ದುಬೈ:ಪ್ರವಾದಿಯೆಡೆಗೆ ಮರಳಿದರೆ ಮಾತ್ರ ಐಕ್ಯತೆ ಸಾರ್ಥಕ, KSWA ಯುಎಇ ಸಮಿತಿಯ ಮೀಲಾದ್ ಸಮಾವೇಶದಲ್ಲಿ ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ಕರೆ

Source: ರಿಯಾಝ್ ಕೊಂಡಂಗೇರಿ | By Arshad Koppa | Published on 27th December 2016, 8:20 AM | Gulf News | Guest Editorial |

ದುಬೈ: ವಿಶ್ವ ಶಾಂತಿಯ ಸಂದೇಶವಾಹಕರಾಗಿರುವ ಪ್ರವಾದಿ ಮುಹಮ್ಮದ್ (ಸ ಅ) ರವರ ನೈಜ ಜೀವನವನ್ನು ಅನುಸರಿಸಿ ಅದನ್ನು ಇತರರಿಗೆ ತಿಳಿಸಿಕೊಟ್ಟರೆ ಮಾತ್ರ ನಮ್ಮಲ್ಲಿ ಐಕ್ಯ ಬಲಗೊಳ್ಳಲಿದೆ ಎಂದು ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು ಕರೆ ನೀಡಿದರು, ದುಬೈನಲ್ಲಿ ನಡೆದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯುಎಇ ಸಮಿತಿಯ ಮೀಲಾದ್ ಸಮಾವೇಶದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಇಂದು ಮುಸ್ಲಿಮರೆಲ್ಲರೂ ಪ್ರವಾದಿ (ಸ ಅ) ರವರ ಜನ್ಮ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಸಡಗರದಿಂದ ಆಚರಿಸುವಾಗ ಕೆಲವೊಂದು ಕಡೆಗಳಲ್ಲಿ ಅದಕ್ಕೆ ವಿರೋಧ ವ್ಯಕ್ತವಾಗಿಟ್ಟುರುವುದು ಖಂಡನೀಯ, ಪ್ರವಾದಿ (ಸ ಅ) ರವರ ಜೀವನದಲ್ಲಿ ತೋರಿಸಿಕೊಟ್ಟ ನೈಜ ಮಾರ್ಗಕ್ಕೆ ಮರಳಿದರೆ ಮಾತ್ರ ಒಬ್ಬ ನಿಜವಾದ ಪ್ರವಾದಿ ಪ್ರೇಮಿಯಾಗಲು ಹಾಗೂ ನಮ್ಮಲ್ಲಿ ಪರಸ್ಪರ ಐಕ್ಯತೆ ಮೂಡಲು ಸಾಧ್ಯವಿದೆ ಎಂದು ಅವರು ಹೇಳಿದರು. 

    ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಕಾರ್ಯಕ್ರವನ್ನು ಉಧ್ಘಾಟಿಸಿದರು, ಕೊಡಗು ಜಿಲ್ಲೆಯ ಹಿರಿಯ ಸುನ್ನಿ ಉಮರಾ ನೇತಾರರೂ ಆದ ಕೊಡಗು ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಹಂಝ ಕೊಟ್ಟಮುಡಿ ಮಾತನಾಡಿ ಕೊಡಗಿನಲ್ಲಿ ವೆಲ್ಫೇರ್ ಸಮಿತಿಯು ಮಾಡುತ್ತಿರುವ ಸಾಂತ್ವನ ಕಾರ್ಯಗಳು ಶ್ಲಾಘನೀಯ ಮತ್ತು ಅತ್ಯವಶ್ಯಕ ಎಂದು ಹೇಳಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಜಲೀಲ್ ನಿಝಾಮಿ ಎಮ್ಮೆಮಾಡು ಸಮಾರಂಭಕ್ಕೆ ಶುಭ ಹಾರೈಸಿ ಮಾತನಾಡಿದರು. ಹಮೀದ್ ನಾಪೋಕ್ಲು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. 

    KSWA ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ನಾಪೋಕ್ಲು, ಹಿರಿಯರಾದ ಹಾರಿಸ್ ಉಸ್ತಾದ್ ಚಾಮಿಯಾಲ್, ಕೆಸಿಎಫ್ ದುಬೈ ಝೋನ್ ನಾಯಕರಾದ ಅಬ್ದುಲ್ ಅಝೀಝ್ ಲತೀಫಿ, ಮುಹಮ್ಮದ್ ಹಾಜಿ ಕೊಂಡಂಗೇರಿ, ಖಲೀಲ್ ಭಾಷಾ ಮಡಿಕೇರಿ, ಶಾಹುಲ್ ಹಮೀದ್ ಸಖಾಫಿ ಮಾದಾಪುರ, ಶರ್ಫುದ್ದೀನ್ ಕೊಳಕೇರಿ, ಇಬ್ರಾಹಿಂ ನಾಪೋಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಾರುಲ್ ಹುದಾ ಯುಎಇ ಸಮಿತಿ ಹೊರತಂದ 2017ನೇ ಸಾಲಿನ ಕ್ಯಾಲೆಂಡರ್ ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ರವರು ಉಸ್ಮಾನ್ ಹಾಜಿ ರವರಿಗೆ ನೀಡಿ ಬಿಡುಗಡೆಗೊಳಿಸಿದರು, ಸಯ್ಯದ್ ರವರಿಗೆ KSWA ಯುಎಇ ಸಮಿತಿಯ ಗೌರವಾರ್ಪಣೆ ಈ ಸಂದರ್ಭದಲ್ಲಿ ನಡೆಯಿತು, ಇಸ್ಮಾಯಿಲ್ ಸಖಾಫಿ ಹಾಗೂ ಹಂಝ ಕೊಟ್ಟಮುಡಿಯವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ರಿಯಾಝ್ ಕೊಂಡಂಗೇರಿ ಕಾರ್ಯಕ್ರವನ್ನು ನಿರೂಪಿಸಿದರು. KSWA ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ ಮೀಲಾದ್ ಸಮಿತಿ ಕನ್ವೀನರ್ ಇರ್ಷಾದ್ ಕೊಂಡಂಗೇರಿ ಕೊನೆಯಲ್ಲಿ ವಂದನಾರ್ಪಣೆ ನೆರವೇರಿಸಿದರು.   

    ಸಮಾರಂಭಕ್ಕೆ ಮೆರುಗು ತಂಡ ಮಕ್ಕಳ ಕಾರ್ಯಕ್ರಮ ಮತ್ತು ರಸಪ್ರಶ್ನೆ
    ಮೀಲಾದ್ ಸಮಾವೇಶದ ಅಂಗವಾಗಿ ಪುಟಾಣಿ ಮಕ್ಕಳು ನಡೆಸಿದ ಭಾಷಣ, ಹಾಡು ಮತ್ತು ಖುರ್-ಆನ್ ಪಾರಾಯಣ, ಹಾರಿಸ್ ಕೊಟ್ಟಮುಡಿ ನೇತೃತ್ವದಲ್ಲಿ ಸಭಿಕರಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮ ಯುಎಇಯ ವಿವಿಧ ಕಡೆಗಳಿಂದ ಆಗಮಿಸಿದ ಕೊಡಗಿನ ಅನಿವಾಸಿಗಳಿಗೆ ಊರಿನ ಮೀಲಾದ್ ಸಮಾರಂಭಗಳಲ್ಲಿ ಭಾಗವಹಿಸಿದ ಅದೇ ಅನುಭವ ಮೂಡಿತು. ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳಿಗೆ ಹಾಗು ರಸಪ್ರಶ್ನೆಯಲ್ಲಿ ವಿಜೇತರಾದ ಸಭಿಕರಿಗೆ ಬಹುಮಾನ ನೀಡಲಾಯಿತು.

    ವಾರ್ಷಿಕ ಮಹಾಸಭೆ ಹಾಗೂ ಮೌಲೂದ್ ಪಾರಾಯಣ 
    ಮೀಲಾದ್ ಸಮಾವೇಶಕ್ಕೆ ಮೊದಲು ಮೌಲೂದ್ ಪಾರಾಯಣ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು. ನಾಸರ್ ನಈಮಿ ಹಾಗು ನಾಸರ್ ಸಅದಿ ರವರು ಮೌಲೂದ್ ನೇತೃತ್ವ ನೀಡಿದರು. ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನಡೆಸಿದ ಸಾಂತ್ವನ ಹಾಗೂ ಸಾಮಾಜಿಕ ಕಾರ್ಯಗಳ ವರದಿಯನ್ನು ವಾಚಿಸಿ ಅಂಗೀಕರಿಸಲಾಯಿತು. ಹೊಸ ಸಮಿತಿಯ ಅಧ್ಯಕ್ಷರಾಗಿ ಅಬೂಬಕರ್ ಹಾಜಿ ನಾಪೋಕ್ಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮೂರ್ನಾಡು ಪುನರಾಯ್ಕೆಯಾದರು.  

    ವರದಿ: ರಿಯಾಝ್ ಕೊಂಡಂಗೇರಿ
    Ph: +971-505649129

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...