ದುಬೈ: ಡಿ.ಕೆ ಎಸ್.ಸಿ  ಶಾರ್ಜಾ ಘಟಕ ಇದರ 2016 - 17 ಸಾಲಿನ ಅಧ್ಯಕ್ಷರಾಗಿ  ಬಷೀರ್ ಕಾಪಿಕ್ಕಾಡ್ ಪುನರಾಯ್ಕೆ.

Source: yusuf arlapadavu | By Arshad Koppa | Published on 5th March 2017, 8:30 AM | Gulf News |

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಶಾರ್ಜಾ ಯುನಿಟ್  ಇದರ 18 ನೇ  ಮಹಾ ಸಭೆಯು ಜನಾಬ್.ಅಶ್ರಫ್ ಮಂಜೇಶ್ವರ  ರವರ ನಿವಾಸದಲ್ಲಿ  ಯುನಿಟ್ ಅಧ್ಯಕ್ಷರಾದ  ಜನಾಬ್. ಬಷೀರ್ ಕಾಪಿಕ್ಕಾಡ್  ರವರ ಅಧ್ಯಕ್ಷತೆಯಲ್ಲಿ  ಸಯ್ಯದ್ ತ್ವಾಹ  ಭಾಪಕಿ ತಂಘಳ್ ರವರ ನೇತೃತ್ವದಲ್ಲಿ  ಬದ್ರ್ ಮೌಲೀದ್ ಪಾರಾಯಣ ದೊಂದಿಗೆ ನಡೆಯಿತು.   ಸಭೆಯಲ್ಲಿ ಯುನಿಟ್ ಉಸ್ತುವಾರಿಯಾಗಿ ಆಗಮಿಸಿದ ರಾಷ್ಟೀಯ ಸಮಿತಿ ಉಪಾಧ್ಯಕ್ಷರೂ ಆದ ಜನಾಬ್. ಹಾಜಿ.ಎಂ.ಇ ಮೂಳೂರು  ರವರು  ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಜನಾಬ್.ಯೂಸುಫ್ ಅರ್ಲಪದವು ರವರು ನೂತನ ಸಮಿತಿಗೆ ಶಭ ಹಾರೈಸಿದರು. ನಂತರ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಸಭಾಧ್ಯಕ್ಷರಾದ ಜನಾಬ್. ಬಷೀರ್ ಕಾಪಿಕಾಡ್ ರವರು ಮಾತನಾಡಿ ಸುನ್ನಿ ಆದರ್ಶ ಹಾಗೂ ಆಶಯಗಳಿಗೆ ಬದ್ಧರಾಗಿದ್ದುಕೊಂಡು ಸಂಸ್ಥೆಯ ಅಭಿವೃದ್ಧಿಗಾಗಿ ದುಡಿದು ಅಲ್ಲಾಹನ ಇಷ್ಟದಾಸರಾಗಿ ಜೀವಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಯುನಿಟ್ ಗೌರವಾದ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಯವರು ಶುಭಹಾರೈಸಿ ಮಾತನಾಡುತ್ತಾ ಡಿ.ಕೆ.ಎಸ್.ಸಿ ಯ ಕಾರ್ಯಚಟುವಟಿಕೆಯನ್ನು ವಿವರಿಸಿ ಸಮುದಾಯಕ್ಕಾಗುವ ಇದರ ಕೊಡುಗೆಯನ್ನು ವಿವರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಯುನಿಟ್ ನ ಹಿರಿಯ ಪ್ರವರ್ತಕರಾದ ಜನಾಬ್. ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್. ಅಬ್ದುಲ್ಲಾ ಪೆರುವಾಯಿ ಡಿ.ಕೆ.ಎಸ್.ಸಿ ಇದರ ಅನುಭವ ಗಳನ್ನು ಸಭೆಯಲ್ಲಿ ವಿವರಿಸಿದರು.

ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸಮಿತಿ ಪ್ರಮುಖರಾದ ಜನಾಬ್ ಹಾಜಿ ಅಬ್ದುಲ್ಲಾ ಬೀಜಾಡಿ, ಜನಾಬ್. ರಜಾಕ್ ಮುಟಿಕಲ್ , ಜನಾಬ್. ನಜೀರ್ ಕಣ್ಣಂಗಾರ್ ಹಾಗು ಡಿ.ಕೆ.ಎಸ್.ಸಿ ಶಾರ್ಜಾ ಯುನಿಟ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದ ಜನಾಬ್.ಅಬ್ದುಲ್ ಖಾದರ್ ಮಂಗಳೂರು  ಮೊದಲಾದವರು ಆಗಮಿಸಿದ್ದರು. ಯುನಿಟ್ ಪ್ರಧಾನ ಕಾರ್ಯದರ್ಶಿ ಜನಾಬ್.  ಕಮರುದ್ದೀನ್ ಗುರುಪುರ ಸ್ವಾಗತಿಸಿ ಕಳೆದ ಸಾಲಿನ ವರದಿಯನ್ನು ಹಾಗು ಜನಾಬ್ ಉಮ್ಮರ್ ಪಾಣಾಜೆಯವರು ಲೆಕ್ಕಪತ್ರವನ್ನು ಮಂಡಿಸಿದರು.

2017 - 18 ರ ಸಾಲಿನ ನೂತನ ಸಮಿತಿ

ಗೌರವಾಧ್ಯಕ್ಷರು :  ಜನಾಬ್. ಅಬ್ದುಲ್ ಲತೀಪ್ ಮುಲ್ಕಿ

ಅದ್ಯಕ್ಷರು :  ಜನಾಬ್. ಬಷೀರ್ ಕಾಪಿಕ್ಕಾಡ್

ಉಪಾಧ್ಯಕ್ಷರು : ಜನಾಬ್.ಅಶ್ರಫ್ ಮಂಜೇಶ್ವರ, ಜನಾಬ್. ಅಬ್ದುಲ್ಲಾ ಪೆರುವಾಯಿ, ಜನಾಬ್. ಅಬ್ಬಾಸ್ ಪಾಣಾಜೆ, ಜನಾಬ್. ಅಬ್ದುಲ್ ಜಬ್ಬಾರ್ ಇನೋಳಿ      

ಪ್ರದಾನ ಕಾರ್ಯದರ್ಶಿ : ಜನಾಬ್. ಕಮರುದ್ದೀನ್ ಗುರುಪುರ

ಜೊತೆ ಕಾರ್ಯದರ್ಶಿ : ಜನಾಬ್.ಶಾಕೀರ್ ಉಳ್ಳಾಲ, ಜನಾಬ್. ಶಕೀಲ್ ಕೃಷ್ಣಾಪುರ, ಜನಾಬ್.ಶಂಸುದ್ದೀನ್ ಕಣ್ಣಂಗಾರ್

 

ಕೋಶಾದಿಕಾರಿ : ಜನಾಬ್. ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್

ಸಂಚಾಲಕರು : ಜನಾಬ್. ಉಮ್ಮರ್ ಪಾಣಾಜೆ, ಜನಾಬ್. ರಜಾಕ್ ಕೋಡಿಮೂಲೆ, ಜನಾಬ್. ಬಷೀರ್ ಉಚ್ಚಿಲ, ಜನಾಬ್. ಬಷೀರ್ ಕೊಡಿ ಉಳ್ಳಾಲ

ಸಲಹೆಗಾರರು : ಜನಾಬ್. ಅಬೂಬಕ್ಕರ್ ಮದನಿ, ಜನಾಬ್. ಅಬ್ದುಲ್ ಖಾದರ್ ಮಂಗಳೂರು, ಜನಾಬ್. ಮಜೀದ್ ಕಾಪಿಕ್ಕಾಡ್ , ಜನಾಬ್. ಮುಹಮ್ಮದ್  ಕುಂಬ್ರ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Read These Next