ದುಬೈ:ಡಿ .ಕೆ .ಎಸ್. ಸಿ  ಅಲ್ ಖುಸೈಸ್ ಯುನಿಟ್ ಅಧ್ಯಕ್ಷರಾಗಿ ಜನಾಬ್.ಬದ್ರುದ್ದೀನ್ ಅರಂತೋಡು ಪುನರಾಯ್ಕೆ.

Source: yusuf arlapadavu | By Arshad Koppa | Published on 24th February 2017, 1:37 PM | Gulf News |

ದುಬೈ  : ದಕ್ಷಿಣ ಕರ್ಣಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಖುಸೈಸ್ ಯುನಿಟ್ ಇದರ  ಮಹಾಸಭೆ ಯು ಅಲ್ ಖುಸೈಸ್ ನಲ್ಲಿ ಇರುವ ಸುಮಯ್ಯ ರೆಸ್ಟೋರೆಂಟ್ ಇದರ ಸಭಾಂಗಣದಲ್ಲಿ  ಜನಾಬ್.ಬದ್ರುದ್ದೀನ್ ಅರಂತೋಡು  ರವರ ಅಧ್ಯಕ್ಷತೆಯಲ್ಲಿ  ಸಯ್ಯದ್ ತ್ವಾಹ  ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಅಸ್ಮಾಹುಲ್ ಉಸ್ನಾ ದಿಕ್ರ್ ಮಜ್ಲಿಸ್ ನೊಂದಿಗೆ ನಡೆಯಿತು. ಸಭೆಯಲ್ಲಿ  ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಹಾಗೂ ರಾಷ್ಟೀಯ ಸಮಿತಿ ಸಲಹೆಗಾರರಾದ ಜನಾಬ್.ಇಬ್ರಾಹಿಂ ಸಖಾಫಿ ಕೆದಂಬಾಡಿ  ರವರು ಸೂಕ್ತ ಸಲಹೆ ಹಾಗೂ ಸಂಘಟನೆ ಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ಯುನಿಟ್ ಉಸ್ತುವಾರಿಯಾಗಿ  ಆಗಮಿಸಿದ ಜನಾಬ್.ಸಮೀರ್ ಕಲ್ಲಾರೆ ರವರು  ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ನೂತನ ಸಮಿತಿಗೆ ಯುನಿಟ್ ಉಸ್ತುವಾರಿಗಳಾದ ಜನಾಬ್.ನಜೀರ್ ಕಣ್ಣಂಗಾರ್ ಹಾಗೂ  ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಜನಾಬ್.ಯೂಸುಫ್ ಅರ್ಲಪದವು  ಶುಭ ಹಾರೈಸಿದರು. ಸಭೆಯಲ್ಲಿ ರಾಷ್ಟೀಯ ಸಮಿತಿ ನಾಯಕರಾದ ಜನಾಬ್.ಇಬ್ರಾಹಿಂ ಹಾಜಿ ಕಿನ್ಯ , ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಹಾಜಿ ಅಬ್ದುಲ್ಲಾ ಬೀಜಾಡಿ , ಜನಾಬ್. ಅಬ್ಬಾಸ್ ಪಾಣಾಜೆ, ಜನಾಬ್. ಕಮಲ್ ಅಜ್ಜಾವರ  ರವರು ಉಪಸ್ಥಿತರಿದ್ದು     ಜನಾಬ್.ಶೇಖಬ್ಬ ಕಿನ್ಯ  ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಜನಾಬ್.ಅಭೂಬಕ್ಕರ್ ಈಶ್ವರಮಂಗಿಲ   ಧನ್ಯವಾದ ಸಮರ್ಪಿಸಿದರು.

2017 - 18 ರ ಸಾಲಿನ ನೂತನ ಸಮಿತಿ

ಗೌರವಾಧ್ಯಕ್ಷರು: ಜನಾಬ್.ಹುಸೈನ್ ಹಾಜಿ ಕಿನ್ಯ

ಸಲಹೆಗಾರರು : ಜನಾಬ್.ಇಬ್ರಾಹಿಂ ಸಖಾಫಿ ಕೆದಂಬಾಡಿ

ಅಧ್ಯಕ್ಷರು : ಜನಾಬ್.ಬದ್ರುದ್ದೀನ್ ಅರಂತೋಡು

ಉಪಾದ್ಯಕ್ಷರು : ಜನಾಬ್.ಅಬೂಬಕ್ಕರ್ ಈಶ್ವರಮಂಗಿಲ, ಜನಾಬ್.ಮುಸ್ತಾಕ್ ಕಿನ್ಯ

ಪ್ರಧಾನ ಕಾರ್ಯದರ್ಶಿ : ಜನಾಬ್.ಶೇಖಬ್ಬ ಕಿನ್ಯ

ಜೊತೆ ಕಾರ್ಯದರ್ಶಿ : ಜನಾಬ್.ಝುಬೈರ್ ಮಡಿಕೇರಿ , ಜನಾಬ್.ಸಿದ್ದೀಕ್ ಕಿನ್ಯ

ಕೋಶಾಧಿಕಾರಿ : ಜನಾಬ್.ಅಮಾನುಲ್ಲಾ ಕುಂದಾಪುರ

ಲೆಕ್ಕ ಪರಿಶೋದಕರು : ಜನಾಬ್.ರಹೀಮ್ ಕೋಡಿ

ಸಂಚಾಲಕರು : ಜನಾಬ್.ಬಾತಿಷಾ ಅರಂತೋಡು, ಜನಾಬ್.ಮುಹಮ್ಮದ್ ಇಮ್ತಿಯಾಜ್,  ಜನಾಬ್.ಸಿದ್ದೀಕ್ ಮೊಂಟೆಪದವು, ಜನಾಬ್.ಶಾಫಿ ಬೆಳ್ಳಾರೆ

ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು.
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...