಅಶ್ರಫ್ ಸತ್ತಿಕಲ್,  ಬದ್ರುದ್ದೀನ್ ಅರಂತೋಡ್,  ನಜೀರ್ ಕಣ್ಣಂಗಾರ್, ಸಮೀರ್ ಕೊಳ್ನಾಡ್, ಅಬ್ದುಲ್ ರಹಿಮಾನ್ ಸಜಿಪ, ಇಬ್ರಾಹಿಂ ಅಗ್ನಾಡಿ ದುಬಾಲ್,  ಹಾಜಿ.ನವಾಜ್ ಕೋಟೆಕ್ಕಾರ್, ರಫೀಕ್ ಮುಲ್ಕಿ , ಅಬ್ದುಲ್ಲಾ ಪೆರುವಾಯಿ, ಅಬ್ಬಾಸ್ ಪಾಣಾಜೆ, ರಪೀಕ್ ಸಂಪ್ಯ, ಅಮಾನುಲ್ಲಾ ಕುಂದಾಪುರ, ಉಮ್ಮರ್ ಪಾಣಾಜೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಲತೀಫ್ ಮುಲ್ಕಿ ವಹಿಸಿದರು. ಇಕ್ಬಾಲ್ ಹೆಜಮಾಡಿ ಸ್ವಾಗತಿಸಿ  ಕಮಲ್ ಅಜ್ಜಾವರ ಕಾರ್ಯಕ್ರಮ ನಿರ್ವಹಿಸಿ ಉಸ್ತಾದ್ ರವರ ದುವಾ ದೊಂದಿಗೆ  ಕಮರುದ್ದೀನ್ ಗುರುಪುರ ಧನ್ಯವಾದ ಸಮರ್ಪಿಸಿದರು. 

Read These Next